ವಿದ್ಯಾ ನವೀನ್

Contributed byshubha.hegde@timesgroup.com|Vijaya Karnataka

ಸರಳ ಉಡುಪುಗಳಲ್ಲೂ ಆಕರ್ಷಕವಾಗಿ ಕಾಣಲು ಕೆಲವು ಸಲಹೆಗಳು ಇಲ್ಲಿವೆ. ಸರಿಯಾದ ಫಿಟ್‌ನ ಬಟ್ಟೆಗಳನ್ನು ಆಯ್ಕೆ ಮಾಡುವುದು ಮೊದಲ ಆದ್ಯತೆ. ಬಿಳಿ, ಕಪ್ಪು, ಬೇಜ್‌ ಬಣ್ಣಗಳು ಉತ್ತಮ. ಬಟ್ಟೆಗಳು ಸ್ವಚ್ಛವಾಗಿರಲಿ. ಕಡಿಮೆ ಆಭರಣ, ಸರಿಯಾದ ಚಪ್ಪಲಿ ಬಳಸಿ. ಜಾಕೆಟ್‌, ಶ್ರಗ್‌ ಲೇಯರಿಂಗ್‌ ಲುಕ್‌ ಹೆಚ್ಚಿಸುತ್ತದೆ. ಉತ್ತಮ ಕೇಶಾಲಂಕಾರ, ಲೈಟ್‌ ಮೇಕಪ್‌ ಮತ್ತು ಆತ್ಮವಿಶ್ವಾಸ ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಸರಳತೆ ಮತ್ತು ಆತ್ಮವಿಶ್ವಾಸವೇ ನಿಜವಾದ ಸ್ಟೈಲ್‌.

how to look stylish only in simple clothes

ಸರಳ ಬಟ್ಟೆಗಳಲ್ಲಿಸ್ಟೈಲಿಶ್ ಆಗಿ ಕಾಣುವುದು ಹೇಗೆ?

ಯಾವುದೇ ಬಟ್ಟೆಯಲ್ಲಿಆಕರ್ಷಕವಾಗಿ ಕಾಣಿಸಬೇಕು ಅಂದರೆ ಅದಕ್ಕೆ ಕೆಲವು ಸೂತ್ರಗಳನ್ನು ಅನುಸರಿಸಿ. ಮೊದಲಿಗೆ ನಿಮಗೆ ಸರಿಯಾಗಿ ಹೊಂದುವ ಅಂದರೆ ಫಿಟ್ ಆಗಿರುವ ಬಟ್ಟೆಗಳನ್ನು ಆಯ್ಕೆ ಮಾಡುವುದು ಮುಖ್ಯ. ಸರಿಯಾದ ಫಿಟ್ ನಿಮ್ಮ ಲುಕ್ ಅನ್ನು ತಕ್ಷಣವೇ ಆಕರ್ಷಕವಾಗಿಸುತ್ತದೆ.

ಬಿಳಿ, ಕಪ್ಪು, ಬೇಜ್ ಅಥವಾ ಲೈಟ್ ಪಾಸ್ಟೆಲ್ ಬಣ್ಣಗಳಂತಹ ಸರಳ ಬಣ್ಣಗಳನ್ನು ಆಯ್ಕೆ ಮಾಡಿ. ಇವುಗಳನ್ನು ಸುಲಭವಾಗಿ ಮಿP್ಸ… ಮ್ಯಾಚ್ ಮಾಡಬಹುದು. ಬಟ್ಟೆಗಳು ಯಾವಾಗಲೂ ಸ್ವಚ್ಛವಾಗಿದ್ದು, ಮಡಚಿಲ್ಲದಂತೆ ಇರಬೇಕು. ಏಕೆಂದರೆ ಇದು ನಿಮ್ಮ ಸ್ಟೈಲ್ ಗೆ ತುಂಬಾ ಮುಖ್ಯ.

ಕಡಿಮೆ ಆಭರಣಗಳು ಉದಾಹರಣೆಗೆ ವಾಚ್ , ಸಣ್ಣ ಕಿವಿಯೋಲೆಗಳು ಅಥವಾ ಸರಳ ಬ್ಯಾಗ್ ಬಳಸುವುದರಿಂದ ನಿಮ್ಮ ಲುಕ್ ಹೆಚ್ಚುತ್ತದೆ. ಸರಿಯಾದ ಚಪ್ಪಲಿ ಕೂಡ ಮುಖ್ಯ ಪಾತ್ರ ವಹಿಸುತ್ತದೆ. ಜಾಕೆಟ್ , ಶ್ರಗ್ ಅಥವಾ ದುಪಟ್ಟಾ ಬಳಸಿ ಲೇಯರಿಂಗ್ ಮಾಡಿದರೆ ಇನ್ನಷ್ಟು ಸ್ಟೈಲಿಶ್ ಆಗಿ ಕಾಣಬಹುದು. ಅದರ ಜೊತೆಗೆ ಚೆನ್ನಾಗಿ ಕೂದಲನ್ನು ಬಾಚುವುದು, ಲೈಟ್ ಮೇಕಪ್ ಮತ್ತು ಆತ್ಮವಿಶ್ವಾಸ ನಿಮ್ಮ ಸಂಪೂರ್ಣ ಲುಕ್ ಅನ್ನು ಹೆಚ್ಚಿಸುತ್ತದೆ. ಸರಳತೆ ಮತ್ತು ಆತ್ಮವಿಶ್ವಾಸವೇ ನಿಜವಾದ ಸ್ಟೈಲ್ .