ಹುಲಿಮಿತ್ರ ಕ್ರಿಕೆಟ್ ಉದ್ಘಾಟನೆ

Contributed byvinu1273@gmail.com|Vijaya Karnataka

ಕುಶಾಲನಗರ ವಲಯ ಅರಣ್ಯಾ ಇಲಾಖೆ ಆಶ್ರಯದಲ್ಲಿ ಚಿಕ್ಕತ್ತೂರು ಗ್ರಾಮದಲ್ಲಿ ಹುಲಿಮಿತ್ರ ಕ್ರಿಕೆಟ್ ಟೂರ್ನಿ ನಡೆಯಿತು. ಯುವಕರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ತಂಡಗಳಾಗಿ ಭಾಗವಹಿಸಿದರು. ಗ್ರಾಮೀಣ ಯುವಕರು ಅರಣ್ಯ ಇಲಾಖೆಯೊಂದಿಗೆ ಸೌಹಾರ್ದ ಬೆಳೆಸಿಕೊಳ್ಳಲು ಇದು ಸಹಕಾರಿಯಾಯಿತು. ದುಬಾರೆ ಟೈಗರ್ ತಂಡ ಪ್ರಥಮ ಸ್ಥಾನ ಪಡೆಯಿತು. ಈ ಪಂದ್ಯಾವಳಿಯು ಯಶಸ್ವಿಯಾಗಿ ನಡೆಯಿತು.

inauguration of the successful huli mitra cricket tournament in kushalnagar

ವಿಕ ಸುದ್ದಿಲೋಕ ಕುಶಾಲನಗರ

ಕುಶಾಲನಗರ ವಲಯ ಅರಣ್ಯಾ ಇಲಾಖೆ ಆಶ್ರಯದಲ್ಲಿ

ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ಮೈದಾನದಲ್ಲಿಹುಲಿಮಿತ್ರ ಕ್ರಿಕೆಟ್ ಟೂರ್ನಿ ನಡೆಯಿತು.

ಸಾರ್ವಜನಿಕ ಯುವಕರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಒಳಗೊಂಡಂತೆ ತಂಡಗಳ ರಚನೆ ಮೂಲಕ ಎರಡು ದಿನಗಳ ಹುಲಿ ಮಿತ್ರ ಕ್ರಿಕೆಟ್ ಪಂದ್ಯಾವಳಿಯನ್ನು ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಶ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ನೆರವೇರಿಸಿದರು.

ನಂತರ ಮಾತನಾಡಿದ ಅವರು, ‘‘ಗ್ರಾಮಾಂತರ ಪ್ರದೇಶದ ಯುವಕರು ಅರಣ್ಯ ಇಲಾಖೆಯೊಂದಿಗೆ ಸೌಹಾರ್ದ ಮನೋಭಾವ ಬೆಳೆಸಿಕೊಂಡು ಗ್ರಾಮದ ಅಭಿವೃದ್ಧಿ ಮತ್ತು ಇಲಾಖೆಗೆ ಸಹಕಾರಿಯಾಗುವ ರೀತಿಯ ಚಟುವಟಿಕೆಗಳಲ್ಲಿತೊಡಗಿಸಿಕೊಳ್ಳಬೇಕಿದೆ,’’ ಎಂದರು.

ಜಿಲ್ಲಾಪಂಚಾಯತಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಮಾತನಾಡಿದರು.

ಮಾಜಿ ಸೈನಿಕ ವಾಂಚಿರ ಮನು ನಂಜುಂಡ, ಡಿಸಿಎಫ್ ವಿ. ಅಭಿಷೇಕ್ , ಎ.ಸಿ.ಎಫ್ . ಎ.ಎ. ಗೋಪಾಲ, ಮಂಜುನಾಥ್ , ಕುಶಾಲನಗರ ವಲಯ ಅರಣ್ಯಾಧಿಕಾರಿ ಆರ್ . ರಕ್ಷಿತ್ , ಸೇರಿದಂತೆ ಗಸ್ತು ಅರಣ್ಯ ಪಾಲಕರಾದ ಕೆ.ಆರ್ . ಚೇತನ್ , ಚಿಕ್ಕತ್ತೂರು ಯುವಕ ಸಂಘದ ಅಧ್ಯಕ್ಷ ಸಿ.ಸಿ. ಸ್ವಾಮಿ, ದೈಹಿಕ ಶಿಕ್ಷಣ ಶಿಕ್ಷಕ ಚೇತನ್ , ದೊಡ್ಡತ್ತೂರು ಯೋಗೇಶ್ , ಉಪ ವಲಯ ಅರಣ್ಯಾಧಿಕಾರಿಗಳಾದ ಉಮೇಶ್ , ವೆಂಕಟೇಶ್ , ಗಸ್ತು ಅರಣ್ಯ ಪಾಲಕರಾದ ಮಲ್ಲನಗೌಡ ಪಾಟೀಲ್ , ಸಂಪತ್ ಕುಮಾರ್ , ಅರುಣ್ , ಸುನಿಲ್ , ಕುಡಲಪ್ಪ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಸ್ಥಳೀಯ ಯುವಕರು, ಮತ್ತು ಗ್ರಾಮಸ್ಥರು ಹಾಜರಿದ್ದರು.

ಕ್ರೀಡಾಕೂಟದಲ್ಲಿಒಟ್ಟು 12 ತಂಡಗಳು ಭಾಗವಹಿಸಿ ಅದರಲ್ಲಿಪ್ರಥಮ ಸ್ಥಾನವನ್ನು ದುಬಾರೆ ಟೈಗರ್ ತಂಡ ಪಡೆಯಿತು, ಹಾತಿ ಮೇರೆ ಸಾಥಿ ತಂಡ ದ್ವಿತೀಯ, ಕಂಬಿಬಾಣಿ ರಾಯಲ್ ತಂಡ ತೃತೀಯ ಬಹುಮಾನ ಪಡೆದುಕೊಂಡಿತು.

21 ಕೆಯುಎಸ್ 01 ಚಿತ್ರದಲ್ಲಿ

ಕುಶಾಲನಗರ ವಲಯ ಅರಣ್ಯಾ ಇಲಾಖೆ ಆಶ್ರಯದಲ್ಲಿಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ಮೈದಾನದಲ್ಲಿಹುಲಿಮಿತ್ರ ಕ್ರಿಕೆಟ್ ಟೂರ್ನಿ ನಡೆಯಿತು.