ಜಡಗಣ್ಣ -ಬಾಲಣ್ಣರಿಗೆ ಗೌರವ ಸಲ್ಲಿಕೆ
ವಿಕ ಸುದ್ದಿಲೋಕ ಮುಧೋಳ
ಹಲಗಲಿಯ ವೀರರಾದ ಜಡಗಣ್ಣ ಮತ್ತು ಬಾಲಣ್ಣರ ಮೂರ್ತಿಗೆ ಮಾಜಿ ಸಂಸದ ವಿ.ಎಸ್ .ಉಗ್ರಪ್ಪ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ವಿಜಯಪುರದಿಂದ ಬೆಳಗಾವಿಗೆ ತೆರಳುವ ವೇಳೆ ಮುಧೋಳದಲ್ಲಿರುವ ಜಡಗಣ್ಣ ಮತ್ತು ಬಾಲಣ್ಣರ ಮೂರ್ತಿಗೆ ಗೌರವ ಸಮರ್ಪಿಸಿದರು. ಬಳಿಕ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಜತೆಗೆ ಮಾತುಕತೆ ನಡೆಸಿದರು.
ಅವಳಿ ಜಿಲ್ಲಾಕೆಎಂಎಫ್ ನಿರ್ದೇಶಕ ಲಕ್ಷತ್ರ್ಮಣ ಮಾಲಗಿ, ಸುಭಾಸ ಪಾಟೀಲ, ನಗರಸಭೆ ಮಾಜಿ ಸದಸ್ಯ ಭೀಮಶಿ ಮೇತ್ರಿ, ಆರಿಫ್ ಮೋಮಿನ್ , ಮಂಜುನಾಥ ಬಾವಿದಂಡಿ, ದ್ಯಾವಪ್ಪ ನಾಯಕ, ಶಿವನಗೌಡ ಪಾಟೀಲ, ಎಂ.ನರಸಿಂಹಯ್ಯ, ವೆಂಕಟೇಶ ನಾಯಕ ಇತರರಿದ್ದರು.
ಫೋಟೊ 20 ಎಂಡಿಎಲ್ 4
ಮುಧೋಳದಲ್ಲಿಜಡಗಣ್ಣ -ಬಾಲಣ್ಣ ಮೂರ್ತಿಗೆ ಮಾಜಿ ಸಂಸದ ವಿ.ಎಸ್ .ಉಗ್ರಪ್ಪ ಮಾಲಾರ್ಪಣೆ ಮಾಡಿದರು.

