ವಿಕ ಸುದ್ದಿಲೋಕ ಚನ್ನರಾಯಪಟ್ಟಣ
ಶ್ರೀಶಂಕರಾಚಾರ ್ಯರ ಜಯಂತಿಯನ್ನು ವಿಶ್ವ ತತ್ತ್ವಜ್ಞಾನಿಗಳ ದಿನವನ್ನಾಗಿ ಆಚರಣೆ ಮಾಡುತ್ತಿದ್ದು, ಇಂತಹ ಮಹನೀಯರು ತತ್ತ್ವಗಳು ಎಲ್ಲಸಮಾಜಕ್ಕೆ ಸದಾ ಅವಶ್ಯ ಎಂದು ನಿವೃತ್ತ ಉಪನ್ಯಾಸಕ ಎ.ಚಿದಂಬರ ಹೇಳಿದರು.
ತಾಲೂಕು ಆಡಳಿತ ಮಿನಿವಿಧಾನಸೌಧದ ಒಳಾಂಗಣದಲ್ಲಿಆಯೋಜಿಸಿದ್ದ ಶ್ರೀಶಂಕರ ಜಯಂತಿ ಸಮಾರಂಭದಲ್ಲಿಮಾತನಾಡಿ,‘‘ಶಂಕರಾಚಾರ ್ಯರು ಕೇವಲ ತತ್ತ$್ವ ಜ್ಞಾನಿಗಳಷ್ಟೇ ಅಲ್ಲದೆ ದಾರ್ಶನಿಕರು ಹಾಗೂ ಸಂಘಟಕರೂ ಆಗಿದ್ದರೆಂದು ಅವರ ಜೀವನದ ಅಮೂಲ್ಯ ಕ್ಷಣಗಳ ಮೆಲುಕುಹಾಕಿ ಅತಿ ಕಿರಿಯ ವಯಸ್ಸಿನಲ್ಲಿಯೇ ಮೂರು ಬಾರಿ ಭಾರತದ ಪರ ್ಯಟನ ಮಾಡಿದ ಚೇತನ,’’ಎಂದರು.
ಶಾಸಕ ಸಿ.ಎನ್ .ಬಾಲಕೃಷ್ಣ ಮಾತನಾಡಿ,‘‘ಭರತಖಂಡದಲ್ಲಿಧಾರ್ಮಿಕ ಭಾವನೆಗಳನ್ನು ಒಂದುಗೂಡಿಸಿದ ಕೀರ್ತಿ ಆದಿಶಂಕರಾಚಾರ ್ಯರಿಗೆ ಸಲ್ಲುತ್ತದೆ. ನಾಡಿನಲ್ಲಿಧಾರ್ಮಿಕ ಸದ್ಭಾವನೆ ಮೂಡಿಸುವ ಮೂಲಕ ನಮ್ಮಲ್ಲಿಒಳ್ಳೆಯ ಆಲೋಚನೆಗಳನ್ನು ತರಲು ಕಾರಣರಾಗಿದ್ದಾರೆ. ನಮ್ಮಲ್ಲಿರೂಢಿಯಲ್ಲಿರುವ ಧಾರ್ಮಿಕ ಆಚರಣೆಗಳ ಮಹತ್ವಗಳನ್ನು ತಿಳಿದು ಅನುಸರಿಸಿದಾಗ ಅದರ ಇನ್ನಷ್ಟು ಗೌರವ ಹೆಚ್ಚಾಗುತ್ತದೆ,’’ಎಂದು ಹೇಳಿದರು.
ಕಾರ ್ಯಕ್ರಮಕ್ಕೂ ಮುನ್ನ ಶಂಕರಾಚಾರ ್ಯ ವಿರಚಿತ ಸ್ತೊ್ರೕತ್ರಗಳನ್ನು ಪಠಣ ಮಾಡಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಎಸ್ .ಡಿ.ಇಂಚರ, ಸೃಜನ್ , ಸಮನ್ವಿತ ಹಾಗೂ ಸಿ.ವೈ.ಪ್ರಣೀತಾ ಅವರನ್ನು ತಾಲೂಕು ಸಂಘದಿಂದ ಗೌರವಿಸಲಾಯಿತು.
ತಾಲೂಕು ಬ್ರಾಹ್ಮಣಸಂಘದ ಅಧ್ಯಕ್ಷ ಸಿ.ಎನ್ .ಸುಬ್ರಹ್ಮಣ್ಯ ಮಾತನಾಡಿದರು. ಟಿಎಪಿಸಿಎಂಎಸ್ ಅಧ್ಯಕ್ಷ ಎಚ್ .ಆರ್ .ವೆಂಕಟೇಶ್ , ತಹಸೀಲ್ದಾರ್ ಜಿ.ಎಸ್ .ಶಂಕರಪ್ಪ, ಹಿರಿಯ ಪತ್ರಕರ್ತ ಎ.ಎಂ.ಜಯರಾಂ ಇದ್ದರು.
ಚಿತ್ರ: ಎಚ್ ಎಸ್ ಎನ್ 21ಸಿಆರ್ ಪಿ3- ಚನ್ನರಾಯಪಟ್ಟಣ ತಾಲೂಕು ಆಡಳಿತದ ವತಿಯಿಂದ ನಡೆದ ಶಂಕರ ಜಯಂತಿ ಕಾರ ್ಯಕ್ರಮದಲ್ಲಿಶಾಸಕ ಸಿ.ಎನ್ .ಬಾಲಕೃಷ್ಣ, ತಾಲೂಕು ಬ್ರಾಹ್ಮಣಸಂಘದ ಅಧ್ಯಕ್ಷಸಿ.ಎನ್ .ಸುಬ್ರಹ್ಮಣ್ಯ, ಕಾರ ್ಯದರ್ಶಿ ಎ.ಎಸ್ .ವೆಂಕಟರಮಣ ಇದ್ದರು.

