ಬಿರುಗಾಳಿಗೆ ತರಗೆಲೆಯಾದ ಬದುಕು

Contributed bylakshmikanthakumar.boraiah@timesgroup.com|Vijaya Karnataka

ಭದ್ರಾವತಿ ತಾಲೂಕಿನಲ್ಲಿ ಭಾನುವಾರ ಸಂಜೆ ಬೀಸಿದ ಬಿರುಗಾಳಿಗೆ ಸಾವಿರಾರು ರೈತರ ಬದುಕು ತರಗೆಲೆಯಾಗಿದೆ. ಅಡಕೆ ಮತ್ತು ತೆಂಗಿನ ತೋಟಗಳು ನೆಲಸಮವಾಗಿವೆ. ಮನೆಗಳ ಮೇಲೂ ಮರಗಳು ಬಿದ್ದಿವೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಗ್ರಾಮಗಳು ಸಹಜ ಸ್ಥಿತಿಗೆ ಮರಳಲು ಇನ್ನೂ 15-20 ದಿನಗಳು ಬೇಕಾಗಬಹುದು. ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

impact of the storm lives in the villages in ruins

ಎರಡು ದಿನವಾದರೂ ಸಹಜ ಸ್ಥಿತಿಗೆ ಮರಳದ ಹಳ್ಳಿಗಳು, ಗ್ರಾಮಸ್ಥರು

ಬಿರುಗಾಳಿಗೆ ತರಗೆಲೆಯಾದ ಬದುಕು

ಸಂತೋಷ್ ಕಾಚಿನಕಟ್ಟೆ/ ಎಚ್ .ಜಿ.ವಿಜಯರಾಜ್

್ಝakshಞಜಿka್ಞಠಿhak್ಠಞa್ಟ.ಚಿಟ್ಟaಜಿahಃಠಿಜಿಞಛಿsಟ್ಛಜ್ಞಿdಜಿa.್ಚಟಞ/vಜ್ಜಿaya್ಟa್ಜ.hಜಃಜಞaಜ್ಝಿ.್ಚಟಞ

‘ಮಕ್ಕಳು ಬಾಯಾರಿದರೆ, ಹಸಿವಾದರೆ ನೀರು ಊಟ ಕೇಳುತ್ತಾರೆ. ಆದರೆ, ಮೂಕ ಜೀವ ಮರಗಳು ನೀರು, ಗೊಬ್ಬರ ಕೇಳುವ ಮುನ್ನವೆ ಕೊಟ್ಟು ಬಹಳ ಜತನದಿಂದ ಕಾಪಾಡಿದ್ದೆ. ತೋಟ ನನ್ನೀಡಿ ಕುಟುಂಬವನ್ನು ಕಾಪಾಡಿತ್ತು. ತಪ್ಪು ಮಾಡಿದವರಿಗೆ ದೇವರು ಕಷ್ಟ ಕೊಡುವುದು ಗೊತ್ತು. ಆದರೆ, ಪ್ರಕೃತಿ ನನ್ನ ಬದುಕಿಗೆ ತಡೆದುಕೊಳ್ಳಲಾರದಂತಹ ಪೆಟ್ಟು ನೀಡಿತು’...

ಇದು ಮಂಗಳವಾರ ಮುಂಜಾನೆಯೆ ತೋಟದ ಮುಂದೆ ಅಳುತ್ತಾ ನಿಂತಿದ್ದ ಮಲ್ಲಿಗೇನಹಳ್ಳಿಯ ಎಂ.ಟಿ.ಹಾಲೇಶ್ ಅವರ ನೋವಿನ ನುಡಿಗಳು. ‘15 ವರ್ಷದ ಹಿಂದೆ ಬಿಪಿಎಡ್ , ಎಂಎ ಮಾಡಿ ನವುಲೆ ಕೃಷಿ ಮಹಾವಿದ್ಯಾಲಯದಲ್ಲಿಗುತ್ತಿಗೆ ಆಧಾರದ ಮೇಲೆ ಎಸ್ ಡಿಎ ಆಗಿ ಕೆಲಸ ಮಾಡುತ್ತಿದ್ದೆ. ಅಪ್ಪನ ಕೃಷಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸಿ, ನಾನೂ ಬೆಳೆಯಬೇಕೆಂದು ಕೆಲಸ ಬಿಟ್ಟು ತೋಟ ಮಾಡಿದೆ. ಖುದ್ದು ನಾನೆ ನೆಟ್ಟು ಬೆಳೆಸಿದ ಎಂಟು ವರ್ಷದ ಅಡಕೆ ತೋಟ ಫಸಲು ನೀಡಲು ಆರಂಭಿಸಿತ್ತು. ಮೂರು ಎಕರೆ ತೋಟ ನನ್ನ ಜೀವನಕ್ಕೆ ಆಸರೆಯಾಗಿತ್ತು. ಈಗ ಸುಮಾರು 400 ಮರಗಳು ಬುಡಸಮೇತ ಉರುಳಿವೆ’ ಎಂದು ಕಣ್ಣೀರಿಟ್ಟರು.

ಇದು ಕೇವಲ ಹಾಲೇಶ್ ಅವರೊಬ್ಬರ ಕಥೆಯಲ್ಲ. ಭಾನುವಾರ ಸಂಜೆ ಬೀಸಿದ ಬಿರುಗಾಳಿಗೆ ಹೊಳೆಹೊನ್ನೂರಿನ ಮೂರು ಹೋಬಳಿಗಳ ವ್ಯಾಪ್ತಿಯ 35 ಹಳ್ಳಿಗಳ ಸಾವಿರಾರು ರೈತರ ಕಥೆಯಿದು. ಸುಮಾರು 15 ನಿಮಿಷಗಳ ಕಾಲ ಬೀಸಿದ ಬಿರುಗಾಳಿಗೆ ಅಡಕೆ ಮತ್ತು ತೆಂಗಿನ ತೋಟಗಳು, ಮನೆಗಳ ಸೂರು ತರಗೆಲೆಯಂತಾದವು. ಈ ಎಲ್ಲಊರುಗಳಲ್ಲಿಪ್ರತಿಯೊಬ್ಬ ರೈತನ ತೋಟದಲ್ಲಿಕನಿಷ್ಠ 20 ಮರಗಳಿಂದ ಗರಿಷ್ಠ 4 ಸಾವಿರ ಅಡಕೆ ಮತ್ತು ತೆಂಗಿನ ಮರಗಳು ನೆಲಸಮವಾಗಿವೆ. ಯಾವುದೇ ರಸ್ತೆಗಳಲ್ಲಿಸಾಗಿದರೆ ಸಾಕು ಬಿರುಗಾಳಿ ಅವಾಂತರ ಅನಾವರಣವಾಗುತ್ತದೆ.

ಮಲ್ಲಿಗೇನಳ್ಳಿಯ ಮತ್ತೊಬ್ಬ ರೈತ ನಾಗರಾಜ್ ಅವರ ಎರಡು ಎಕರೆ ತೋಟದಲ್ಲಿ600ಕ್ಕಿಂತ ಹೆಚ್ಚು ಮರಗಳು ಬಿದ್ದಿವೆ. ಅವರ ತೋಟದಲ್ಲಿಬಿದ್ದಿರುವುದಕ್ಕಿಂತ ನಿಂತ ಮರಗಳನ್ನೇ ಎಣಿಸಬಹುದು. ಎಂ.ಡಿ.ಶಿವಪ್ಪ ಅವರ 12 ಎಕರೆ ತೋಟದಲ್ಲಿ4 ಸಾವಿರಕ್ಕೂ ಹೆಚ್ಚು ಮರಗಳು ನೆಲಕ್ಕೊರಗಿವೆ. ‘ಈ ವರ್ಷ ಹೊಂಬಾಳೆ ದಷ್ಟಪುಷ್ಟ್ಟವಾಗಿ ಬಂದಿದ್ದಲ್ಲದೆ ಭಾರಿ ಪ್ರಮಾಣದಲ್ಲಿಮಣಿ ಕಚ್ಚಿದ್ದವು. ಈ ಬಿರುಗಾಳಿ ಬೀಸುವ ಕೇಡಿಗೆ ಭರ್ಜರಿ ಫಸಲು ಬಂದಿತ್ತೇನೋ’ ಎನ್ನುತ್ತಾರೆ ಮೈದೊಳಲಿನ ಈಶ್ವರಪ್ಪ. ತಡಸದ ಗಂಗಪ್ಪ, ಗುಡಮಘಟ್ಟದ ಎಚ್ .ಜಿ.ಮಲ್ಲಯ್ಯ, ಅರಹತೊಳಲು ಶಾಂತಮಲ್ಲಪ್ಪ, ಹನುಮಂತಾಪುರದ ಎಚ್ .ಎನ್ .ನಂದೀಶ್ ಸೇರಿದಂತೆ ನೂರಾರು ರೈತರ ನೋವಿನ ಹಿಂದೆ ಒಂದೊಂದು ಕಥೆ ಇದೆ.

ದುರ್ಘಟನೆ ಸಂಭವಿಸಿ ಎರಡು ದಿನಗಳಾದರೂ ಗ್ರಾಮಸ್ಥರು ಅದರ ಛಾಯೆಯಿಂದ ಹೊರಬಂದಿಲ್ಲ. ಈ ಗ್ರಾಮಗಳು ಸಹಜ ಸ್ಥಿತಿಗೆ ಮರಳಲು ಕನಿಷ್ಠ 15ರಿಂದ 20 ದಿನ ಬೇಕು. ಮುಖ್ಯರಸ್ತೆ, ಸಂಪರ್ಕ ರಸ್ತೆ ಮತ್ತು ತೋಟದ ರಸ್ತೆಗಳ ಮೇಲೆ ಬಿದ್ದ ಮರಗಳು, ವಿದ್ಯುತ್ ಕಂಬಗಳನ್ನು ಇನ್ನೂ ತೆರವುಗೊಳಿಸಲು ಸಾಧ್ಯವಾಗಿಲ್ಲ. ಕೈಮರ ಗುಡಮಘಟ್ಟ ಮುಖ್ಯ ರಸ್ತೆಯಲ್ಲಿಮಂಗಳವಾರ ಸಹ ಮರಗಳು ಮತ್ತು ವಿದ್ಯುತ್ ಕಂಬಗಳನ್ನು ತೆರವುಗೊಳಿಸುವ ಕೆಲಸ ನಿರಂತರವಾಗಿ ನಡೆದಿತ್ತು. ರಸ್ತೆ ಮೇಲೆ ಬಿದ್ದಿರುವ ವಿದ್ಯುತ್ ಕಂಬಗಳು ಮತ್ತು ಮರಗಳನ್ನು ತೆರವುಗೊಳಿಸಲು ತಡಸದ 10ಕ್ಕೂ ಹೆಚ್ಚು ಯುವಕರು ಮೆಸ್ಕಾಂ ಸಿಬ್ಬಂದಿಯೊಂದಿಗೆ ಕೈ ಜೋಡಿಸಿದ್ದರು. ಮನೆಗಳ ಮೇಲೆ ಬಿದ್ದ ಅಡಕೆ, ತೆಂಗಿನ ಮರಗಳು ಈಗಲೂ ಹಾಗೆಯೆ ಇವೆ.

ಎರಡು ದಿನಗಳಿಂದ ವಿದ್ಯುತ್ ಕಡಿತದಿಂದಾಗಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಹೀಗಾಗಿ ಕೆಲ ಪಂಚಾಯಿತಿಗಳು ಕುಡಿಯುವ ನೀರಿನ ಮೋಟಾರ್ ಗಳಿಗೆ ಜನರೇಟರ್ ಗಳನ್ನು ಬಳಸಿದ್ದವು. ಕೆಲ ಗ್ರಾಮಸ್ಥರು ಸೋಲಾರ್ ಪಂಪ್ ಸೆಟ್ ಅಳವಡಿಸಿರುವ ರೈತರ ಮೊರೆ ಹೋಗಿದ್ದವು. ವಿದ್ಯುತ್ ಕಡಿತದಿಂದ ಬಹಳಷ್ಟು ಸಮಸ್ಯೆ ಎದುರಾಗಿರುವುದರಿಂದ ತ್ವರಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವ ಪ್ರಯತ್ನ ನಡೆದಿತ್ತು. ಮೊದಲಿಗೆ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು, ಆನಂತರದಲ್ಲಿತೋಟಗಳ ವಿದ್ಯುತ್ ಸಂಪರ್ಕಗಳನ್ನು ಸರಿಪಡಿಸಲಾಗುವುದು. ಅದಕ್ಕೆ ಕನಿಷ್ಠ ಒಂದು ವಾರ ಸಮಯ ಹಿಡಿಯಬಹುದು ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದರು.

----------------

ಅಪ್ಪನನ್ನು ಕ್ಯಾನ್ಸರ್ ಚಿಕಿತ್ಸೆಗೆ ಬೆಂಗಳೂರು ಕಿದ್ವಾಯಿನಲ್ಲಿದಾಖಲಿಸಿದ್ದೇನೆ. ಕಿಡ್ನಿಯಲ್ಲಿಸ್ಟೋನ್ ಆಗಿರುವ ಅಮ್ಮನಿಗೆ ಅಪ್ಪನ ಶಸ್ತ್ರಚಿಕಿತ್ಸೆ ಆದ ನಂತರ ಚಿಕಿತ್ಸೆ ಮಾಡಿಸಬೇಕೆಂದಿದ್ದೆ. ಈಗ ದೇವರು ನನ್ನನ್ನು ಈ ಸ್ಥಿತಿಗೆ ತಂದಿದ್ದಾನೆ. ಅಪ್ಪ ಅಮ್ಮನಿಗೆ ಇನ್ನೂ ವಿಷಯ ತಿಳಿಸಿಲ್ಲ. ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ.

*ಎಂ.ಟಿ.ಹಾಲೇಶ್ , ಮಲ್ಲಿಗೇನಹಳ್ಳಿ, ಭದ್ರಾವತಿ ತಾಲೂಕು. (28ಎಸ್ ಎಂಜಿ13)

-----------------

ಎರಡು ಎಕರೆ ತೋಟದಲ್ಲಿ600 ಮರಗಳು ಬಿದ್ದಿವೆ. ಸುಮಾರು 150 ಮರಗಳು ಬಿಲ್ಲಿನಂತೆ ಬಾಗಿವೆ. 10ರಿಂದ 15 ವರ್ಷ ಕಷ್ಟಪಟ್ಟಿದ್ದಕ್ಕೆ ಈಗ ಕೇವಲ 350 ಮರಗಳು ಉಳಿದುಕೊಂಡಿವೆ. ಮಾಡಿದ ಸಾಲ ತೀರಿಸುವುದ್ಹೇಗೆ, ಹೊಸದಾಗಿ ತೋಟ ಕಟ್ಟುವುದು ಹೇಗೆ ದೇವರಿಗೆ ಗೊತ್ತು.

*ನಾಗರಾಜ, ಮಲ್ಲಿಗೇನಹಳ್ಳಿ, ಭದ್ರಾವತಿ ತಾಲೂಕು. (28ಎಸ್ ಎಂಜಿ14)

----------------

ಫೋಟೊ ಶೀರ್ಷಿಕೆ: 28ಎಸ್ ಎಂಜಿ12

ಭದ್ರಾವತಿ ತಾಲೂಕು ಮಲ್ಲಿಗೇನಹಳ್ಳಿಯ ಎಂ.ಡಿ.ಶಿವಪ್ಪ ಅವರ ಅಡಕೆ ತೋಟದಲ್ಲಿನಿಂತ ಮರಗಳಿಗಿಂತ ಬಿದ್ದ ಮರಗಳೇ ಹೆಚ್ಚಿವೆ.