ಬೇಸಿಗೆ ಕಾಲದಲ್ಲಿಆಹಾರ ಕ್ರಮ
ಡಾ. ಶಿವಶಂಕರಪ್ರಸಾದ. ಎಸ್ . ದೇವಲಾಪುರ
ಇಂಟ್ರೊ: ಬೇಸಿಗೆಯ ಡಯಟ್ ನಲ್ಲಿಕೆಲವು ಹಣ್ಣು, ತರಕಾರಿ ಹಾಗೂ ಪಾನೀಯಗಳಿಗೆ ಪ್ರಾಮುಖ್ಯ ನೀಡಿ.
ಬೇಸಿಗೆಯ ಈ ಹೊತ್ತಲ್ಲಿ ಸೂರ್ಯನ ತೀಕ್ಷ$್ಣ ಕಿರಣಗಳು ನೇರವಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿವೆ.
ನಿರ್ಜಲೀಕರಣ, ಅಲರ್ಜಿ ಮತ್ತು ಜೀವಸತ್ವಗಳ ಕೊರತೆ ಈ ಸಂದರ್ಭದಲ್ಲಿಸಾಮಾನ್ಯ. ಅತೀ ತಾಪವು ಶರೀರವನ್ನು ಪೀಡಿಸುವುದಲ್ಲದೇ ಮಾನಸಿಕವಾಗಿಯೂ ಹಿಂಸಿಸುತ್ತದೆ. ಹೀಗಾಗಿ ಈ ಸಮಯದಲ್ಲಿಅಹಾರ ಕ್ರಮದ ಬಗ್ಗೆ ವಿಶೇಷ ಗಮನ ನೀಡಬೇಕು. ತಾಜಾ, ಸುಲಭವಾಗಿ ಜೀರ್ಣವಾಗುವ ಮತ್ತು ಶರೀರವನ್ನು ತಂಪಾಗಿ ಇಡುವ ಹಣ್ಣು, ತರಕಾರಿಗಳು, ಜ್ಯೂಸ್ ಹಾಗೂ ಮಿಲ್ಕ ಶೇಕ್ ಗಳನ್ನು ಸೇವಿಸಬೇಕು.
ಬೇಸಿಗೆಗೆ ಹಿತ ಈ ತರಕಾರಿ
ಸೋರೆಕಾಯಿ ಶರೀರದ ಉಷ್ಣತೆಯನ್ನು ತಗ್ಗಿಸಿ ಶೀತ ಅನುಭವ ನೀಡುತ್ತದೆ. ಇದರ ಪಲ್ಯೆ ಹಾಗೂ ಜ್ಯೂಸ್ ತಯಾರಿಸಿ ಸೇವಿಸಬಹುದು. ಕಹಿ ಸೋರೆಕಾಯಿ ಆರೋಗ್ಯಕ್ಕೆ ಹಾನಿಕರ. ಕುಂಬಳಕಾಯಿಯಲ್ಲಿಆ್ಯಂಟಿ ಆಕ್ಸಿಡಂಟ್ಸ್ , ಕ್ಯಾರೋಟಿನ್ ಹಾಗೂ ಪಾಲಿಪಿನಾಲ್ಸ್ ಹೇರಳವಾಗಿರುವುದರಿಂದ ಶರೀರದ ಉಷ್ಣತೆಯನ್ನು ನಿಯಂತ್ರಿಸುತ್ತದೆ. ಹೀರೆಕಾಯಿ ಹೊಟ್ಟೆಯಲ್ಲಿನ ಆಮ್ಲತೆಯನ್ನು ಕಡಿಮೆಮಾಡಿ ಅಲ್ಸರನ್ನು ತಡೆಗಟ್ಟುತ್ತದೆ. ಚವಳಿಕಾಯಿ ನರಕೋಶಗಳಿಗೆ ಚೈತನ್ಯ ನೀಡಿ ದಣಿವನ್ನು ನಿವಾರಿಸುತ್ತದೆ. ಬೂದು ಕುಂಬಳಕಾಯಿ ಶರೀರವನ್ನು ತಂಪಾಗಿಸುವ ಗುಣ ಹೊಂದಿದೆ. ಸಿಹಿ ಮೆಕ್ಕೆಜೋಳ ಲೂಟಿನ್ ಹಾಗೂ ಜಿಜಾಂಥಿನ್ ಹೇರಳವಾಗಿರುವುದರಿಂದ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಇವುಗಳಷ್ಟೇ ಅಲ್ಲದೇ ಎಲೆಕೋಸು, ಹೂಕೋಸು, ಬ್ರೊಕೊಲಿ, ದೊಡ್ಡ ಮೆಣಸಿನಕಾಯಿ, ಬದನೆಕಾಯಿ, ಹಾಗಲಕಾಯಿ, ಸವತೆಕಾಯಿ, ಸಬ್ಬಸಿಗೆ, ಪಾಲಕ್ ಸೊಪ್ಪು ಬಳಸಬಹುದು.
ಹಿತಕರ ಪಾನೀಯ
ಜೀರಿಗೆಯನ್ನು ರಾತ್ರಿ ನೀರಿನಲ್ಲಿನೆನೆಸಿಟ್ಟು ಮರುದಿವಸ ಬೆಳಗ್ಗೆ ಕುಡಿಯಬೇಕು. ಗಸಗಸೆಯನ್ನು ರಾತ್ರಿ ನೀರಿನೊಂದಿಗೆ ಬೆರೆಸಿ ಕುಡಿಯುವುದರಿಂದ ಸುಖ ನಿದ್ರೆಯಾಗಿ ಶರೀರ ತಂಪಾಗುವುದು. ಅಗಸೆ ಬೀಜವನ್ನು ಆ್ಯಂಟಿ ಆಕ್ಸಿಡಂಟ್ಸ್ ಹೇರಳವಾಗಿರುವುದರಿಂದ ಬೇಸಿಗೆಯಲ್ಲಿತ್ವಚೆ ಹಾಗೂ ಕೇಶದ ಆರೋಗ್ಯವನ್ನು ಇದು ಕಾಪಾಡುತ್ತದೆ. ತುಳಸಿ ಬೀಜವನ್ನು ರಾತ್ರಿ ನೀರಿನಲ್ಲಿನೆನೆಸಿಟ್ಟು ಮರುದಿವಸ ಬೆಳಗ್ಗೆ ಫಿಲ್ಟರ್ ಮಾಡದೇ ಕುಡಯಬೇಕು.
ಬಾಕ್ಸ್
ಹಣ್ಣುಗಳ ವೈವಿಧ್ಯ
ಒಣ ಹಣ್ಣುಗಳಾದ ಖರ್ಜೂರ, ಅಂಜೂರ, ಒಣ ದ್ರಾಕ್ಷಿ ಹಾಗೂ ಎಪ್ರಿಕಾಟ್ ಗಳನ್ನು ಸೇವಿಸಬಹುದು.
ತಾಜಾ ಹಣ್ಣುಗಳಲ್ಲಿಕಲ್ಲಂಗಡಿ ಹಿತ. ಇದರಲ್ಲಿನೀರಿನಂಶ ಹೇರಳವಾಗಿರುವುದರಿಂದ ನಿರ್ಜಲೀಕರಣ ತಡೆಗಟ್ಟುತ್ತದೆ ಹಾಗೂ ಹೊಟ್ಟೆಯ ಉರಿಯನ್ನು ಶಾಂತಗೊಳಿಸುತ್ತದೆ.
ಕಿತ್ತಳೆಯಲಿ ್ಲವಿಟಮಿನ್ ಸಿ ಹೇರಳವಾಗಿರುವುದರಿಂದ ಜೀವಕೋಶಗಳ ಹಾನಿ ತಡೆಗಟ್ಟುತ್ತದೆ. ಬೆರ್ರಿ ಹಣ್ಣುಗಳು, ಸೇಬುಹಣ್ಣು, ಸೀಬೆಕಾಯಿ, ಕಿವಿಹಣ್ಣು ಸೇವಿಸಬಹುದು.

