ಅಪಾಯದಲ್ಲಿಜಿಲ್ಲೆಯ 88ಕ್ಕೂ ಅಧಿಕ ಪ್ರದೇಶಗಳು | ಐದು ವರ್ಷಗಳಲ್ಲಿ14ಕ್ಕೂ ಅಧಿಕ ಸಾವು-ನೋವು
ಸ್ಟೀವನ್ ರೇಗೊ ಮಂಗಳೂರು
sಠಿಛಿva್ಞ.್ಟಛಿಜಟಃಠಿಜಿಞಛಿsಟ್ಛಜ್ಞಿdಜಿa.್ಚಟಞ
ಮಳೆಗಾಲದಲ್ಲಿದಕ್ಷಿಣ ಕನ್ನಡ ಜಿಲ್ಲೆಯಲ್ಲಿ100ಕ್ಕೂ ಅಧಿಕ ಕಡೆಯಲ್ಲಿಭೂಕುಸಿತದ ಭೀತಿಯಿದ್ದು, ಇದರಲ್ಲಿ88ಕ್ಕೂ ಹೆಚ್ಚು ತೀವ್ರ ಭೂಕುಸಿತವಾಗುವ ಪ್ರದೇಶಗಳನ್ನು ಅಂದಾಜಿಸಲಾಗಿದೆ. ಕಳೆದ ಐದು ವರ್ಷಗಳಲ್ಲಿಭೂಕುಸಿತದಿಂದ 14ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಉಳಿದಂತೆ ನಷ್ಟದ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲಿಸಾಗುತ್ತಿರುವುದು ತೀರಾ ಕಳವಳಕಾರಿ.
ಕರಾವಳಿಯಲ್ಲಿಇತ್ತೀಚೆಗಿನ ವರ್ಷಗಳಲ್ಲಿಹೆಚ್ಚಿನ ಪ್ರಮಾಣದಲ್ಲಿಭೂಕುಸಿತವಾಗುತ್ತಿದ್ದು, ಕಳೆದ ವರ್ಷ ಐದಕ್ಕೂ ಹೆಚ್ಚು ಮಂದಿ ಭೂಕುಸಿತದಿಂದ ಮೃತಪಟ್ಟಿದ್ದಾರೆ. ವಿಶೇಷವಾಗಿ ಉಳ್ಳಾಲ ತಾಲೂಕಿನ ಬೆಳ್ಮ, ಮಂಜನಾಡಿ ಭಾಗದಲ್ಲಿಭೂಕುಸಿತ ಹೆಚ್ಚಿನ ಪ್ರಮಾಣದಲ್ಲಿಆಗಿತ್ತು.
88 ಕಡೆಯಲ್ಲಿಅಪಾಯದ ಸೂಚನೆ: ದಕ್ಷಿಣ ಕನ್ನಡ ಜಿಲ್ಲೆಯ 88 ಪ್ರದೇಶಗಳಲ್ಲಿಭೂಕುಸಿತವಾಗುವ ಸಾಧ್ಯತೆಗಳನ್ನು ಈ ಹಿಂದೆ ಅಂದಾಜು ಮಾಡಲಾಗಿತ್ತು. ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ತಾಲೂಕುಗಳ ಜತೆಗೆ ಮಂಗಳೂರು ನಗರ ಭಾಗದ ಸುತ್ತಮುತ್ತಲಿನ ಪ್ರದೇಶಗಳೂ ಈ ಪಟ್ಟಿಯಲ್ಲಿಸೇರಿಕೊಂಡಿದೆ. ಬೆಳ್ತಂಗಡಿ ಭಾಗದಲ್ಲಿಅತೀ ಹೆಚ್ಚು ಭೂಕುಸಿತವಾಗುವ ಪ್ರದೇಶಗಳನ್ನು ಗುರುತಿಸಲಾಗಿದೆ. ಇಲ್ಲಿನ 35ಕ್ಕೂ ಅಧಿಕ ಕಡೆಯಲ್ಲಿಭೂಕುಸಿತದ ಸಾಧ್ಯತೆಯಿದೆ ಎನ್ನಲಾಗಿದೆ.
ಅಪಾಯಕಾರಿ ಕೆತ್ತಿಕಲ್ : ಮಂಗಳೂರು ಹೊರವಲಯದ ವಾಮಂಜೂರು ಬಳಿಯ ಕೆತ್ತಿಕಲ… ಗುಡ್ಡ ಅಪಾಯಕಾರಿ ಸ್ಥಿತಿಯಲ್ಲಿದೆ. ಕಳೆದ ಆಗಸ್ಟ್ ನಲ್ಲಿಗುಡ್ಡ ಜರಿಯುವ ಮೂಲಕ ಅಲ್ಲಿರುವ 200ಕ್ಕೂ ಹೆಚ್ಚು ಮನೆಗಳಿಗೆ ಅಪಾಯದ ಸೂಚನೆ ಇತ್ತು. ಇದರಲ್ಲಿತೀರಾ ಅಪಾಯ ಇರುವ 12 ಕುಟುಂಬಗಳನ್ನು ತಾತ್ಕಾಲಿಕ ನೆಲೆಯಲ್ಲಿತೆರವು ಮಾಡಿದ ಪ್ರಸಂಗ ಕೂಡ ನಡೆದಿತ್ತು.
ಆ ಬಳಿಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೇರಿದಂತೆ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಕಾಮಗಾರಿಗಳನ್ನು ಕೈಗೆತ್ತಿಕೊಂಡು ವರ್ಷವಾದರೂ ಇನ್ನೂ ಕೂಡ ಇದರ ಕಾಮಗಾರಿ ಪೂರ್ತಿಯಾಗಿಲ್ಲ. ಕೆಲವು ಭಾಗದಲ್ಲಿಈಗಷ್ಟೇ ಫಿಲ್ಲರ್ ಹಾಕಿ ತಡೆಗೋಡೆ ನಿರ್ಮಿಸುವ ಕೆಲಸವಾಗುತ್ತಿದೆ. ತಡೆಗೋಡೆ ಇಲ್ಲದ ಕೆಲವು ಭಾಗಗಳು ಜೋರು ಮಳೆಯಾದರೆ ಕುಸಿಯುವ ಸಾಧ್ಯತೆ ಇದೆ. ಇಲ್ಲಿಗುಡ್ಡ ಕುಸಿತ ಸಂಭವಿಸಿದಲ್ಲಿಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ ಸಂಚಾರ ಕಷ್ಟವಾಗಲಿದೆ.
ಕೋಟ್
ಕರಾವಳಿಯ ಬಹಳಷ್ಟು ಭೂಕುಸಿತಗಳು ಮಾನವ ನಿರ್ಮಿತ ತಪ್ಪುಗಳಿಂದ ನಡೆದಿದೆ. ಹೆಚ್ಚಾಗಿ ಗುಡ್ಡಗಾಡು, ಇಳಿಜಾರು ಪ್ರದೇಶಗಳಲ್ಲಿಮನೆ ಕಟ್ಟುವುದು ಸೇರಿದಂತೆ ಇತರ ಕಾಮಗಾರಿಗಳು ನಡೆಸುತ್ತಿರುವುದು ಭೂಕುಸಿತಕ್ಕೆ ಕಾರಣವಾಗಿದೆ. ಕೆತ್ತಿಕಲ್ ವಿಚಾರದಲ್ಲಿಇದು ಪೂರ್ಣ ರೂಪದಲ್ಲಿಮಾನವ ನಿರ್ಮಿತ ತಪ್ಪೇ ಆಗಿದೆ. ಕೆತ್ತಿಕಲ್ ಭಾಗದಿಂದ ಸಾವಿರಾರು ಲಾರಿ ಮಣ್ಣು ಸಾಗಾಟ ನಡೆದ ಬಳಿಕ ಇಂತಹ ಅಪಾಯ ಸೃಷ್ಟಿಯಾಗಿದೆ.
- ರಾಜೇಶ್ ಕುಲಾಲ್ , ಸಾಮಾಜಿಕ ಕಾರ ್ಯಕರ್ತ
ಬಾಕ್ಸ್ 0
ತಾಲೂಕುಗಳವಾರು ಹೆಚ್ಚು ಅಪಾಯ, ಭೂಕುಸಿತದ ಪ್ರದೇಶಗಳು
ಬಂಟ್ವಾಳ ತಾಲೂಕು: ಅಮ್ಡಾಡಿ, ಮಣಿನಾಲ್ಕೂರು, ಪೆರ್ನೆ, ಸಜಿಪನಾಡು, ಕರಿಯಂಗಲ
ಮಂಗಳೂರು ತಾಲೂಕು: ಅಡ್ಡೂರು, ಅರ್ಕುಳ, ಸೂರಿಂಜೆ, ಕೆಂಜಾರ್
ಸುಳ್ಯ ತಾಲೂಕು: ಸಂಪಾಜೆ, ಅರಂತೋಡು, ಆಲೆಟ್ಟಿ, ಮರ್ಕಂಜ
ಕಡಬ ತಾಲೂಕು: ಸುಬ್ರಹ್ಮಣ್ಯ, ಐನೆಕಿದು, ಶಿರಾಡಿ
ಪುತ್ತೂರು ತಾಲೂಕು: ಬಜತ್ತೂರು, ಪುತ್ತೂರು ಕಸ್ಬಾ
ಬೆಳ್ತಂಗಡಿ ತಾಲೂಕು: ಚಾರ್ಮಾಡಿ, ನೇರಿಯ, ಶಿಶಿಲ, ನಾರವಿ, ವೇಣೂರು
ಉಳ್ಳಾಲ ತಾಲೂಕು: ಪೆರ್ಮನ್ನೂರು, ಉಳ್ಳಾಲ ಪ್ರದೇಶಗಳು
ಮೂಡುಬಿದಿರೆ ತಾಲೂಕು: ಬೆಳುವಾಯಿ, ಶಿರ್ತಾಡಿ, ನಿಡ್ಡೋಡಿ
....
ಚಿತ್ರ:ಚಿತ್ರ: ವಾಮಂಜೂರು ಭಾಗದ ಕೆತ್ತಿಕಲ್ ನಲ್ಲಿಅರ್ಧ ಕಾಮಗಾರಿ ನಡೆದಿರುವುದು.

