ಆರ್ಥಿಕತೆಗೆ ಮಹಿಳಾ ಸಹಭಾಗಿತ್ವ ನಿರ್ಣಾಯಕ
- ವಿಕಸಿತ ಭಾರತ ಕನಸು ಸಾಕಾರಕ್ಕೆ ಮಹಿಳಾ ಪಾಲ್ಗೊಳ್ಳುವಿಕೆ ಅಗತ್ಯವೆಂದ ವಿಶ್ವಬ್ಯಾಂಕ್
- ಇನ್ನೂ ಇದೆ ಲಿಂಗ ತಾರತಮ್ಯ
- ಔಊP್ಕ ದರ ಏರಿಕೆ ಅಗತ್ಯ
- ಸವಾಲುಗಳ ಪರಿಹಾರವೂ ಮುಖ್ಯ
ಭಾರತವು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿ ಹೊಂದಿದ್ದು, ಈ ಗುರಿಯನ್ನು ತಲುಪಲು ಮಹಿಳೆಯರ ಆರ್ಥಿಕ ಸಹಭಾಗಿತ್ವ ಅತ್ಯಂತ ನಿರ್ಣಾಯಕವಾಗಿದೆ. ದೇಶದ ಆರ್ಥಿಕತೆ ವಾರ್ಷಿಕ ಶೇ. 8ರಷ್ಟು ಬೆಳೆಯಬೇಕಾದರೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿಉದ್ಯೋಗ ಕ್ಷೇತ್ರದಲ್ಲಿಪಾಲ್ಗೊಳ್ಳುವುದು ಅನಿವಾರ್ಯವಾಗಿದೆ ಎಂದು ವಿಶ್ವ ಬ್ಯಾಂಕ್ ವರದಿ ತಿಳಿಸಿದೆ.
ಮಹಿಳಾ ಕಾರ್ಮಿಕರ ಪಾಲ್ಗೊಳ್ಳುವಿಕೆ ದರ (ಘ್ಕಿಔಊP್ಕ): ಭಾರತದಲ್ಲಿಮಹಿಳಾ ಔಊP್ಕ ದರ( ಉದ್ಯೋಗದಲ್ಲಿರುವವರನ್ನು ಕಂಡು ಹಿಡಿಯುವ ಪ್ರಮಾಣ)ವು 2022ರಲ್ಲಿಶೇ. 33.9ರಷ್ಟಿತ್ತು, 2025ರ ವೇಳೆಗೆ ಈ ದರವು ಶೇ. 40ಕ್ಕೆ ಏರಿಕೆಯಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಆದರೂ, ಜಾಗತಿಕ ಮಟ್ಟದಲ್ಲಿಮಹಿಳೆಯರ ಸರಾಸರಿ ಪಾಲ್ಗೊಳ್ಳುವಿಕೆ ಶೇ. 49ರಷ್ಟಿದೆ. ಬ್ರೆಜಿಲ್ (ಶೇ.53) ಮತ್ತು ವಿಯೆಟ್ನಾಂ(ಶೇ.69) ನಂತಹ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಈ ಹಾದಿಯಲ್ಲಿಇನ್ನೂ ಸಾಕಷ್ಟು ದೂರ ಸಾಗಬೇಕಿದೆ.
ಶೈಕ್ಷಣಿಕ ಮತ್ತು ಉನ್ನತ ಹುದ್ದೆಗಳಲ್ಲಿಮಹಿಳೆಯರು: ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿಮಹಿಳಾ ಪ್ರಾಧ್ಯಾಪಕರ ಸಂಖ್ಯೆ ಆಶಾದಾಯಕವಾಗಿಲ್ಲ. ರಾಷ್ಟ್ರೀಯ ಮಟ್ಟದಲ್ಲಿಪ್ರೊಫೆಸರ್ ಹುದ್ದೆಗಳಲ್ಲಿಮಹಿಳೆಯರ ಪ್ರಮಾಣವು ಕಳೆದ ಒಂದು ದಶಕದಲ್ಲಿಶೇ. 25.9-29.5ಕ್ಕೆ ಮಾತ್ರ ಏರಿದೆ. ಭಾರತದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿಮಹಿಳಾ ಪ್ರಾತಿನಿಧ್ಯದ ಸ್ಥಿತಿಗತಿಯನ್ನು ಗಮನಿಸಿದಾಗ ಮಿಶ್ರ ಪರಿಸ್ಥಿತಿ ಕಂಡುಬರುತ್ತಿದೆ. ದೇಶದ ಐಐಟಿಗಳಲ್ಲಿಮಹಿಳಾ ಅಧ್ಯಾಪಕರ ಪ್ರಮಾಣವು ಕೇವಲ ಶೇ. 14ರಷ್ಟಿದ್ದು, ಈ ವಲಯದಲ್ಲಿಮಹಿಳೆಯರ ಸಂಖ್ಯೆ ಹೆಚ್ಚಾಗಬೇಕಾದ ಅನಿವಾರ್ಯತೆಯನ್ನು ಇದು ಎತ್ತಿ ತೋರಿಸುತ್ತದೆ. ಆದರೆ, ಐಐಟಿ ಜೋಧ್ ಪುರವು ಶೇ. 22ರಷ್ಟು ಮಹಿಳಾ ಸಿಬ್ಬಂದಿಯನ್ನು ಹೊಂದುವ ಮೂಲಕ ಮುಂಚೂಣಿಯಲ್ಲಿದೆ. ಐಐಎಂಗಳನ್ನು ಪರಿಗಣಿಸಿದರೆ, ಅಲ್ಲಿಮಹಿಳಾ ಪ್ರಾಧ್ಯಾಪಕರ ಸಂಖ್ಯೆ ತುಲನಾತ್ಮಕವಾಗಿ ಉತ್ತಮವಾಗಿದೆ.
ಕಾರ್ಪೊರೇಟ್ ವಲಯ: ಕಾರ್ಪೊರೇಟ್ ಮತ್ತು ಉದ್ಯಮ ವಲಯದಲ್ಲಿಲಿಂಗ ತಾರತಮ್ಯದ ಅಂತರ ಇನ್ನೂ ದೊಡ್ಡದಿದೆ. 2025ರ ಅಂಕಿ-ಅಂಶಗಳ ಪ್ರಕಾರ, ಉನ್ನತ ವ್ಯವಸ್ಥಾಪಕ ಹುದ್ದೆಗಳಲ್ಲಿರುವ ಪ್ರತಿ 100 ಪುರುಷರಿಗೆ ಪ್ರತಿಯಾಗಿ ಕೇವಲ 13 ಮಹಿಳೆಯರು ಮಾತ್ರ ಇದ್ದಾರೆ. ಕಂಪನಿಗಳ ಆಡಳಿತ ಮಂಡಳಿಯಲ್ಲಿಕನಿಷ್ಠ ಒಬ್ಬರು ಮಹಿಳಾ ಸದಸ್ಯರಿರಬೇಕು ಎಂಬ ನಿಯಮವನ್ನು ಹೆಚ್ಚಿನ ಸಂಸ್ಥೆಗಳು ಕೇವಲ ಕಾನೂನು ಪಾಲನೆಗಾಗಿ ಮಾಡುತ್ತಿವೆಯೇ ಹೊರತು, ಮಹಿಳೆಯರಿಗೆ ನಿಜವಾದ ಅಧಿಕಾರ ನೀಡುತ್ತಿಲ್ಲ.
ಕಡಿಮೆ ಪಾಲ್ಗೊಳ್ಳುವಿಕೆಗೆ ಕಾರಣಗಳೇನು?
ಭಾರತದಲ್ಲಿಮಹಿಳೆಯರು ಕೆಲಸಕ್ಕೆ ಬರುವುದನ್ನು ಕೇವಲ ಸಾಮಾಜಿಕ ಪದ್ಧತಿಗಳು ತಡೆಯುತ್ತಿಲ್ಲ, ಬದಲಾಗಿ ಅವರಿಗೆ ಪೂರಕವಾದ ಉದ್ಯೋಗಾವಕಾಶಗಳ ಕೊರತೆಯೂ ಇದೆ. ಕೇವಲ ಮಹಿಳೆಯರನ್ನು ಕೆಲಸಕ್ಕೆ ಸೇರಿಕೊಳ್ಳಿ ಎಂದು ಉತ್ತೇಜಿಸುವ ಬದಲು, ಅವರು ಕೆಲಸ ಮಾಡಬಲ್ಲಉತ್ಪಾದನಾ ವಲಯ ಮತ್ತು ಶ್ರಮದಾಯಕ ಉದ್ಯಮಗಳನ್ನು ಅಭಿವೃದ್ಧಿಪಡಿಸಬೇಕಿದೆ. ಇದರಿಂದ ವೇತನ ಹೆಚ್ಚಳದೊಂದಿಗೆ ಮಹಿಳೆಯರ ಆರ್ಥಿಕ ಭದ್ರತೆಯೂ ಸುಧಾರಿಸುತ್ತದೆ. ಭಾರತದ ಆರ್ಥಿಕತೆಯು ಸಮೃದ್ಧಿಯಾಗಬೇಕಾದರೆ ಮಹಿಳೆಯರು ಕೇವಲ ಕಾರ್ಮಿಕರಾಗಿ ಉಳಿಯದೇ, ಅವರು ಶಿಕ್ಷಣ, ಉದ್ಯಮ ಮತ್ತು ನಿರ್ಧಾರ ತೆಗೆದುಕೊಳ್ಳುವ ಉನ್ನತ ಹಂತಗಳಲ್ಲಿಸಮಾನವಾಗಿ ಪಾಲ್ಗೊಳ್ಳಬೇಕು. ಆಗ ಮಾತ್ರ ಮಹಿಳೆಯರು ಆರ್ಥಿಕತೆಗೆ ಹೆಚ್ಚಿನ ಶಕ್ತಿ ನೀಡಲು ಸಾಧ್ಯ.
ಬಾಕ್ಸ್ :
ಔಊP್ಕ ಎಂದರೇನು?
ಒಂದು ದೇಶದಲ್ಲಿಕಾರ್ಯನಿರ್ವಹಿಸುವ 15-64 ವರ್ಷ ವಯೋಮಾನದವರ ಒಟ್ಟು ಜನಸಂಖ್ಯೆಯಲ್ಲಿಎಷ್ಟು ಜನರು ಉದ್ಯೋಗದಲ್ಲಿದ್ದಾರೆ ಅಥವಾ ಉದ್ಯೋಗಕ್ಕಾಗಿ ಸಕ್ರಿಯವಾಗಿ ಹುಡುಕುತ್ತಿದ್ದಾರೆ ಎಂಬುದರ ಶೇಕಡಾವಾರು ಪ್ರಮಾಣವಾಗಿದೆ. ಇದು ದೇಶದ ಮಾನವ ಸಂಪನ್ಮೂಲದ ಬಳಕೆಯನ್ನು ಅಳೆಯುವ ಪ್ರಮುಖ ಮಾನದಂಡವಾಗಿದೆ.

