ಲಿಂಗಣಾಪುರ ಬಡಾವಣೆಯಲ್ಲಿ ಬಸವ ಜಯಂತಿ ಆಚರಣೆ

Contributed byaajayadvt@gmail.com|Vijaya Karnataka

ಕೊಳ್ಳೇಗಾಲದ ಲಿಂಗಣಾಪುರ ಬಡಾವಣೆಯಲ್ಲಿ ಬಸವ ಜಯಂತಿಯನ್ನು ಸಡಗರದಿಂದ ಆಚರಿಸಲಾಯಿತು. ಬಸವಣ್ಣನವರ ಭಾವಚಿತ್ರವನ್ನು ಅಲಂಕೃತ ವಾಹನದಲ್ಲಿಟ್ಟು ಮೆರವಣಿಗೆ ಮಾಡಲಾಯಿತು. ವೀರಗಾಸೆ, ಮಂಗಳವಾದ್ಯ ಸೇರಿದಂತೆ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದವು. ಬೀದಿಗಳನ್ನು ವಿದ್ಯುತ್ ದೀಪ, ತಳಿರು ತೋರಣ, ರಂಗೋಲಿಗಳಿಂದ ಅಲಂಕರಿಸಲಾಗಿತ್ತು. ನಂತರ ದಾಸೋಹ ಕಾರ್ಯ ನಡೆಯಿತು.

festive celebrations of basava jayanti in linganapura neighborhood

ಕೊಳ್ಳೇಗಾಲ: ಪಟ್ಟಣದ ಲಿಂಗಣಾಪುರ ಬಡಾವಣೆಯಲ್ಲಿಬಸವ ಜಯಂತಿ ಪ್ರಯುಕ್ತ ಬಸವಣನವರ ಭಾವಚಿತ್ರ ಮೆರಣಿಗೆ ಅದ್ಧೂರಿಯಾಗಿ ನಡೆಯಿತು.

ಸಂಜೆ ಅಲಂಕೃತ ವಾಹನದಲ್ಲಿಟ್ಟು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಬಳಿಕ ಬಡಾವಣೆಯ ಬೀದಿಗಳಲ್ಲಿಮೆರವಣಿಗೆ ನಡೆಸಲಾಯಿತು. ವೀರಗಾಸೆ, ಮಂಗಳವಾದ್ಯ ಸೇರಿದಂತೆ ಇತರೆ ಕಲಾತಂಡಗಳು ಪಾಲ್ಗೊಂಡು ಮೆರವಣಿಗೆಗೆ ಮೆರಗು ಹೆಚ್ಚಿಸಿದವು. ಬಡಾವಣೆಯ ಬೀದಿಗಳಲ್ಲಿವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಿ, ತಳಿರು ತೋರಣಗಳನ್ನು ಕಟ್ಟಿ, ರಂಗೋಲೆ ಹಾಕಿ ಹಬ್ದದ ವಾತಾವರಣ ನಿರ್ಮಾಣ ಮಾಡಲಾಗಿತ್ತು.

ಮುಖಂಡರಾದ ಅನೀಲ್ ಕುಮಾರ್ , ಶಿವಪ್ಪ, ಪ್ರಸಾದ್ , ಕಿರಣ್ , ಚಿನ್ನಪ್ಪ, ಮಹದೇವಪ್ಪ, ಲಿಂಗರಾಜಪ್ಪ. ಶಾಂತರಾಜು, ಮಹದೇವಸ್ವಾಮಿ, ಬಸವಣ್ಣ, ಪುನೀತ್ ಮುಂತಾದವರು ಪಾಲ್ಗೊಂಡಿದ್ದರು. ನಂತರ ದಾಸೋಹ ಕಾರ್ಯ ನಡೆಯಿತು.

ಫೋಟೋ ಕೆಜಿಎಲ್ 28-2:

ಕೊಳ್ಳೇಗಾಲ ಪಟ್ಟಣದ ಲಿಂಗಣಾಪುರ ಬಡಾವಣೆಯಲ್ಲಿಬಸವ ಜಯಂತಿ ಪ್ರಯುಕ್ತ ಬಸವಣ್ಣನವರ ಭಾವಚಿತ್ರದ ಮೆರಣಿಗೆ ಅದ್ಧೂರಿಯಾಗಿ ನಡೆಯಿತು.