ಜೂನ್ ಗೆ ಸಿನಿಮಾ ರಿಲೀಸ್ ಸರ್ಕಸ್
ಇಂಟ್ರೊ
ಬೇಸಿಗೆ ರಜೆಯ ಸದುಪಯೋಗಿಸಿಕೊಳ್ಳದ ಬಿಗ್ ಸಿನಿಮಾಗಳು ಜೂನ್ ನಲ್ಲಿತೆರೆಗೆ ಬರುವ ಪೈಪೋಟಿಯಲ್ಲಿವೆ. ಈ ವರ್ಷದ ಆರಂಭದಲ್ಲಿಬಿಡುಗಡೆಯಾಗಬೇಕಿದ್ದ ಬಹುನಿರೀಕ್ಷಿತ ಚಿತ್ರಗಳೆಲ್ಲವೂ ಜೂನ್ ಗೆ ಮುಂದೂಡಲ್ಪಟ್ಟಿವೆ. ಆದ್ದರಿಂದ ಈ ಜೂನ್ ಗೆ ದೊಡ್ಡ ಸಿನಿಮಾಗಳ ರಿಲೀಸ್ ಸರ್ಕಸ್ ಜೋರಾಗಿ ನಡೆಯಲಿದೆ.
ಕಿರಣ್ ಚಂದ್ರ
ರೈತರು ಕೃಷಿ ಕೆಲಸಗಳಲ್ಲಿಬಿಝಿ ಆಗಿರುವ ಜೂನ್ ತಿಂಗಳು ಪೋಷಕರು ತಮ್ಮ ಮಕ್ಕಳ ಸ್ಕೂಲ್ , ಕಾಲೇಜ್ ಶುಲ್ಕ ಎಂದು ಇರುವ ದುಡ್ಡನ್ನೆಲ್ಲಾಖಾಲಿ ಮಾಡಿಕೊಳ್ಳುವ ಮಾಸ ಕೂಡ ಹೌದು. ಹಾಗಾಗಿ ಐಪಿಎಲ್ ಮುಗಿಯಿತು ಎನ್ನುವ ಒಂದೇ ಕಾರಣಕ್ಕೆ ಜೂನ್ ನಲ್ಲಿಸಾಲು ಸಾಲಾಗಿ ಬಿಗ್ ಸಿನಿಮಾಗಳನ್ನು ಬಿಡುಗಡೆ ಮಾಡಿದರೆ ಯಾರಿಗೆ ಲಾಭ? ಆ ತಿಂಗಳ ಸಿನಿಮಾ ರಿಲೀಸ್ ರೇಸ್ ನೋಡಿದರೆ ಸಿನಿಪ್ರಿಯರಿಗೆ ಖಂಡಿತಾ ಅಚ್ಚರಿಯಾಗಲಿದೆ.
ಜೂನ್ ಗೆ ಬಿಡುಗಡೆ ಪರ್ವ
ಈ ವರ್ಷದ ಆರಂಭ ಹೇಗಿತ್ತೆಂದರೆ ಯಾವುದೇ ಚಿತ್ರ ಬಿಡುಗಡೆ ಮುಂದಕ್ಕೆ ಹೋದರೆ ಅದು ಜೂನ್ ನಲ್ಲಿಬರುವುದು ಖಚಿತವಾಗಿತ್ತು. ಅಂದರೆ ಮಾರ್ಚ್ 19ರಂದು ರಿಲೀಸ್ ಆಗಬೇಕಿದ್ದ ಬಹುನಿರೀಕ್ಷಿತ ‘ಟಾಕ್ಸಿಕ್ ’ ಸಿನಿಮಾ ಬಿಡುಗಡೆ ಯುದ್ಧದ ಕಾರಣದಿಂದಾಗಿ ಜೂನ್ 4ಕ್ಕೆ ಮುಂದಕ್ಕೆ ಹೋಗಿದೆ. ಆದರೆ ಇದರಿಂದ ಪ್ರದರ್ಶಕರು ಹಾಗೂ ಕೆಲವು ಸಣ್ಣ ಪುಟ್ಟ ಸಿನಿಮಾ ಮೇಕರ್ ಗಳ ಮಾರ್ಚ್ ತಿಂಗಳ ಬಿಸ್ನೆಸ್ ಗೆ ಹೊಡೆತ ಬಿದ್ದಿದೆ.
ಜನ ನಾಯಗನ್ ಮತ್ತು ಪೆದ್ದಿ
ಇನ್ನೊಂದೆಡೆ ಕಳೆದ ಜನವರಿಯಲ್ಲಿತೆರೆಗೆ ಬರಬೇಕಿದ್ದ ದಳಪತಿ ವಿಜಯ್ ಅಭಿನಯದ ‘ಜನ ನಾಯಗನ್ ’ ಸಿನಿಮಾ ಜೂನ್ ನಲ್ಲಿಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಈಗ ಅವರು ತಮಿಳುನಾಡು ಚುನಾವಣಾ ಕಣದಲ್ಲಿರುವುದರಿಂದ ಮತದಾನದ ನಂತರ ಅವರ ಸಿನಿಮಾ ರಿಲೀಸ್ ಆಗಲಿದೆ. ಇದೇ ಸಾಲಿಗೆ ರಾಮ್ ಚರಣ್ ತೇಜ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ಪೆದ್ದಿ’ ಕೂಡ ಸೇರ್ಪಡೆಯಾಗಿದೆ. ಇದೇ ಏಪ್ರಿಲ್ 30ರಂದು ತೆರೆಗೆ ಬರಬೇಕಿದ್ದ ಈ ಚಿತ್ರ ಜೂನ್ ಗೆ ಬಿಡುಗಡೆಯಾಗಲಿದ್ದು, ದಿನಾಂಕ ಇನ್ನೂ ಅಂತಿಮಗೊಂಡಿಲ್ಲ. ‘ಟಾಕ್ಸಿಕ್ ’, ‘ಜನ ನಾಯಗನ್ ’ ಸಿನಿಮಾಗಳ ಬಿಡುಗಡೆ ಮತ್ತು ಅದಕ್ಕೆ ಬರುವ ಪ್ರತಿಕ್ರಿಯೆಗಳನ್ನು ನೋಡಿ ಚಿತ್ರತಂಡವು ‘ಪೆದ್ದಿ’ಯನ್ನು ತೆರೆಗೆ ತರುವ ಪ್ಲ್ಯಾನ್ ಮಾಡಿದೆ.
ಯೋಜಿತ ಜೂನ್ ರಿಲೀಸ್
ಜೂನ್ ನಲ್ಲಿರಿಲೀಸ್ ಮಾಡುವುದಾಗಿ ಕೆಲವು ತಿಂಗಳುಗಳ ಹಿಂದೆಯೇ ಅನೌನ್ಸ್ ಮಾಡಿರುವ ಬಿಗ್ ಸಿನಿಮಾಗಳ ಪಟ್ಟಿಯೂ ದೊಡ್ಡದಿದೆ. ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಮಲ್ಟಿಸ್ಟಾರ್ ಸಿನಿಮಾ ‘ಜೈಲರ್ -2’ ಈ ಮೊದಲೇ ನಿಗದಿಯಾಗಿರುವಂತೆ ಜೂನ್ 12ರಂದು ಬಿಡುಗಡೆಯಾಗಲಿದೆ. ಇದಕ್ಕಾಗಿ ಚಿತ್ರತಂಡ ಹಗಲಿರುಳು ಶ್ರಮಿಸುತ್ತಿದ್ದು, ಶೂಟಿಂಗ್ ಜತೆಯಲ್ಲೇ ಪೋಸ್ಟ್ ಪ್ರೊಡಕ್ಷನ್ ಕೂಡ ನಡೆಯುತ್ತಿದೆ. ಟಾಲಿವುಡ್ ಬಹುನಿರೀಕ್ಷಿತ ಸಿನಿಮಾಗಳ ಪೈಕಿ ಒಂದಾಗಿರುವ ‘ವಿಶ್ವಂಭರ’ ಕೂಡ ಜೂನ್ ಕೊನೆಯ ವಾರದಲ್ಲಿತೆರೆ ಕಾಣಲಿದೆ. ಈ ಚಿತ್ರ ಕಳೆದ ವರ್ಷದ ಆರಂಭದಲ್ಲೇ ರಿಲೀಸ್ ಆಗಬೇಕಿತ್ತು.
ಬಾಲಿವುಡ್ ನಲ್ಲೂರಿಲೀಸ್ ಮ್ಯಾರಥಾನ್
ಹಿಂದಿ ಚಿತ್ರರಂಗದಲ್ಲಿಜೂನ್ 5ರಂದು ವರುಣ್ ಧವನ್ ನಟನೆಯ ‘ಹೇ ಜವಾನಿ ತೋ ಇಶ್ ್ಕ ಹೋನಾ ಹೈ’, ಜೂನ್ 19ರಂದು ‘ಕಾಕ್ ಟೇಲ್ 2’ ತೆರೆಗೆ ಬರಲಿದೆ. ಇದಾದ ನಂತರ ಜೂನ್ 26ರಂದು ಅಕ್ಷಯ್ ಕುಮಾರ್ ಅಭಿನಯದ ‘ವೆಲ್ಕಮ್ ಟು ಜಂಗಲ್ ’ ಸಿನಿಮಾ ರಿಲೀಸ್ ಆಗಲಿದೆ. ಆದ್ದರಿಂದ ಸಿನಿಪ್ರಿಯರ ಪಾಲಿಗೆ ಜೂನ್ ತಿಂಗಳು ಸಿನಿಮಾ ಸುಗ್ಗಿಯಂತಾಗಲಿದೆ ಎನ್ನಬಹುದು.

