ಮಸ್ಕಿ- ವಿದ್ಯುತ್ ಕಂಬ ಧರೆಗೆ

Contributed byazizvk51@gmail.com|Vijaya Karnataka

ಮಸ್ಕಿ ಪಟ್ಟಣದಲ್ಲಿ ಗುಡುಗು, ಸಿಡಿಲಿನ ಆರ್ಭಟ ಜೋರಾಗಿತ್ತು. ಇದರಿಂದಾಗಿ ಹಲವು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದಿವೆ. ಇದರಿಂದ ಪಟ್ಟಣದ ಹಲವು ಬಡಾವಣೆಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಸಂತೆ ಕೆಲ್ಲೂರು, ಹಾಲಾಪುರ, ಬಳಗಾನೂರು, ಮೆದ್ಕಿನಾಳ ಹೋಬಳಿಗಳ ಹಳ್ಳಿಗಳಲ್ಲೂ 40ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಹಾನಿಗೊಳಗಾಗಿವೆ. ಕಣವಿ ಆಂಜನೇಯ ದೇಗುಲ ಬಳಿ ಸಿಡಿಲು ಬಡಿದು ತೆಂಗಿನ ಮರ ಸುಟ್ಟು ಹೋಗಿದೆ.

maski hit lightning strikes power poles

ಸಿಡಿಲಿನ ಆರ್ಭಟ, ಬೆಚ್ಚಿ ಬಿದ್ದ ಜನ

ವಿದ್ಯುತ್ ಕಂಬ ಧರೆಗೆ

ಮಸ್ಕಿ : ಗುಡುಗು, ಸಿಡಿಲಿನ ಆರ್ಭಟಕ್ಕೆ ಪಟ್ಟಣದ ಜನ ಬೆಚ್ಚಿ ಬಿದ್ದರು. ಸೋಮವಾರ ಸಂಜೆ ಗುಡುಗು ಸಿಡಿಲಿನ ಆರ್ಭಟದಿಂದ ಕೆಲ ಹೊತ್ತು ಮಳೆ ಬಂದ ಕಾರಣ ಸಿಡಿಲಿನ ಶಬ್ದಕ್ಕೆ ಮಕ್ಕಳು ಬೆಚ್ಚಿ ಬಿದ್ದರು.

ಮಳೆ ಜತೆ ಜೋರಾಗಿ ಗಾಳಿ ಬೀಸಿದ ಕಾರಣ ಪಟ್ಟಣದ ಕೆಲ ಬಡಾವಣೆಗಳ ಬಳಿಯ ವಿದ್ಯುತ್ ಕಂಬ, ಮರಗಳು ನೆಲಕ್ಕುರಿಳಿದ ಕಾರಣ ವಿದ್ಯುತ್ ಪೂರೈಕೆ ಸ್ಥಗಿತಗೊಂಡು ಸಾರ್ವಜನಿಕರು ತೊಂದರೆ ಅನುಭವಿಸಿದರು. ಪಟ್ಟಣದ ಕಣವಿ ಆಂಜನೇಯ ದೇಗುಲ ಬಳಿ ಸಿಡಿಲು ಬಡಿದು ತೆಂಗಿನ ಮರ ಸುಟ್ಟು ಹೋಗಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ತಾಲೂಕಿನ ಸಂತೆ ಕೆಲ್ಲೂರು, ಹಾಲಾಪುರ, ಬಳಗಾನೂರು, ಮೆದ್ಕಿನಾಳ ಹೋಬಳಿಗಳ ನಾನಾ ಹಳ್ಳಿಗಳಲ್ಲಿ40 ವಿದ್ಯುತ್ ಕಂಬಗಳು ನೆಲದ ಪಾಲಾಗಿವೆ. ಮರದ ಟೊಂಗೆಗಳು ವಿದ್ಯುತ್ ಕಂಬಗಳ ತಂತಿಗಳ ಮೇಲೆ ಬಿದ್ದಿರುವ ಕಾರಣ ವಿದ್ಯುತ್ ಪೂರೈಕೆಯಲ್ಲಿವ್ಯತ್ಯಯವಾಗಿದೆ ಎಂದು ಜೆಸ್ಕಾಂ ಎಂಜಿನಿಯರ್ ವೆಂಕಟೇಶ ತಿಳಿಸಿದ್ದಾರೆ.

---

ಆರ್ ಸಿಎಚ್ 28ಎಂಎಸ್ ಕೆಫೋಟೊ01:

ಮಸ್ಕಿ ತಾಲೂಕಿನ ಉಸ್ಕಿಹಾಳ ಗ್ರಾಮದ ಬಳಿಯ ವಿದ್ಯುತ್ ಕಂಬದ ಮೇಲೆ ಮರ ಬಿದ್ದಿರುವುದು.