ವಿಕ ಸುದ್ದಿಲೋಕ ಕುಂಭಾಸಿ
ಕುಂಭಾಸಿ ಶ್ರೀ ಶೃಂಗೇರಿ ಶಂಕರ ಮಠದಲ್ಲಿಮೇ.03 ಮತ್ತು ಮೇ.04ರಂದು ಮಠದ ನಾಗಾಚಲ ಶ್ರೀ ಅಯ್ಯಪ್ಪ ಸ್ವಾಮಿ ದೇವರಿಗೆ ಸಮರ್ಪಣೆಯಾಗಲಿರುವ ನೂತನ ರಥ ಹಾಗೂ ಶ್ರೀ ಶಾರದಾ ಶಂಕರ ದೀಪಾಂಜಲಿ ಕಾರ ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ ್ಯಕ್ರಮವು ಕುಂಭಾಸಿ ಶ್ರೀ ಶೃಂಗೇರಿ ಶಂಕರ ಮಠದಲ್ಲಿಜರುಗಿತು.
ಶೃಂಗೇರಿ ಶ್ರೀ ಶಾರದಾ ಪೀಠದ ಪ್ರಾಂತೀಯ ಧರ್ಮಾಧಿಕಾರಿ ಹಾಗೂ ನಾಗಪಾತ್ರಿ ವೇದಮೂರ್ತಿ ಶ್ರೀ ಬಡಾಕೆರೆ ಲೋಕೇಶ ಅಡಿಗರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಮೇ 2ರಂದು ನಾನಾ ಧಾರ್ಮಿಕ ಪೂಜಾ ಕಾರ ್ಯಕ್ರಮಗಳು ಸೇರಿದಂತೆ ದೇವರ ವಾರ್ಷಿಕ ವರ್ಧಂತಿ ಮಹೋತ್ಸವ, ಮೇ 3ರಂದು ಸಂಜೆ 4.30ಕ್ಕೆ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಿಂದ ಪುರಮೆರವಣಿಗೆಯಲ್ಲಿನೂತನ ರಥವನ್ನು ಮಠಕ್ಕೆ ಕರೆತರಲಾಗುವುದು. ಸಂಜೆ 6ಕ್ಕೆ ರಥ ಸಮರ್ಪಣೆ ಅಂಗವಾಗಿ ರಾಕ್ಷೋಘ್ನ ಹೋಮ, ವಾಸ್ತುಪೂಜೆ, ಅಧಿವಾಸ ಪೂಜೆಯೊಂದಿಗೆ 6.30ಕ್ಕೆ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿಭಜನಾ ಭಗವದ್ಭ$ಕ್ತರಿಂದ ಶ್ರೀ ಶಾರದಾ ಶಂಕರ ದೀಪಾಂಜಲಿ ಮತ್ತು ರಾತ್ರಿ 8ಕ್ಕೆ ಶ್ರೀ ಚಂದ್ರಮೌಳೇಶ್ವರ ಪೂಜೆ ನಡೆಯಲಿದೆ.
ಮೇ 4ರಂದು ಬೆಳಗ್ಗೆ 10.30ಕ್ಕೆ ಜಗದ್ಗುರುಗಳು ರಥ ಸಮರ್ಪಣಾ ಕಾರ ್ಯಕ್ರಮವನ್ನು ನೆರವೇರಿಸಲಿದ್ದು, ಮಧ್ಯಾಹ್ನ 12ಕ್ಕೆ ಗುರುವಂದನೆ ಮತ್ತು ಬಡಾಕೆರೆ ಶ್ರೀ ಶಾರದಾ ಸದ್ವಿದ್ಯಾ ವಸಂತ ವೇದ ಸಮಾರೋಪ ಸಮಾರಂಭ ಹಾಗೂ 12.30ಕ್ಕೆ ಧಾರ್ಮಿಕ ಸಭಾ ಕಾರ ್ಯಕ್ರಮ, ರಾತ್ರಿ 8ಕ್ಕೆ ಶ್ರೀ ಚಂದ್ರಮೌಳೇಶ್ವರ ಪೂಜೆ ನಡೆಯಲಿದೆ ಎಂದರು.
ಕುಂಭಾಸಿ ಶ್ರೀ ಶೃಂಗೇರಿ ಶಂಕರ ಮಠದ ಪ್ರಮುಖರಾದ ಲಕ್ಷಿತ್ರ್ಮೕಶ ಅಡಿಗ ಬಡಾಕೆರೆ, ನಾಗೇಂದ್ರ ಅಡಿಗ ಬಡಾಕೆರೆ, ದೇವಳದ ವಿವಿಧ ಸಮಿತಿಯ ಪ್ರಮುಖರು, ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮಠದ ಭಕ್ತರು ಉಪಸ್ಥಿತರಿದ್ದರು.
ಪೋಟೋ//27ಎಬಿ-ಎಮ್ ಎಟಿ// ಶೃಂಗೇರಿ ಶ್ರೀ ಶಾರದಾ ಪೀಠದ ಪ್ರಾಂತೀಯ ಧರ್ಮಾಧಿಕಾರಿ ಹಾಗೂ ನಾಗಪಾತ್ರಿ ವೇದಮೂರ್ತಿ ಶ್ರೀ ಬಡಾಕೆರೆ ಲೋಕೇಶ ಅಡಿಗರು ಗಣ್ಯರ ಸಮ್ಮುಖದಲ್ಲಿಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

