ವಿಧೇಯಕ ಸೋಲು , ಪ್ರಧಾನಿ ರಾಜೀನಾಮೆಗೆ ಒತ್ತಾಯ
ವಿಕ ಸುದ್ದಿಲೋಕ ತರೀಕೆರೆ
ಮಹಿಳಾ ಮೀಸಲು ವಿಧೇಯಕಕ್ಕೆ ಲೋಕಸಭೆಯಲ್ಲಿಸೋಲುಂಟಾಗಿದ್ದು, ನೈತಿಕ ಹೊಣೆ ಹೊತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಜಿಲ್ಲಾಮಾಧ್ಯಮ ವಕ್ತಾರ ಎಲ್ .ಟಿ.ಹೇಮಣ್ಣ ಒತ್ತಾಯಿಸಿದ್ದಾರೆ.
ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿಸಾರ್ವಜನಿಕವಾಗಿ ಚರ್ಚೆಗೆ ಅವಕಾಶ ಕೊಡದೆ ಹಾಗೂ ಲೋಕಸಭೆ ವಿಶೇಷ ಅಧಿವೇಶನದಲ್ಲಿಅಲ್ಪಾವಧಿ ಚರ್ಚೆಯ ನಂತರ ಏಕಾಏಕಿಯಾಗಿ ಅವೈಜ್ಞಾನಿಕತೆಯಿಂದ ಕೂಡಿದ್ದ ಮಹಿಳಾ ಮೀಸಲಾತಿ ತಿದ್ದುಪಡಿ ವಿಧೇಯಕ ಹಾಗೂ ಕ್ಷೇತ್ರಗಳ ಪುನರ್ ವಿಂಗಡಣೆ ವಿಧೇಯಕವನ್ನು ಸಂಸತ್ತಿನಲ್ಲಿಮಂಡಿಸಿದ್ದು, ಸೋಲು ಉಂಟಾಗಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಯುಪಿಎ ಸರಕಾರದಲ್ಲಿಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ಮಹಿಳೆಯರಿಗೆ ಎಲ್ಲರಂಗಗಳಲ್ಲಿಯೂ ಶೇ.33ರಷ್ಟು ಮೀಸಲಾತಿ ತರಲು ಲೋಕಸಭೆ ಅಧಿವೇಶನದಲ್ಲಿವಿಧೇಯಕ ಮಂಡಿಸಿ ಗೆಲುವು ಸಾಧಿಸಿದ್ದರು. ಆ ಸಮಯದಲ್ಲಿಬಿಜೆಪಿ ನಾಯಕರು ವಿಧೇಯಕವನ್ನು ವಿರೋಧಿಸಿದ್ದರು. ಈಗ ಅಧಿಕಾರದ ಅಮಲಿನಲ್ಲಿ, ಸ್ವಾರ್ಥ ಸಾಧನೆಗಾಗಿ ಲೋಕಸಭೆಯಲ್ಲಿವಿಧೇಯಕದ ಕರಡನ್ನು ಮಂಡಿಸಿರುವ ಮೋದಿ ಸೋಲು ಅನುಭವಿಸಿದ್ದಾರೆ ಎಂದು ತಿಳಿಸಿದ್ದಾರೆ.
ಲೋಕಸಭೆಯ ಪ್ರತಿ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ವಿಧೇಯಕಗಳಿಂದ ಉಂಟಾಗುವ ತೊಂದರೆ ಕುರಿತು ಸರಳವಾಗಿ, ನ್ಯಾಯ ಸಮ್ಮತ ವಿವರಣೆಯನ್ನು ಚರ್ಚೆ ಮೂಲಕ ಮಂಡಿಸಿದ್ದಾರೆ ಎಂದು ತಿಳಿಸಿದ್ದಾರೆ.
21ತರೀಕೆರೆ3 :
ಎಲ್ .ಟಿ.ಹೇಮಣ್ಣ.

