(ಪ್ರಮುಖ) ಬಿವಿಎನ್ ಸೆಂಟ್ರಲ್ ಪಬ್ಲಿಕ್ ಶಾಲೆಗೆ ಶೇ.100 ಫಲಿತಾಂಶ

Contributed byvenki_dhreporter@rediffmail.com|Vijaya Karnataka

ಕೆಜಿಎಫ್‌ನ ಬಿವಿಎನ್‌ ಸೆಂಟ್ರಲ್‌ ಪಬ್ಲಿಕ್‌ ಶಾಲೆ ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದಿದೆ. 35 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 16 ಮಂದಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕಾರ್ತಿಕ್‌ ಎಸ್‌. 94 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದಿದ್ದಾರೆ. ಕನ್ನಡ, ಗಣಿತ, ವಿಜ್ಞಾನ, ಸಮಾಜ, ಐಟಿ ವಿಷಯಗಳಲ್ಲಿ ಶೇ.100 ಅಂಕ ಗಳಿಸಿದ್ದಾರೆ. ಶಾಲೆಯು ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡಿದೆ.

bvn central public school achieves 100 result accomplishments of brilliant students in education

(500 ಪ್ರಯೋಜಿತ ಪ್ರತಿಗಳು)

(ಪ್ರಮುಖ) ಬಿವಿಎನ್ ಸೆಂಟ್ರಲ್ ಪಬ್ಲಿಕ್ ಶಾಲೆಗೆ ಶೇ.100 ಫಲಿತಾಂಶ

ವಿಕ ಸುದ್ದಿಲೋಕ ಕೆಜಿಎಫ್

ಸಿಬಿಎಸ್ ಇ 10ನೇ ತರಗತಿ ಫಲಿತಾಂಶ ಹೊರಬಿದ್ದಿದ್ದು, ಕೆಜಿಎಫ್ ನ ಶ್ರೀ ಬಿವಿಎನ್ ಸೆಂಟ್ರಲ್ ಪಬ್ಲಿಕ್ ಶಾಲೆ (ನಿರ್ವಹಣೆ ಶ್ರೀಶ್ರೀ ರವಿಶಂಕರ್ ಗುರೂಜಿ ವಿದ್ಯಾಮಂದಿರ) ಶೇ. 100 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ತಾಲೂಕಿನಲ್ಲಿಅತೀ ಹೆಚ್ಚು ಫಲಿತಾಂಶ ಪಡೆದ 2ನೇ ಶಾಲೆಯಾಗಿದೆ ಎಂದು ಆಡಳಿತಾಧಿಕಾರಿ ಆನಂತ್ ಪದ್ಮನಾಭ ತಿಳಿಸಿದ್ದಾರೆ.

2025-26 ನೇ ಸಾಲಿನಲ್ಲಿ35 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 16 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿಉತ್ತೀರ್ಣಗೊಂಡಿದ್ದು, ಪ್ರಥಮ ಶ್ರೇಣಿಯಲ್ಲಿ9 ವಿದ್ಯಾರ್ಥಿಗಳು, ದ್ವೀತಿಯ ಶ್ರೇಣಿಯಲ್ಲಿ4 ವಿದ್ಯಾರ್ಥಿಗಳು, 6 ವಿದ್ಯಾರ್ಥಿಗಳು ಸಾಮನ್ಯ ದರ್ಜೆಯಲ್ಲಿಉತೀರ್ಣಗೊಂಡಿದ್ದಾರೆ.

ಒಟ್ಟಾರೆ ಶ್ರೀಶ್ರೀ ರವಿಶಂಕರ್ ಗುರೂಜಿ ಅವರ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿಶಾಲೆಯ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಜತೆಗೆ ಉತ್ತಮ ಸಂಸ್ಕಾರವನ್ನು ನೀಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಶಾಲೆಗೆ ಶೇ.100ರಷ್ಟು ಫಲಿತಾಂಶ ಬಂದಿದ್ದು, ಮುಂದಿನ ವರ್ಷದಲ್ಲಿಇನ್ನಷ್ಟು ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಜತೆಗೆ ಶಾಲೆಯ ಎಲ್ಲಮಕ್ಕಳು ಅತ್ಯುನ್ನತ ದರ್ಜೆಯಲ್ಲಿಉತ್ತೀರ್ಣರಾಗಲು ಅಗತ್ಯವಿರುವ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುವುದೆಂದು ಆಡಳಿತಾಧಿಕಾರಿಗಳು ತಿಳಿಸಿದರು.

ಅತ್ಯುನ್ನತ ಅಂಕಗಳನ್ನು ಪಡೆದಿರು ಮಕ್ಕಳು: ಕಾರ್ತಿಕ್ .ಎಸ್ .ಶೇ. 94, ಸಾಯಿದೀಪಿಕಾ.ಟಿ.ಎಂ..ಶೇ. 83, ಸಲೀನಾ ತಾಸನೀಂ ಶೇ.82, ಎಂ.ಲೇಖನ 80, ಕನಿಷ್ಕ. ಎ. ಶೇ.79, ಟಿ.ಜಯದೇವ ಶೇ.78 ಗಳಿಸಿದ್ದು, ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಗಳಿಸಿ ಶಾಲೆಗೆ ಉತ್ತಮ ಹೆಸರನ್ನು ತಂದುಕೊಟ್ಟಿದ್ದಾರೆ. ಶ್ರೀಶ್ರೀ ರವಿಶಂಕರ್ ಗುರೂಜಿ ಅವರ ಆಶೀರ್ವಾದಗಳೊಂದಿಗೆ ಶಾಲಾ ಆಡಳಿತ ಮಂಡಳಿಯ ನಿರ್ದೇಶಕರು, ಆಡಳಿತಾಧಿಕಾರಿಗಳು, ಪ್ರಾಂಶುಪಾಲರ ಶಿಕ್ಷಕರ ಶ್ರಮದೊಂದಿಗೆ ಶಾಲೆಗೆ ಉತ್ತಮ ಫಲಿತಾಂಶ ತರುವಲ್ಲಿಯಶಸ್ವಿಯಾಗಿದ್ದ ಹಿನ್ನೆಲೆಯಲ್ಲಿಗುರುಗಳಾದ ಶ್ರೀಶ್ರೀ ರವಿಶಂಕರ್ ಗುರೂಜಿ ಹಾರೈಸಿದ್ದಾರೆ.

ಕನ್ನಡ, ಗಣಿತ, ವಿಜ್ಞಾನ. ಸಮಾಜ, ಐಟಿ ಪರೀಕ್ಷೆಯಲ್ಲಿಶೇ.100ರಷ್ಟು ಅಂಕಗಳನ್ನು ಪಡೆಯುವ ಮೂಲಕ ಎಸ್ .ಕಾರ್ತಿಕ್ ಶಾಲೆಗೆ ಮೊದಲನೇ ವಿದ್ಯಾರ್ಥಿಯಾಗಿದ್ದಾರೆ, ಅಂಗ್ಲಭಾಷೆಯಲ್ಲಿಶೇ.100 ಅಂಕಗಳನ್ನು ಎಂ.ದಿವ್ಯಶ್ರೀ ಪಡೆದುಕೊಂಡಿದ್ದಾರೆ, ಹಿಂದಿ ಭಾಷೆಯಲ್ಲಿಶೇ.100 ಅಂಕಗಳನ್ನು ಸಲೀನಾ ತಾಸನೀಂ ಪಡೆದುಕೊಂಡಿರುವುದಾಗಿ ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ.

21ಕೆಜಿಎಫ್ 1,2,3,4,5,6,7,

ಅತ್ಯುನ್ನತ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳು.

21ಕೆಜಿಎಫ್ 8

ಶ್ರೀಶ್ರೀ ರವಿಶಂಕರ್ ಗುರೂಜಿ.