ಪಹಲ್ಗಾಂ ಹತ್ಯಾಕಾಂಡ
ಪ್ರವಾಸಿಗರ ಸ್ವರ್ಗ ಪಹಲ್ಗಾಮ್ ನಲ್ಲಿಅಮಾಯಕ ಜೀವಗಳ ನೆತ್ತರು ಹರಿದು ಇಂದಿಗೆ(ಏಪ್ರಿಲ್ 22) ಒಂದು ವರ್ಷ ಸಂದಿದೆ. ಇದಕ್ಕೆ ಪ್ರತಿಯಾಗಿ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ‘ ಆಪರೇಷನ್ ಸಿಂದೂರ ’, ಆಧುನಿಕ ಭಾರತದ ರಕ್ಷಣಾ ನೀತಿಯಲ್ಲಿಒಂದು ಮೈಲಿಗಲ್ಲಾಗಿ ನಿಂತಿದೆ.
ಘಟನೆಯ ಹಿನ್ನೆಲೆ:
2025ರ ಏಪ್ರಿಲ್ 22ರಂದು ಪ್ರವಾಸಿಗರನ್ನೇ ಗುರಿಯಾಗಿಸಿ ಪಾಕಿಸ್ತಾನ ಪ್ರೇರಿತ ಉಗ್ರರು ಭೀಕರ ಗುಂಡಿನ ದಾಳಿ ಮಾಡಿ 25 ಪ್ರವಾಸಿಗರು ಹಾಗೂ ಓರ್ವ ಸ್ಥಳಿಯರನ್ನು ಕೊಂದು ಹಾಕಿದ್ದರು. ಮೃತರಲ್ಲಿಒಬ್ಬರು ನೇಪಾಳದ ನಾಗರಿಕರಾಗಿದ್ದರು. ಸುಮಾರು 20 ಮಂದಿ ಗಾಯಗೊಂಡಿದ್ದರು. ಈ ಘಟನೆಯನ್ನು 2008ರ ಮುಂಬಯಿ ದಾಳಿಯ ನಂತರ ಭಾರತದಲ್ಲಿನಾಗರಿಕರ ಮೇಲೆ ನಡೆದ ಅತ್ಯಂತ ಭೀಕರ ದಾಳಿ ಎಂದು ಪರಿಗಣಿಸಲಾಗಿದೆ.
ಆಪರೇಷನ್ ಮಹಾದೇವ್ : ಪ್ರವಾಸಿಗರ ಹತ್ಯೆಯ ಬೆನ್ನಲ್ಲೇ ಭಾರತೀಯ ಸೇನೆಯು ಉಪಗ್ರಹ ಫೋನ್ ಕರೆಯ ಜಾಡು ಹತ್ತಿ ಆಪರೇಷನ್ ಮಹಾದೇವ್ ಆರಂಭಿಸಿತು. ಇದರಲ್ಲಿಪಹಲ್ಗಾಂ ದಾಳಿಯ ಮಾಸ್ಟರ್ ಮೈಂಡ್ ಎನ್ನಲಾಗುವ ಸುಲೇಮಾನ್ ಶಾ ಸೇರಿದಂತೆ, ಮೂವರನ್ನು ಹತ್ಯೆ ಮಾಡಲಾಯಿತು.
ಆಪರೇಷನ್ ಸಿಂದೂರ: ಮೇ 7-8ರ ಮಧ್ಯರಾತ್ರಿ ಭಾರತೀಯ ವಾಯುಪಡೆ ಮತ್ತು ಭೂಸೇನೆಯು ಅತ್ಯಂತ ಸಂಘಟಿತವಾಗಿ ಗಡಿಯಾಚೆಗಿನ ಉಗ್ರರ ತರಬೇತಿ ಕೇಂದ್ರಗಳ ಮೇಲೆ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆ ಕೈಗೊಂಡಿತು. ಪೂಂಚ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಒಂಬತ್ತು ಪ್ರಮುಖ ಭಯೋತ್ಪಾದಕ ಅಡಗುತಾಣಗಳನ್ನು ಭಾರತೀಯ ಕ್ಷಿಪಣಿಗಳು ಕ್ಷಣಾರ್ಧದಲ್ಲಿಸುಟ್ಟುಹಾಕಿದವು.
ಸೇನೆಯ ಸಾಧನೆ: ಭಾರತದ ಮಿಂಚಿನ ದಾಳಿಯಲ್ಲಿಸುಮಾರು 100ಕ್ಕೂ ಹೆಚ್ಚು ಕುಖ್ಯಾತ ಭಯೋತ್ಪಾದಕರು ಹತರಾದರು. ಶತ್ರು ಪಾಳಯವು ಸುಧಾರಿಸಿಕೊಳ್ಳುವ ಮೊದಲೇ ಭಾರತೀಯ ವಾಯುಪಡೆಯ ರಫೇಲ್ ಮತ್ತು ಸುಖೋಯ್ ಯುದ್ಧ ವಿಮಾನಗಳು ಶತ್ರುಗಳ ವಾಯು ರಕ್ಷಣಾ ವ್ಯವಸ್ಥೆಯನ್ನು ಭೇದಿಸಿ ಯಶಸ್ವಿಯಾಗಿ ಹಿಂದಿರುಗಿದವು. ಇದು ಭಾರತದ ಮಿಲಿಟರಿ ಇತಿಹಾಸದಲ್ಲಿಅತ್ಯಂತ ನಿಖರ ಮತ್ತು ತಾಂತ್ರಿಕವಾಗಿ ಮುಂದುವರಿದ ದಾಳಿ ಎಂದು ದಾಖಲಾಗಿದೆ.
ಆಧುನಿಕ ತಂತ್ರಜ್ಞಾನದ ಬಲ: ಆಪರೇಷನ್ ಸಿಂದೂರದಲ್ಲಿಭಾರತವು ಮೊದಲ ಬಾರಿಗೆ ತನ್ನ ಸ್ವದೇಶಿ ಡ್ರೋನ್ ವ್ಯವಸ್ಥೆ ಮತ್ತು ಇಸ್ರೊ ಒದಗಿಸಿದ ರಿಯಲ್ -ಟೈಮ… ಉಪಗ್ರಹ ಮಾಹಿತಿಯನ್ನು ಪೂರ್ಣ ಪ್ರಮಾಣದಲ್ಲಿಬಳಸಿತ್ತು. ಇದು ಜಗತ್ತಿಗೆ ಭಾರತದ ‘ಆತ್ಮನಿರ್ಭರ’ ರಕ್ಷಣಾ ಶಕ್ತಿಯನ್ನು ಪರಿಚಯಿಸಿತು. ಆಪರೇಷನ್ ಸಿಂದೂರದ ಬಳಿಕವೂ ಭಾರತೀಯ ಸೇನೆ ಜಮ್ಮು-ಕಾಶ್ಮೀರದಲ್ಲಿಭಯೋತ್ಪಾದಕರ ವಿರುದ್ಧ ತೀವ್ರ ಕಾರ್ಯಾಚರಣೆಗಳನ್ನು ನಡೆಸಿ ಅನೇಕ ಭಯೋತ್ಪಾದಕರನ್ನು ಹೊಡೆದುರುಳಿಸಿದೆ.
---------
ಸೇನೆಯಿಂದ ಎಚ್ಚರಿಕೆ
ಭಾರತೀಯ ಸೇನೆಯ ಎಡಿಜಿ ಪಿಐ ವಿಭಾಗವು ಮಂಗಳವಾರ ತನ್ನ ಅಧಿಕೃತ ‘ಎಕ್ಸ್ ’ ಖಾತೆಯಲ್ಲಿಹಂಚಿಕೊಂಡಿರುವ ಪೋಸ್ಟ್ ಅತ್ಯಂತ ಕಠಿಣ ಸಂದೇಶವನ್ನು ರವಾನಿಸಿದೆ. ‘‘ಮಾನವೀಯತೆಯ ಗಡಿಗಳನ್ನು ಮೀರಿದಾಗ, ಅದಕ್ಕೆ ಸಿಗುವ ಪ್ರತ್ಯುತ್ತರವು ಅತ್ಯಂತ ನಿರ್ಣಾಯಕವಾಗಿರುತ್ತದೆ. ನ್ಯಾಯ ಒದಗಿಸಲು ಭಾರತವು ಎಂದಿಗೂ ಒಗ್ಗಟ್ಟಾಗಿ ನಿಲ್ಲುತ್ತದೆ. ಕೆಲವು ಗಡಿಗಳನ್ನು ಎಂದಿಗೂ ದಾಟಬಾರದು, ಭಾರತ ಯಾವುದನ್ನೂ ಮರೆಯುವುದಿಲ್ಲ’’ ಎಂದು ಬರೆಯುವ ಮೂಲಕ ಪಹಲ್ಗಾಂ ದುರ್ಘಟನೆ ಹಾಗೂ ಆಪರೇಷನ್ ಸಿಂದೂರವನ್ನು ನೆನಪಿಸಿದೆ.

