ನಾರಿ ಶಕ್ತಿ ವಂದನಾ ಅಧಿನಿಯಮ; ಕೇಂದ್ರದಿಂದ ಗೊಂದಲ ಸೃಷ್ಟಿ

Contributed bytvlbdr@gmail.com|Vijaya Karnataka

ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿಯಲ್ಲಿ ಮೋಸ ಮಾಡಿದೆ ಎಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಆರೋಪಿಸಿದೆ. ರಾಜಕೀಯ ಲಾಭಕ್ಕಾಗಿ ನಾರಿ ಶಕ್ತಿ ವಂದನಾ ಅಧಿನಿಯಮ ಬಳಸುತ್ತಿರುವುದು ಖಂಡನೀಯ. ಮಹಿಳಾ ಮೀಸಲಾತಿ ಜಾರಿಗೊಳಿಸಲು 2029ರ ಒಳಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು. ಮಹಿಳೆಯರಿಗೆ ಮತ್ತು ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಸಹಿಸಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.

women reservation controversy congress protests against central government

ಚಿತ್ರ:ರಾಜಶ್ರೀ ಶ್ರೀ ಕಾಂತ ಸ್ವಾಮಿ, ಚಿತ್ರವಿದೆ ಬಳಸಿ

*****

ನಾರಿ ಶಕ್ತಿ ವಂದನಾ ಅಧಿನಿಯಮ; ಕೇಂದ್ರದಿಂದ ಗೊಂದಲ ಸೃಷ್ಟಿ

ವಿಕಸುದ್ದಿಲೋಕ ಬೀದರ್

ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿಯಲ್ಲಿಮೋಸ ಮಾಡಿದೆ. ರಾಜಕೀಯ ಲಾಭಕ್ಕಾಗಿ ನಾರಿ ಶಕ್ತಿ ವಂದನಾ ಅಧಿನಿಯಮ ಬಳಸುತ್ತಿರುವುದು ಖಂಡನೀಯ. ಕೇಂದ್ರವು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದೆ. ಆದರೆ, ಮಹಿಳಾ ಮೀಸಲಾತಿಗೆ ಮೊದಲಿನಿಂದಲೂ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡುತ್ತಿದೆ ಎಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ರಾಜಶ್ರೀ ಶ್ರೀಕಾಂತ ಸ್ವಾಮಿ, ಜಿಲ್ಲಾಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪೂಜಾ ಜಾಜ್ ರ್ ತಿಳಿಸಿದ್ದಾರೆ.

ಪ್ರಕಟಣೆ ನೀಡಿರುವ ಅವರುಗಳು, ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಮಹಿಳೆಯರ ಪರವಿದೆ. ಕೇವಲ ಭಾಷಣದಿಂದಲ್ಲಕೃತಿಯಿಂದಲೂ ಮಹಿಳೆಯರ ಪರವಾಗಿದೆ ಎಂದಿದ್ದಾರೆ. ಮಹಿಳಾ ಮೀಸಲಾತಿ , ಪಂಚಾಯತ್ ರಾಜ್ , ಸ್ಥಳೀಯ ಸಂಸ್ಥೆಗಳಲ್ಲಿಮೀಸಲಾತಿಯನ್ನು ಕಾಂಗ್ರೆಸ್ ಕೊಡಿಸಿದೆ. ಅನೇಕ ಮಹಿಳೆಯರಿಗೆ ದೇಶದ ಅತ್ಯುನ್ನತ ಸ್ಥಾನಗಳನ್ನು ನೀಡಿರುವ ಕೀರ್ತಿ ಕಾಂಗ್ರೆಸ್ ಗೆ ಸಲ್ಲಿದರೆ, ಕಾಂಗ್ರೆಸ್ ಮಹಿಳಾ ನಾಯಕಿಯರಿಗೆ ಅಶ್ಲೀಲವಾಗಿ ನಿಂದನೆ ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದಿದ್ದಾರೆ.

ಕೇಂದ್ರ ಸರ್ಕಾರ ತರಲು ಇಚ್ಛಿಸಿದ್ದ ಕ್ಷೇತ್ರ ಪುನರ್ವಿಂಗಡಣೆ ತಿದ್ದುಪಡಿ ಅಧಿನಿಯಮದ ವಿರುದ್ಧ ಕಾಂಗ್ರೆಸ್ ಪಕ್ಷ ಅಧಿವೇಶನದಲ್ಲಿವಿರೋಧ ಮಾಡಿದೆ. ಈ ಬಿಲ್ ಬಿದ್ದು ಹೋಗಿ ಸರ್ಕಾರದ ಹೀನ ಮನಸ್ಥಿತಿ ಜನತೆಯ ಮುಂದೆ ಬೆಳಕಿಗೆ ಬಂದಿದೆ ಎಂದೂ ಅವರು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಕೇಂದ್ರ ಸರಕಾರ ತಿದ್ದುಪಡಿ ಕಾಯಿದೆ ತರದೆ ಈಗಿರುವ 543 ಲೋಕಸಭಾ ಕ್ಷೇತ್ರಗಳಲ್ಲಿಮಹಿಳೆಯರಿಗೆ ಮೀಸಲಾತಿಯನ್ನು 2029ರ ಒಳಗೆ ಜಾರಿ ಮಾಡಬೇಕು ಎಂದಿರುವ ಅವರು, ನೆಪ ಹೇಳಿ ಮಹಿಳಾ ಮೀಸಲಾತಿ ನನೆಗುದಿಗೆ ಹಾಕಬಾರದು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು. ಜನರ ಮಧೆÜ್ಯ ಹೋಗಿ ವಿಷಯ ಜನಸಾಮಾನ್ಯರಿಗೆ ತಲುಪಿಸಿ, ಇನ್ನಷ್ಟು ಹೋರಾಟ ಮಾಡಲಾಗುವುದು. ಮಹಿಳೆಯರಿಗೆ ಮತ್ತು ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಸಹಿಸಲಾಗುವುದಿಲ್ಲಎಂದು ಅವರುಗಳು ಎಚ್ಚರಿಕೆ ನೀಡಿದ್ದಾರೆ.

ಧಿ