ಫೋಟೊ ಬದಲಾಗಿದೆ

Contributed bymkhussain.lgs@gmail.com|Vijaya Karnataka

ಲಿಂಗಸುಗೂರಿನ ನಗರ ಯೋಜನಾ ಅಧಿಕಾರಿ ಶರಣಪ್ಪ ಮಡಿವಾಳ ಅವರ ಭ್ರಷ್ಟಾಚಾರದ ಬಗ್ಗೆ ಕರ್ನಾಟಕ ನಾಯಕ ಒಕ್ಕೂಟ ಸಂಘಟನೆ ಪದಾಧಿಕಾರಿಗಳು ಮಂಗಳವಾರ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು. ಸಣ್ಣಪುಟ್ಟ ಕೆಲಸಗಳಿಗೂ ಹಣ ಕೇಳುವ, ಸಚಿವರ ಹೆಸರಿನಲ್ಲಿ ಹಣಕ್ಕೆ ಬೇಡಿಕೆ ಇಟ್ಟಿರುವ ವಿಡಿಯೋ ವೈರಲ್ ಆಗಿದೆ. ಹಣ ಕೊಟ್ಟರೆ ನಿಯಮ ಬಾಹಿರ ಕೆಲಸ ಮಾಡುತ್ತಾರೆ. ಇಂಥ ಭ್ರಷ್ಟ ಅಧಿಕಾರಿಯನ್ನು ಕೂಡಲೇ ಅಮಾನತ್ತುಗೊಳಿಸಬೇಕು ಎಂದು ಒತ್ತಾಯಿಸಿದರು.

allegations of corruption against city planning officer demand for dismissal

ನಗರ ಯೋಜನಾ ಅಧಿಕಾರಿ ಭ್ರಷ್ಟಾಚಾರ : ಅಮಾನತ್ತಿಗೆ ಆಗ್ರಹ

ವಿಕ ಸುದ್ದಿಲೋಕ ಲಿಂಗಸುಗೂರು

*ಇಲ್ಲಿನ ನಗರ ಯೋಜನಾ ಅಧಿಕಾರಿ ಶರಣಪ್ಪ ಮಡಿವಾಳ ವಿರುದ್ಧ ಭ್ರಷ್ಟಾಚಾರದ ಪ್ರಕರಣ ದಾಖಲಿಸಿ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕು.* ಎಂದು ಕರ್ನಾಟಕ ನಾಯಕ ಒಕ್ಕೂಟ ಸಂಘಟನೆ ಪದಾಧಿಕಾರಿಗಳು ಆಗ್ರಹಿಸಿದರು.

ಸಹಾಯಕ ಆಯುಕ್ತ ಬಸವಣ್ಣೆಪ್ಪ ಕಲಶೆಟ್ಟಿಯವರಿಗೆ ಮಂಗಳವಾರ ಮನವಿ ಸಲ್ಲಿಸಿದ ಅವರು, *ನಗರ ಯೋಜನಾ ಅಧಿಕಾರಿ ಸಣ್ಣಪುಟ್ಟ ಕೆಲಸಗಳಿಗೂ ಹಣ ನೀಡಬೇಕು. ಇಲ್ಲದಿದ್ದರೆ ಕಚೇರಿಗೆ ಅಲೆದಾಡಬೇಕು. ಸಚಿವರ ಹೆಸರನ್ನು ಬಳಸಿಕೊಂಡು ವ್ಯಕ್ತಿಯೊಬ್ಬರಿಂದ 3 ಲಕ್ಷ ರೂಪಾಯಿ ಹಣದ ಬೇಡಿಕೆ ಇಟ್ಟಿದ್ದ ವಿಡಿಯೋ ಜಾಲತಾಣದಲ್ಲಿವೈರಲ್ ಆಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದವರಿಗೆ ಗೂಂಡಾಗಳಿಂದ ಬೆದರಿಕೆ ಕರೆ ಮಾಡಿಸುತ್ತಿದ್ದಾರೆ. ಹಣ ಕೊಟ್ಟರೆ ನಿಯಮ ಬಾಹಿರ ಕೆಲಸಗಳನ್ನು ಸಲೀಸಾಗಿ ಮಾಡುತ್ತಾರೆ. ಇಂಥಹ ಭ್ರಷ್ಟ ಅಧಿಕಾರಿಯನ್ನು ಕೂಡಲೇ ಅಮಾನತ್ತುಗೊಳಿಸಬೇಕು.* ಎಂದು ಒತ್ತಾಯಿಸಿದರು.

ಸಂಘಟನೆ ಅಧ್ಯಕ್ಷ ಮಹಾಂತೇಶ ನಾಯಕ, ಮುಖಂಡರಾದ ಶ್ರೀಮಂತ ದೇಗಲಮಡಿ, ಬಾಲು ನಾಯಕ ಹಂಚಿನಾಳ, ಸಾಬಣ್ಣ ಯಲಗಟ್ಟಿ, ನವೀನಕುಮಾರ, ಶಶಿಕುಮಾರ, ಖಾಲಿದ್ ಚಾವೂಸ್ ಸೇರಿ ಇತರರಿದ್ದರು.

21ಆರ್ ಸಿಹೆಚ್ ಎಲ್ ಎನ್ ಜಿ-2. ಲಿಂಗಸುಗೂರು ಪಟ್ಟಣದಲ್ಲಿಎಸಿ ಕಲಶೆಟ್ಟಿಯವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.