ಸ್ಥಳೀಯ ರುಚಿ (ಸ್ಲಗ್ )
ಜಲ್ಮುರಿ ವಿಡಿಯೊಗೆ 100 ದಶಲಕ್ಷ ವೀಕ್ಷಣೆ!
-ಗೂಗಲ್ ಸರ್ಚ್ನಲ್ಲೂಮುಂಚೂಣಿ
ಲವಲವಿಕೆ ಸುದ್ದಿಲೋಕ
ಭಾರತದ ಸ್ಥಳೀಯ ಸ್ಟ್ರೀಟ್ ಫುಡ್ ಒಂದು ದಿನಬೆಳಗಾಗುವುದರೊಳಗೆ ಜನಪ್ರಿಯವಾಗಿದೆ. ನಮ್ಮ ಭೇಲ್ ಪೂರಿ, ಚುರುಮುರಿಯಂತೆಯೇ ಇರುವ ಜಲ್ಮುರಿ ಎಂಬ ಸ್ಥಳೀಯ ರುಚಿಯ ಬಗ್ಗೆ ತಿಳಿದುಕೊಳ್ಳಲು ಆಹಾರ ಪ್ರಿಯರು ಗೂಗಲ್ ನಲ್ಲಿತಡಕಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಪಶ್ಚಿಮ ಬಂಗಾಳದ ಜರ್ ಗ್ರಾಮ್ ನಲ್ಲಿನಡೆಸಿದ ಚುನಾವಣಾ ಪ್ರಚಾರದ ವೇಳೆ ಸ್ಥಳೀಯ ಅಂಗಡಿಯೊಂದರಲ್ಲಿಜಲ್ಮುರಿಯನ್ನು ಸವಿದ ಬೆನ್ನಲ್ಲೇ ಆ ಖಾದ್ಯವನ್ನು ಮಾಡುವ ರೀತಿ, ಬಳಸುವ ಸಾಮಗ್ರಿ, ಮೂಲ ಇತ್ಯಾದಿ ಬಗ್ಗೆ ಜನರು ಸಿಕ್ಕಾಪಟ್ಟೆ ಸರ್ಚ್ ಮಾಡುತ್ತಿದ್ದಾರೆ.
ಜಲ್ಮುರಿ ಸದ್ಯಕ್ಕೆ ಎಷ್ಟೊಂದು ಜನಪ್ರಿಯವಾಗಿದೆಯೆಂದರೆ ಬಣ್ಣ ಬಣ್ಣದ ಕುರುಕಲುಗಳಿಂದ ತುಂಬಿದ ಗಾಜಿನ ಬಾಟಲಿಗಳು ಮತ್ತು ಪೊಟ್ಟಣಗಳಿಂದ ತುಂಬಿದ ಪುಟ್ಟ ಅಂಗಡಿಯಲ್ಲಿಮೋದಿ ಜಲ್ಮುರಿ ಆಸ್ವಾದಿಸುತ್ತಿರುವ ವೈರಲ್ ಕ್ಯಾಂಡಿಡ್ ವಿಡಿಯೊ ಪೋಸ್ಟ್ ಗೆ ಒಂದೇ ದಿನದಲ್ಲಿಇನ್ ಸ್ಟಾಗ್ರಾಮ್ ನಲ್ಲಿ100 ಮಿಲಿಯನ್ ಗೂ ಹೆಚ್ಚು ಹಾಗೂ ಫೇಸ್ ಬುಕ್ ನಲ್ಲಿ90 ಮಿಲಿಯನ್ ಗೂ ಹೆಚ್ಚು ವ್ಯೂಸ್ ಬಂದಿದೆ! ಗೂಗಲ್ ಸರ್ಚ್ನ 22 ವರ್ಷಗಳ ಇತಿಹಾಸದಲ್ಲಿಯೇ ಸ್ಟ್ರೀಟ್ ಸ್ನ್ಯಾಕ್ ಒಂದಕ್ಕೆ ಈ ಮಟ್ಟದ ಹುಡುಕಾಟ ಕಂಡುಬಂದಿದ್ದು ಇದೇ ಮೊದಲು ಎನ್ನಲಾಗಿದೆ.

