ನಾಳೆಯಿಂದ ಕಾಳಿಕಾದೇವಿ ಜಾತ್ರೆ
ಇಂಡಿ: ನಗರದ ಕಾಳಿಕಾದೇವಿ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಏ.23 ರಿಂದ 26ರ ವರೆಗೆ ಜರುಗಲಿವೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ನರಸಿಂಹ ತಿಳಿಸಿದ್ದಾರೆ.
23ರಂದು ಸಂಜೆ 7ಕ್ಕೆ ಪುರಾಣ ಮಂಗಲ, 24 ರಂದು ಮಧ್ಯಾಹ್ನ 2ಕ್ಕೆ ಉಡಿ ತುಂಬುವುದು, 25ರಂದು ಮಧ್ಯಾಹ್ನ 2 ಕ್ಕೆ ಕಾಳಿಕಾ ಸೇವಾ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ, 26ರಂದು ಮಧ್ಯಾಹ್ನ 12 ಕ್ಕೆ ನಡೆಯುವ ಧರ್ಮಸಭೆಯಲ್ಲಿಬಂಥನಾಳದ ವೃಷಭಲಿಂಗೇಶ್ವರ ಶ್ರೀ, ಮುಗಳಖೋಡದ ಡಾ. ಮುರುಗರಾಜೇಂದ್ರ ಶ್ರೀ, ವಿಜಯಪುರದ ಮಹೇಂದ್ರ ಶ್ರೀ, ಬರಡೋಲದ ಭಾಸ್ಕರಾನಂದ ಶ್ರೀ, ಕನ್ನೂರಿನ ಪ್ರಕಾಶ ಶ್ರೀ, ಶಾಸಕ ಯಶವಂತರಾಯಗೌಡ ಪಾಟೀಲ, ಬಸವರಾಜ ಕಣ್ಣಿ, ಡೊಮನಾಳದ ನಾನಾಗೌಡ ಬಿರಾದಾರ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಶ್ರೀ ಕಾಳಿಕಾ ಸೇವಾರತ್ನ ಪ್ರಶಸ್ತಿಯನ್ನು ರಾಯಚೂರಿನ ಕೆ.ಡಿ.ಬಡಿಗೇರ, ಇಂಡಿಯ ಯಮುನಾ ಅಕ್ಕನವರು, ರವಿ ಬಡಿಗೇರ, ಸುಭಾಸ ಬಡಿಗೇರ, ಗಂಗಾ ಗಲಗಲಿ, ಶರಣಬಸಪ್ಪ ಕಲ್ಲೊಳ್ಳಿ , ಆನಂದ ಹಿರೇಮಠ, ಭಾರತಿ ಬಡಿಗೇರ, ಸುಜೀತಕುಮಾರ ಲಾಳಸಂಗಿ ಹಾಗೂ ಅಶೋಕ ಬಡಿಗೇರ ಅವರಿಗೆ ನೀಡಲಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿತಿಳಿಸಿದ್ದಾರೆ.
ಫೋಟೋ- 21 ಇಂಡಿ 01
ಕಾಳಿಕಾ ದೇವಿ

