ಬುಡ್ಡಮ್ಮ ದೇವಿ ಕುಂಭೋತ್ಸವ

Contributed byshreekanta.akki@timesofindia.com|Vijaya Karnataka

ಕೊಪ್ಪಳ ತಾಲೂಕಿನ ಮೈನಹಳ್ಳಿ ಗ್ರಾಮದಲ್ಲಿ ಶ್ರೀ ಶಿವಶರಣಿ ಬುಡ್ಡಮ್ಮ ದೇವಿಯ ನೂತನ ಮೂರ್ತಿಯ ಗ್ರಾಮ ಪ್ರವೇಶ ಹಾಗೂ ಕುಂಭೋತ್ಸವ ಅದ್ದೂರಿಯಾಗಿ ನಡೆಯಿತು. ಗ್ರಾಮಸ್ಥರು, ಭಕ್ತರು, ಸಮ್ಮೇಳ, ನಂದಿಕೋಲು, ಭಜನಾ ಮಂಡಳಿಯವರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಸುಮಂಗಲೆಯರು 151 ಕುಂಭಗಳನ್ನು ಹೊತ್ತು ದೇವಸ್ಥಾನದವರೆಗೆ ಶೋಭಾಯಾತ್ರೆ ನಡೆಸಿದರು. ಬಳಿಕ ಮೂರ್ತಿಗೆ ಜಲವಾಸ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

shivasharani buddammas kumbha utsava celebration

ಬುಡ್ಡಮ್ಮ ದೇವಿ ಕುಂಭೋತ್ಸವ

ಕೊಪ್ಪಳ: ತಾಲೂಕಿನ ಮೈನಹಳ್ಳಿ ಗ್ರಾಮದಲ್ಲಿಶ್ರೀ ಶಿವಶರಣಿ ಬುಡ್ಡಮ್ಮ ದೇವಿಯ ನೂತನ ಮೂರ್ತಿಯ ಗ್ರಾಮ ಪ್ರವೇಶ ಹಾಗೂ ಕುಂಭೋತ್ಸವ ನೆರವೇರಿತು.

ಊರಿನ ಸಕಲ ಸದ್ಭಕ್ತರು, ಸಮ್ಮೇಳ, ನಂದಿಕೋಲು ಹಾಗೂ ಭಜನಾ ಮಂಡಳಿಯವರು ಭಾಗವಹಿಸಿ, ಮೆರವಣಿಗೆ ನಡೆಸಿದರು. ಸುಮಂಗಲೆಯರು 151 ಕುಂಭಗಳನ್ನು

ಹೊತ್ತು, ಮೈನಹಳ್ಳಿಯ ಪ್ರವೇಶ ದ್ವಾರದಿಂದ ದೇವಸ್ಥಾನದವರೆಗೆ ಶೋಭಾಯಾತ್ರೆ ನಡೆಸಿ, ದೇವಿಯ ಮೂರ್ತಿಯನ್ನು ಕರೆತಂದರು.

ಪೂಜಾ ವಿಧಿವಿಧಾನಗಳೊಂದಿಗೆ ತಾಯಿ ಶ್ರೀ ಶಿವಶರಣಿ ಬುಡ್ಡಮ್ಮ ದೇವಿಯ ಮೂರ್ತಿಗೆ ಜಲವಾಸ ನೆರವೇರಿಸಲಾಯಿತು.

ಗ್ರಾಮಸ್ಥರು ಹಾಗೂ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.

----

ಫೋಟೋ

26 ಕೆಪಿಎಲ್ ಫೋಟೋ 08

ಕೊಪ್ಪಳ ತಾಲೂಕಿನ ಮೈನಹಳ್ಳಿ ಗ್ರಾಮದಲ್ಲಿಶಿವಶರಣಿ ಬುಡ್ಡಮ್ಮ ದೇವಿಯ ನೂತನ ಮೂರ್ತಿಯ ಗ್ರಾಮ ಪ್ರವೇಶ ಹಾಗೂ ಕುಂಭೋತ್ಸವ ನೆರವೇರಿತು.