ಜನಿವಾರಕ್ಕೆ ಕತ್ತರಿ ಖಂಡನೀಯ
ವಿಕ ಸುದ್ದಿಲೋಕ ವಿಜಯಪುರ
ಬೆಂಗಳೂರು ನಗರದ ಖಾಸಗಿ ಶಾಲೆ, ಚಿಕ್ಕಬಳ್ಳಾಪುರದಲ್ಲಿಪರೀಕ್ಷೆಯ ವೇಳೆ ಬ್ರಾಹ್ಮಣ ಸಮುದಾಯ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿರುವ ಘಟನೆ ಖಂಡನೀಯ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನಿರ್ದೇಶಕ ಜಿ.ಸತೀಶ್ ಕುಮಾರ್ ಹೇಳಿದರು.
ಪಟ್ಟಣದಲ್ಲಿನಡೆದ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಸಿಇಟಿ ಪರೀಕ್ಷೆಯ ವೇಳೆ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿರುವುದು ನಮಗೆ ತುಂಬಾ ನೋವು ತಂದಿದೆ. ಪರೀಕ್ಷಾ ಕೇಂದ್ರಗಳಲ್ಲಿಎಲೆಕ್ಟ್ರಾನಿಕ್ ವಸ್ತು ಪತ್ತೆ ಹಚ್ಚಲು ಡಿಟೆಕ್ಟರ್ ಬಳಸುವಾಗ, ಕೇವಲ ನೂಲಿನಿಂದ ತಯಾರಿಸಿದ, ದ್ವಿಜತ್ವದ ಸಂಕೇತವಾದ ಜನಿವಾರವನ್ನು ಕತ್ತರಿಸಿರುವುದು ಅಕ್ಷಮ್ಯ. ತಪ್ಪಿತಸ್ಥರಿಗೆ ಶಿಕ್ಷೆ ನೀಡುವುದರ ಜತೆಗೆ, ಪುನಃ ಜನಿವಾರ ಧರಿಸುವ ಧಾರ್ಮಿಕ ಕಾರ್ಯಕ್ರಮದ ವೆಚ್ಚವನ್ನು ತಪ್ಪಿತಸ್ಥರೇ ಭರಿಸುವಂತೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ, ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
28.ವಿಜಯಪುರ 03: ಜಿ.ಸತೀಶ್ ಕುಮಾರ್ .

