ಪವರ್ ಗ್ರಿಡ್ ನಲ್ಲಿಟ್ರೇನಿಗಳ ನೇಮಕ
ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿತರಬೇತಿ ಪಡೆಯಲು ಅವಕಾಶ
ಒಟ್ಟು ಹುದ್ದೆಗಳು
668
ಕ್ವಿಕ್ ನ್ಯೂಸ್
ಅರ್ಜಿ ಸಲ್ಲಿಸಲು ಕೊನೆಯ ದಿನ: ಮೇ 11, 2026
ವೆಬ್ ಸೈಟ್ : pಟಡಿಛ್ಟಿಜ್ಟಜಿd.ಜ್ಞಿ
ಇ-ಮೇಲ್ : ್ಟಛ್ಚಿ್ಟ್ಠಜಿಠಿಞಛ್ಞಿಠಿಃpಟಡಿಛ್ಟಿಜ್ಟಜಿd.ಜ್ಞಿ
ಪರೀಕ್ಷೆ ದಿನ: ಶೀಘ್ರದಲ್ಲೇ ಘೋಷಣೆಯಾಗಲಿದೆ.
ಪವರ್ ಗ್ರಿಡ್ ಕಾರ್ಪೊರೇಶನ್ ಆಫ್ ಇಂಡಿಯಾ ದೇಶದಾದ್ಯಂತ ಡಿಪ್ಲೊಮಾ ಟ್ರೇನಿಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಒಟ್ಟು 668 ಅಭ್ಯರ್ಥಿಗಳಿಗೆ ಅವಕಾಶವಿದ್ದು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ 11 ಕೊನೆಯ ದಿನವಾಗಿದೆ.
ಹುದ್ದೆಗಳ ವಿವರ: ಡಿಪ್ಲೊಮಾ ಟ್ರೇನಿ ಎಲೆಕ್ಟ್ರಿಕಲ್ 465 , ಡಿಪ್ಲೊಮಾ ಟ್ರೇನಿ ಸಿವಿಲ್ 104, ಡಿಪ್ಲೊಮಾ ಟ್ರೇನಿ ಸರ್ವೇ 3, ಜೂನಿಯರ್ ಆಫೀಸರ್ ಟ್ರೇನಿ(ಎಚ್ ಆರ್ ) 30, ಜೂನಿಯರ್ ಆಫೀಸರ್ ಟ್ರೇನಿ(ಎಫ್ ಅಂಡ್ ಎ) 23 ಹಾಗೂ 23 ಜೂನಿಯರ್ ಟೆಕ್ನಿಷಿಯನ್ ಟ್ರೇನಿ(ಸರ್ವೇ) ಹುದ್ದೆಗಳಿಗೆ ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿನೇಮಕಾತಿ ನಡೆಯಲಿದೆ.
ಆಯ್ಕೆ ಪ್ರಕ್ರಿಯೆ: ಕಂಪ್ಯೂಟರ್ ಆಧರಿತ ಪರೀಕ್ಷೆಯಲ್ಲಿಆಯ್ಕೆಯಾದವರ ಕೌಶಲ ಪರೀಕ್ಷೆ ಇರುತ್ತದೆ. ಬಳಿಕ ದಾಖಲೆಗಳ ಪರಿಶೀಲನೆ ನಡೆಸಿ ಅಂತಿಮ ಆಯ್ಕೆಯನ್ನು ಮಾಡಲಾಗುತ್ತದೆ.
ಪರೀಕ್ಷಾ ಶುಲ್ಕ: ಜೂನಿಯರ್ ಟೆಕ್ನಿಷಿಯನ್ ಟ್ರೇನಿ(ಸರ್ವೇ) ಅಭ್ಯರ್ಥಿಗಳಿಗೆ 200 ರೂ. ಶುಲ್ಕವಿದ್ದು ಉಳಿದ ಹುದ್ದೆಗಳಿಗೆ ಅರ್ಜಿ ಹಾಕುವವರು 300 ರೂ. ಶುಲ್ಕ ಪಾವತಿಸಬೇಕಾಗುತ್ತದೆ.
ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸಿನವರಾಗಿದ್ದು ಗರಿಷ್ಠ 27 ವರ್ಷದವರಾಗಿರಬೇಕು. ನಿಯಮಾನುಸಾರ ವಿವಿಧ ವರ್ಗಗಳ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
ವಿದ್ಯಾರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ ಪೂರ್ಣ ಸಮಯದ ಡಿಪ್ಲೊಮಾ ಅಥವಾ ಪದವಿಯನ್ನು ಹೊಂದಿರಬೇಕು. ಡಿಪ್ಲೊಮಾ ಟ್ರೇನಿ ಹುದ್ದೆಗಳಿಗೆ, ಕನಿಷ್ಠ ಅರ್ಹತಾ ಅಂಕಗಳೊಂದಿಗೆ ಸಂಬಂಧಿತ ಎಂಜಿನಿಯರಿಂಗ್ ವಿಭಾಗದಲ್ಲಿ3 ವರ್ಷಗಳ ಡಿಪ್ಲೊಮಾ ಅಗತ್ಯವಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಪವರ್ ಗ್ರಿಡ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್ ನ ಅಧಿಕೃತ ವೆಬ್ ಸೈಟ್ ನಲ್ಲಿರುವ ಕರಿಯರ್ ವಿಭಾಗದಲ್ಲಿಮಾತ್ರ ಅರ್ಜಿ ಸಲ್ಲಿಸಬಹುದು. ಸಕ್ರಿಯವಾಗಿರುವ ಇ-ಮೇಲ್ ಹಾಗೂ ಮೊಬೈಲ್ ನಂಬರ್ ಬಳಸಬೇಕು. ಆಯಾಯ ಹುದ್ದೆಗಳಿಗೆ ಅನುಗುಣವಾಗಿ ಆನ್ ಲೈನ್ ಪಾವತಿಯನ್ನು ಮಾಡಿ ಅರ್ಜಿ ಭರ್ತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಅರ್ಜಿ ಸಲ್ಲಿಕೆಯ ಕೊನೆಯ ದಿನದವರೆಗೂ ಅರ್ಜಿ ತಿದ್ದುಪಡಿಗೆ ಅವಕಾಶವಿದೆ. ಕೊನೆಯ ದಿನದ ಬಳಿಕೆ ತಿದ್ದುಪಡಿ ಸಾಧ್ಯವಿರುವುದಿಲ್ಲ.
ಇತ್ತ ಗಮನಿಸಿ
ಅರ್ಜಿ ಸಲ್ಲಿಕೆಗೂ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಂದು ಅರ್ಹತಾ ಮಾನದಂಡಗಳನ್ನು ಪೂರೈಸಿರುವುದನ್ನು ಖಚಿತಪಡಿಸಿಕೊಳ್ಳಬೇಕು.
ಅರ್ಜಿ ಶುಲ್ಕವನ್ನು ಯಾವುದೇ ಕಾರಣಕ್ಕೂ ಮರುಪಾವರಿ ಮಾಡಲಾಗುವುದಿಲ್ಲ.
ನೇಮಕಾತಿಗೆ ಸಂಬಂಧಿಸಿದ ಯಾವುದೇ ಮಾಹಿತಿಗಳನ್ನು ಪವರ್ ಗ್ರಿಡ್ ನ ಸಂಸ್ಥೆಯ ಅಧಿಕೃತ ವೆಬ್ ಸೈಟ್ ಮೂಲಕ ಮಾತ್ರವೇ ಪಡೆದುಕೊಳ್ಳಬೇಕು.

