ವಿಕ ಸುದ್ದಿಲೋಕ ಮಂಗಳೂರು
ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಿಂದ 2026ನೇ ಶೈಕ್ಷಣಿಕ ಸಾಲಿನ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಅಧಿಸೂಚನೆ ಹೊರಡಿಸಲಾಗಿದ್ದು, ಬೆಳ್ತಂಗಡಿ ತಾಲೂಕಿನ ಮಾಲಾಡಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿಎಸ್ ಎಸ್ ಎಲ್ ಸಿ ಪಾಸಾದ ಅಭ್ಯರ್ಥಿಗಳಿಂದ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಏ.27ರಿಂದ ಮೇ 8ರವರೆಗೆ ಇಲಾಖಾ ವೆಬ್ ಸೈಟ್ ಡಿಡಿಡಿ.್ಚಜಿಠಿಛಿ.ka್ಟ್ಞaಠಿaka.ಜಟv.ಜ್ಞಿ ಲ್ಲಿಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸಲು ಮೇ 8ಕೊನೆಯ ದಿನ. ಮಹಿಳಾ ಅಭ್ಯರ್ಥಿಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.
ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಡಿ ಬರುವ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿನೀಡುವ ತರಬೇತಿಯಿಂದ ವಿದ್ಯಾರ್ಥಿಗಳ ಕೌಶಲ್ಯತೆ ಅಭಿವೃದ್ಧಿ ಹೊಂದಿ ಉದ್ಯಮಗಳಲ್ಲಿಹೆಚ್ಚಿನ ಉದ್ಯೋಗವಕಾಶಗಳು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿಉದ್ಯೋಗಕ್ಕೆ ಸದಾವಕಾಶಗಳು ಇದ್ದು ಹಾಗೂ ಹೆಚ್ಚಿನ ವೇತನವನ್ನು ಪಡೆಯಲು ಅರ್ಹತೆ ಹೊಂದಿರುತ್ತಾರೆ.
ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿತರಬೇತಿ ಹೊಂದಿ ಸ್ವಯಂ ಉದ್ಯೋಗ ಮಾಡಲು ಅವಕಾಶವಿರುತ್ತದೆ. ಸಂಸ್ಥೆಯಲ್ಲಿತರಬೇತಿ ಹೊಂದಿರುವ ತರಬೇತಿದಾರರಿಗೆ ಕೇಂದ್ರ ಸರಕಾರದಿಂದ ಎನ್ ಟಿಸಿ (ನ್ಯಾಷನಲ್ ಟ್ರೈನಿಂಗ್ ಸರ್ಟಿಫಿಕೇಟ್ ) ದೃಢೀಕರಣ ಪತ್ರ ನೀಡಲಾಗುವುದು. ಇದರಿಂದ ಎಲ್ಲದೇಶಗಳಲ್ಲಿಉದ್ಯೋಗ ಪಡೆಯಲು ಅವಕಾಶವಿರುತ್ತದೆ.
ಹೆಚ್ಚಿನ ಮಾಹಿತಿಗೆ ಸಂಸ್ಥೆಯ ಪ್ರಿನ್ಸಿಪಾಲ್ ದೂರವಾಣಿ ಸಂಖ್ಯೆ: 6361060652, 9611375614 ಅಥವಾ 08256-200606 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

