ಜನಗಣತಿ ಕಾರ್ಯಕ್ಕೆ ಆಸ್ಪತ್ರೆ ಸಿಬ್ಬಂದಿ: ರೋಗಿಗಳ ಪರದಾಟ

Contributed byRayasab Anasari|Vijaya Karnataka

ಕೆ.ಸಿ. ಜನರಲ್‌ ಆಸ್ಪತ್ರೆಯ 19 ಸಿಬ್ಬಂದಿಯನ್ನು ಜನಗಣತಿ ಕಾರ್ಯಕ್ಕೆ ನಿಯೋಜಿಸಲಾಗಿದೆ. ಇದರಿಂದಾಗಿ ವೈದ್ಯಕೀಯ ಸೇವೆಗಳು ಸ್ಥಗಿತಗೊಂಡಿವೆ. ಸಾವಿರಾರು ಬಡ ರೋಗಿಗಳು ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ. ಎಕ್ಸ್‌-ರೇ, ಲ್ಯಾಬ್‌ ಪರೀಕ್ಷೆಗಳು ವಿಳಂಬವಾಗುತ್ತಿವೆ. ಫಿಸಿಯೋಥೆರಪಿ ಚಿಕಿತ್ಸೆಗೂ ತೊಂದರೆಯಾಗಿದೆ. ಆರ್‌ಎಂಒ ಅವರು ಸಿಬ್ಬಂದಿಯನ್ನು ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದಾರೆ. ಇಬ್ಬರು ಸಿಬ್ಬಂದಿ ಬಿಡುಗಡೆಯಾಗಿದ್ದಾರೆ.

staffing crisis at kc general hospital affects health services ahead of census

ವಿಕ ಸುದ್ದಿಲೋಕ ಬೆಂಗಳೂರು

ಈಗಾಗಲೇ ವೈದ್ಯಕೀಯ ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಕೆ.ಸಿ. ಜನರಲ್ ಆಸ್ಪತ್ರೆಯಿಂದ ರಾಷ್ಟ್ರೀಯ ಜನಗಣತಿ ಕಾರ್ಯಕ್ಕೆ 19 ಸಿಧಿಬ್ಬಂದಿಧಿಯನ್ನು ನಿಯೋಜಿಸಲಾಗಿದೆ. ಇದರಿಂದ ಸರಕಾರಿ ಆಸ್ಪತ್ರೆಯನ್ನೇ ನಂಬಿ ಬರುವ ಬಡ ಜನರು ಪರದಾಡುವಂತಾಗಿದೆ. ಆರೋಗ್ಯವೂ ಅಗತ್ಯ ಸೇವೆಯಡಿ ಬರುತ್ತದೆಯಾದರೂ, ಇಲ್ಲಿನ ಸಿಬ್ಬಂದಿಯನ್ನು ಗಣತಿ ಕಾರ್ಯಕ್ಕೆ ಬಳಸುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಪ್ರತಿ ದಿನ ಸಾವಿರಾರು ಜನ ಚಿಕಿತ್ಸೆಗಾಗಿ ಮಲ್ಲೇಶ್ವರಂನಲ್ಲಿನ ಕೆ.ಸಿ. ಜನರಲ್ ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ಈ ಆಸ್ಪತ್ರೆಯೂ ಹಲವು ವರ್ಷಗಳಿಂದ ವೈದ್ಯಕೀಯ ಸಿಬ್ಬಂದಿ ಕೊರತೆ ಎದುರಿಸುತ್ತಿದ್ದು, ರೋಗಿಗಳು ಪರದಾಡುತ್ತಲೇ ಇದ್ದಾರೆ. ಆದರೀಗ, ಪೈಕಿ 19 ಮಂದಿ ವೈದ್ಯಕೀಯ, ತಾಂತ್ರಿಕ ಸಿಬ್ಬಂದಿಯನ್ನು ಜನಗಣತಿ ಕಾರ್ಯಕ್ಕೆ ನಿಯೋಜಿಸಿದ್ದರಿಂದ ಆಸ್ಪತ್ರೆಯ ಪ್ರಮುಖ ವಿಭಾಗಗಳೇ ಸ್ಥಗಿತಗೊಂಡಿವೆ. ಸಿಬ್ಬಂದಿ ಕೊರತೆಯಿಂದಾಗಿ ರೋಗಿಗಳಿಗೆ ಆಸ್ಪತ್ರೆಯ ಸೌಲಭ್ಯ ಮತ್ತು ಸೇವೆ ಸಕಾಲದಲ್ಲಿದೊರಕುತ್ತಿಲ್ಲ. ಈ ಹಿನ್ನೆಲೆಯಲ್ಲಿಸಿಬ್ಬಂದಿಗಳಿಗೆ ಗಣತಿ ಕಾರ್ಯದಿಂದ ಮುಕ್ತಿ ನೀಡುವಂತೆ ಆಸ್ಪತ್ರೆ ಆರ್ ಎಂಒ ಮನವಿ ಮಾಡಿದ್ದಾರೆ.

ಏಪ್ರಿಲ್ 15ರಿಂದಲೇ ಜನಗಣತಿ ಕಾರ್ಯ ಆರಂಭವಾಗಿದೆ. ಇದಕ್ಕಾಗಿ ಆಸ್ಪತ್ರೆಯ ಲ್ಯಾಬ್ ಟೆಕ್ನೀಶಿಯನ್ , ಎಕ್ಸ್ ಧಿರೇ ಟೆಕ್ನಾಲಜಿಸ್ವ್ , ಫಿಸಿಯೋಥೆರಫಿಸ್ವ್ , ಕ್ಲಿನಿಕಲ್ ಸೈಕಾಲಜಿಸ್ವ್ , ನೇತ್ರಾಧಿಕಾರಿ ಮತ್ತು ಲಸಿಕಾ ಸಿಬ್ಬಂದಿ ಸೇರಿದಂತೆ ಆಡಳಿತ ವಿಭಾಗದ ನೌಕರರನ್ನು ಜನಗಣತಿಗೆ ನಿಯೋಜಿಸಲಾಗಿದೆ. ಹೀಗಾಗಿ, ಕಳೆದ ಹದಿಮೂರು ದಿನಗಳಿಂದಲೂ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಸಕಾಲದಲ್ಲಿಚಿಕಿತ್ಸೆ ಹಾಗೂ ಸೌಲಭ್ಯ ದೊರಕುತ್ತಿಲ್ಲ. ಆರೋಗ್ಯ ಸಚಿವರ ಕ್ಷೇತ್ರದಲ್ಲಿರುವ ಆಸ್ಪತ್ರೆಯ ಸ್ಥಿತಿಧಿಯೇ ಹೀಗಿರಬೇಕಾದರೆ, ಇಡೀ ರಾಜ್ಯದ ಸರಕಾರಿ ಆಸ್ಪತ್ರೆಗಳ ಸ್ಥಿತಿ ಹೇಗಿದೆ ಎಂಬುದನ್ನು ಊಹಿಸಬಹುದು ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಸಿಬ್ಬಂದಿ ಕೊರತೆಯಿಂದಾಗಿ ಆಸ್ಪತ್ರೆಯಲ್ಲಿರೋಗಿಗಳು ಆಸ್ಪತ್ರೆ ಸೌಲಭ್ಯಗಳಿಂದ ಹಾಗೂ ಸೇವೆಯಿಂದ ವಂಚಿತರಾಗುತ್ತಿದ್ದಾರೆ. ಪ್ರತಿ ದಿನ 100 ರಿಂದ 110 ಎಕ್ಸ್ ಧಿರೇಗಳನ್ನು ಮಾಡಲಾಗುತ್ತಿತ್ತು. ಆದರೆ, ಸಿಬ್ಬಂದಿ ಕೊರತೆಯಿಂದಾಗಿ ಅದು 50ಕ್ಕೆ ಇಳಿದಿದೆ. ಇನ್ನುಳಿದವರು ಮತ್ತೆ ಮಾರನೇ ದಿನಕ್ಕೆ ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಲ್ಯಾಬ್ ಗೆ ದಿನಕ್ಕೆ 500ಕ್ಕೂ ಹೆಚ್ಚು ಪ್ರಕರಣಗಳು ಬರುತ್ತವೆ. ಆದರೆ, ಸಿಬ್ಬಂದಿ ಇಲ್ಲದೆ ಪರೀಕ್ಷೆಗಳು ವಿಳಂಬವಾಗುತ್ತಿವೆ. ಇನ್ನು ಫಿಸಿಯೋಥೆರಫಿಗೆ 40 ಜನ ಬಂದರೆ ಕೇವಲ 10 ಜನರಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಗಣತಿಗೆ ನಿಯೋಜಿಸಿದ್ದೇಗೆ:

ಜನಗಣತಿ ಕಾರ್ಯಕ್ಕೆ ನಿಯೋಜಿಸಿರುವ ಎಲ್ಲಸಿಬ್ಬಂದಿಯನ್ನು ಸರಕಾರದ ಎಚ್ ಆರ್ ಎಸ್ ಐಡಿ ಮೂಲಕವೇ ಆಯ್ಕೆ ಮಾಡಲಾಗಿದೆ. ಇದರಿಂದಾಗಿ ವೈದ್ಯಕೀಯ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿ, ಲ್ಯಾಬ್ ಟೆಕ್ನೀಷಿಯನ್ ಎಂಬ ಮಾಹಿತಿ ಗೊತ್ತಾಗಿಲ್ಲ. ಹೀಗೆ, ನಿಯೋಜಿಸಿದ ನಂತರವೇ ನಮಗೂ ಮಾಹಿತಿ ಗೊತ್ತಾಗಿದೆ. ಆದ್ದರಿಂದ ವೈದ್ಯಕೀಯ ಸಿಬ್ಬಂದಿಯನ್ನು ಬಿಡುಗಡೆಗೊಳಿಸುವಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅದರಂತೆ, ಇಬ್ಬರು ಪ್ಯಾರಾಮೆಡಿಕಲ್ ಸಿಬ್ಬಂದಿಯನ್ನು ಮುಕ್ತಗೊಳಿಸಿದ್ದಾರೆ. ಇನ್ನೂ ಕೆಲವರು ಬಿಡುಗಡೆ ಹೊಂದಿಲ್ಲಎಂದು ಕೆ.ಸಿ. ಜನರಲ್ ಆಸ್ಪತ್ರೆಯ ಆರ್ ಎಂಒ ಲಕ್ಷ್ಮೇಪತಿ ಮಾಹಿತಿ ನೀಡಿದರು.

ಕೋಟ್ ...

ಆಸ್ಪತ್ರೆಯಲ್ಲಿರೋಗಿಗಳಿಗೆ ಸಮಸ್ಯೆಯಾಗದಂತೆ ಕಾರ್ಯನಿರ್ವಹಿಸಲಾಗುತ್ತಿದೆ. ಸ್ಕ್ಯಾ ನಿಂಗ್ ವಿಭಾಗದಲ್ಲಿನಾಲ್ವರು ಸಿಬ್ಬಂದಿಯಲ್ಲಿಒಬ್ಬರೇ ಇದ್ದುಧಿದಧಿರಿಂದ ಕೊಂಚ ಸಮಸ್ಯೆಯಾಗಿತ್ತು. ಅದೀಗ ಬಗೆಹರಿದಿದೆ. ಸದ್ಯ, ರೋಗಿಗಳಿಗೆ ಸಕಾಲದಲ್ಲಿಎಲ್ಲಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಯಾವುದೇ ರೀತಿ ಸಮಸ್ಯೆಯಿಲ್ಲ

- ಲಕ್ಷ್ಮೇಪತಿ, ಆರ್ ಎಂಒ, ಕೆ.ಸಿ. ಜನರಲ್ ಆಸ್ಪತ್ರೆ