ಬೆಚ್ಚಿದ

Contributed bymanjunath.gowda@timesgroup.com|Vijaya Karnataka

ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗುಜರಾತ್ ಟೈಟನ್ಸ್‌ ತಂಡವನ್ನು 99 ರನ್‌ಗಳಿಂದ ಸೋಲಿಸಿತು. ತಿಲಕ್ ವರ್ಮಾ ಅವರ ಅಬ್ಬರದ ಶತಕ ತಂಡಕ್ಕೆ ದೊಡ್ಡ ಮೊತ್ತ ತಂದುಕೊಟ್ಟಿತು. ಅಶ್ವನಿ ಕುಮಾರ್ ಅವರ ಮಾರಕ ಬೌಲಿಂಗ್ ಗುಜರಾತ್ ಟೈಟನ್ಸ್‌ನ ಬ್ಯಾಟಿಂಗ್‌ ವೈಫಲ್ಯಕ್ಕೆ ಕಾರಣವಾಯಿತು. ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ಸತತ ಸೋಲುಗಳ ಬಳಿಕ ಗೆಲುವಿನ ಹಾದಿಗೆ ಮರಳಿತು.

ipl 2023 mumbai indians secure a spectacular 99 run victory

ಅಹಮದಾಬಾದ್ : ತಿಲಕ್ ವರ್ಮಾ(101*) ಅವರ ಸ್ಫೋಟಕ ಶತಕ ಹಾಗೂ ಅಶ್ವನಿ ಕುಮಾರ್ (24ಕ್ಕೆ 4) ಅವರ ಮಾರಕ ದಾಳಿಯ ಬಲದಿಂದ ಮುಂಬಯಿ ಇಂಡಿಯನ್ಸ್ ತಂಡ ಐಪಿಎಲ್ 30ನೇ ಪಂದ್ಯದಲ್ಲಿ99 ರನ್ ಗಳಿಂದ ಗುಜರಾತ್ ಟೈಟನ್ಸ್ ತಂಡವನ್ನು ಬಗ್ಗು ಬಡಿಯಿತು.

ಇದರೊಂದಿಗೆ ಸತತ 4 ಸೋಲುಗಳ ನಂತರ ಇಂಡಿಯನ್ಸ್ ಗೆಲುವಿನ ಹಾದಿಗೆ ಮರಳಿದರೆ, ಟೈಟನ್ಸ್ ಹ್ಯಾಟ್ರಿಕ್ ಜಯದ ಬಳಿಕ ಸೋಲು ಅನುಭವಿಸಿತು. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿಸೋಮವಾರ ನಡೆದ ಪಂದ್ಯದಲ್ಲಿಟಾಸ್ ಸೋತು ಬ್ಯಾಟಿಂಗ್ ಗೆ ಆಹ್ವಾನ ಪಡೆದ 5 ಬಾರಿಯ ಚಾಂಪಿಯನ್ ಮುಂಬಯಿ, 20 ಓವರ್ ಗಳಲ್ಲಿ5 ವಿಕೆಟ್ ಗೆ 199 ರನ್ ಕಲೆಹಾಕಿತು. ಇದಕ್ಕೆ ಪ್ರತಿಯಾಗಿ ಟೈಟನ್ಸ್ 15.5 ಓವರ್ ಗಳಲ್ಲಿ100 ರನ್ ಗಳಿಗೆ ಆಲೌಟಾಯಿತು. ತಂಡದ 7 ಸದಸ್ಯರು ಒಂದಂಕಿಗೆ ಸೀಮಿತರಾಗಿದ್ದು, ಬ್ಯಾಟಿಂಗ್ ವೈಫಲ್ಯಕ್ಕೆ ಸಾಕ್ಷಿ. ಸುದರ್ಶನ್ ಅವರನ್ನು ಔಟ್ ಮಾಡಿದ ಜಸ್ ಪ್ರಿತ್ ಬುಮ್ರಾ, 5 ಪಂದ್ಯಗಳ ನಂತರ ಕೊನೆಗೂ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

ಗುಜರಾತ್ ಟೈಟನ್ಸ್ : 15.5 ಓವರ್ ಗಳಲ್ಲಿ100 (ವಾಷಿಂಗ್ಟನ್ 26, ಶಾರುಖ್ 17;ಅಶ್ವನಿ 24ಕ್ಕೆ 4, ಸ್ಯಾಂಟ್ನರ್ 16ಕ್ಕೆ 2, ಘಜನ್ ಫರ್ 17ಕ್ಕೆ 2).