ಎರಡು ದಿನಗಳ ಪ್ರಶಿಕ್ಷಣ ಕಾರಾರ ಯಗಾರಕ್ಕೆ ಚಾಲನೆ
ಬಿಜೆಪಿ ಪಕ್ಷಕ್ಕೆ ದೇಶವೇ ಮೊದಲು
ವಿಕ ಸುದ್ದಿಲೋಕ ಹುಬ್ಬಳ್ಳಿ
ಶಿಸ್ತಿನ ಪಕ್ಷ ಯಾವುದಾದರೂ ಇದ್ದರೆ ಅದು ಬಿಜೆಪಿ. ಶಿಸ್ತಿಗೆ ಹೆಸರಾದ ಬಿಜೆಪಿಯಲ್ಲಿಪಕ್ಷಕ್ಕಿಂತ ವ್ಯಕ್ತಿ ದೊಡ್ಡವನಲ್ಲ. ವ್ಯಕ್ತಿ ಪೂಜೆ ಇಲ್ಲಿನಡೆಯುವುದಿಲ್ಲ. ದೇಶವೇ ಮೊದಲು ಎಂಬುದನ್ನು ಪಕ್ಷದ ಕಾರ್ಯಕರ್ತರಿಗೆ ತಿಳಿಸುವುದೇ ಪ್ರಶಿಕ್ಷಣದ ಉದ್ದೇಶ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದ ಗೋಕುಲ ರಸ್ತೆ ರಾಜೇಶ್ವರ ಭವನದಲ್ಲಿಆಯೋಜಿಸಿರುವ ಎರಡು ದಿನಗಳ ಪ್ರಶಿಕ್ಷಣ ಕಾರಾರ ಯಗಾರಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
ಬಿಜೆಪಿಯಲ್ಲಿಮೂರು ವರ್ಷಕ್ಕೊಮ್ಮೆ ಪಕ್ಷದ ಹೊಸ ರಾಷ್ಟ್ರೀಯ ಅಧ್ಯಕ್ಷರಾದ ನಂತರ ಮಂಡಲ ಮಟ್ಟದಲ್ಲಿಜಿಲ್ಲಾ ವಿಭಾಗ ಮತ್ತು ರಾಜ್ಯ ಮಟ್ಟದಲ್ಲಿಆಯ್ದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಎರಡು ದಿನಗಳ ಕಾಲ ಪ್ರಶಿಕ್ಷಣ ಅಭ್ಯಾಸ ವರ್ಗ ಹಮ್ಮಿಕೊಳ್ಳಲಾಗುತ್ತದೆ. 21 ಪ್ರಶಿಕ್ಷಣ ಅವಧಿಗಳು ವಿಭಾಗಗಳ ಪರಿಣಿತರಿಂದ ಬೋಧನೆ ಮಾಡಲಾಗುತ್ತದೆ. ಪ್ರಶಿಕ್ಷಣ ವರ್ಗದ ವ್ಯವಸ್ಥೆ ಬಿಜೆಪಿಯಲ್ಲಿಮಾತ್ರ ಇದೆ. ಉಳಿದ ಪಕ್ಷಗಳಿಗೆ ಇದೆಲ್ಲಾ ಅರ್ಥವಾಗುವುದಿಲ್ಲಎಂದು ವಿವರಿಸಿದರು.
ಕೇಂದ್ರ ಸರಕಾರದ ಸಾಧನೆಗಳು, ಜನಸಂಘದಿಂದ ಭಾರತೀಯ ಜನತಾ ಪಾರ್ಟಿಯವರೆಗೆ ಪಕ್ಷವು ನಡೆದ ಬಂದ ಹಾದಿ ಮತ್ತು ಜನರಿಗೆ ನೀಡಿದ ಆಶ್ವಾಸನೆ, ಕಾಶ್ಮೀರದಲ್ಲಿ370ನೇ ಕಲಂ, ರಾಮ ಮಂದಿರ, ತ್ರಿವಳಿ ತಲಾಕ್ ಮೊದಲಾದ ಮಹತ್ವದ ಯೋಜನೆಗಳನ್ನು ಸಾಕಾರ ಮಾಡಿದೆ ಎಂದರು.
ಪ್ರಶಿಕ್ಷಣದಲ್ಲಿಪ್ರಮುಖವಾಗಿ ಸಾಮಾಜಿಕ ಮಾಧ್ಯಮ, ಕೃತಕ ಬುದ್ಧಿಮತ್ತೆ, ಮತ್ತು ಸರಳ ಆ್ಯಪ್ ನಮೋ ಆ್ಯಪ್ ನಿರ್ವಹಣೆ, ಸರಕಾರ ಸಾಧನೆ ಮತ್ತು ಮಾಧ್ಯಮ ನಿರ್ವಹಣೆ ಹಾಗೂ ಬಿಜೆಪಿ ಇತಿಹಾಸ, ವಿಕಾಸದ ಬಗ್ಗೆ ವಿಸ್ತೃತವಾಗಿ ಮಾಹಿತಿ ನೀಡಲಾಯಿತು.
ಶಾಸಕ ಮಹೇಶ ಟೆಟಗಿನಕಾಯಿ ಮಾತನಾಡಿ, ಪಕ್ಷದಲ್ಲಿಶಿಸ್ತು ಬೋಧನೆಯ ಜತೆಗೆ ಪಕ್ಷದ ಕಾರ್ಯ ಪದ್ಧತಿ ತಿಳಿಸಲಾಗುತ್ತಿದೆ. ಬಿಜೆಪಿ ಸರಕಾರಗಳ ಸಾಧನೆಗಳನ್ನು ಜನರಿಗೆ ತಲುಪಿಸುವುದು ಕಾರ್ಯಕರ್ತರಿಗೆ ತಿಳಿಸುವುದು ಹೀಗೆ ಅನೇಕ ವಿಷಯಗಳ ಕುರಿತು ಕಾರ್ಯಕರ್ತರಿಗೆ ಮನವರಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಮೇಯರ್ ಜ್ಯೋತಿ ಪಾಟೀಲ್ , ಉಪ ಮೇಯರ್ ಸಂತೋಷ್ ಚವ್ಹಾಣ, ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಲಿಂಗರಾಜ ಪಾಟೀಲ, ಜಯತೀರ್ಥ ಕಟ್ಟಿ, ಜಗದೀಶ ಹಿರೇಮನಿ, ಸಂಜಯ ಕಪಟಕರ, ಶಿವು ಮೆಣಸಿನಕಾಯಿ, ರಾಜು ಕಾಳೆ, ರಾಮನಗೌಡ ಶೆಟ್ಟನಗೌಡರ, ಪ್ರವೀಣ ಪವಾರ, ಸಿದ್ದು ಮೊಗಲಿಶೆಟ್ಟರ ಮೊದಲಾದವರು ಉಪಸ್ಥಿತರಿದ್ದರು.
ಫೋಟೊ : ಬಿಜೆಪಿ
ಹುಬ್ಬಳ್ಳಿಯಲ್ಲಿಬಿಜೆಪಿ ಸೆಂಟ್ರಲ್ ಕ್ಷೇತ್ರ ಆಯೋಜಿಸಿರುವ ಎರಡು ದಿನಗಳ ಪ್ರಶಿಕ್ಷಣ ಕಾರಾರ ಯಗಾರಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಂಗಳವಾರ ಚಾಲನೆ ನೀಡಿದರು.

