ಗ್ಯಾರಂಟಿಯಿಂದ ಜನರಿಗೆ ಅನುಕೂಲ

Contributed bykariyappa.kudupali@gmail.com|Vijaya Karnataka

ಶಾಸಕ ಯು.ಬಿ.ಬಣಕಾರ ಅವರು ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಅನುಕೂಲವಾಗಿದೆ ಎಂದು ತಿಳಿಸಿದರು. ಸ್ತ್ರೀಶಕ್ತಿ, ಯುವ ನಿಧಿ, ಗೃಹಲಕ್ಷ್ಮಿ, ಗೃಹ ಜ್ಯೋತಿ, ಅನ್ನಭಾಗ್ಯ ಯೋಜನೆಗಳ ಫಲಾನುಭವಿಗಳ ಸಂಖ್ಯೆ ಮತ್ತು ಆದಾಯದ ವಿವರ ನೀಡಿದರು. ರಟ್ಟೀಹಳ್ಳಿಗೆ ಬಸ್ ಸೌಲಭ್ಯ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಾವಿನತೋಪ ಗ್ರಾಮಕ್ಕೆ ಬಸ್ ಸರಿಯಾಗಿ ಬರುವಂತೆ ಎಚ್ಚರಿಸಿದರು.

government benefits and facilitations through the guarantee scheme

ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ

ಗ್ಯಾರಂಟಿಯಿಂದ ಜನರಿಗೆ ಅನುಕೂಲ

ವಿಕ ಸುದ್ದಿಲೋಕ ರಟ್ಟೀಹಳ್ಳಿ

ಸರಕಾರ ಗ್ಯಾರಂಟಿ ಯೋಜನೆ ಜಾರಿಗೆ ತರುವ ಮೂಲಕ ಜನರಿಗೆ ಅನುಕೂಲಮಾಡಿಕೊಟ್ಟಿದೆ. ಗ್ಯಾರಂಟಿ ಯೋಜನೆಯಿಂದ ಜನರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ಶಾಸಕ ಯು.ಬಿ.ಬಣಕಾರ ಹೇಳಿದರು.

ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಾರಾಯಣಪ್ಪ ಗೌರಕ್ಕನವರ ಅಧ್ಯಕ್ಷತೆಯಲ್ಲಿರಟ್ಟೀಹಳ್ಳಿ ಪಟ್ಟಣದಲ್ಲಿನಡೆದ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿಭಾಗವಹಿಸಿ ಅವರು ಮಾತನಾಡಿದರು.

ಸ್ತ್ರೀಶಕ್ತಿ ಯೋಜನೆಯಲ್ಲಿಜೂನ್ 2023 ರಿಂದ ಮಾರ್ಚ್ 2026 ರ ವರೆಗೆ 3 ಕೋಟಿಗೂ ಹೆಚ್ಚು ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಇದರಿಂದ 94 ಕೋಟಿಗೂ ಹೆಚ್ಚು ಸಾರಿಗೆ ಆದಾಯ ಸಂದಾಯವಾಗಿದೆ. ಯುವ ನಿಧಿಯಲ್ಲಿ6426 ಪದವಿದರರು, 6512 ಡಿಪೊ್ಲಮ ಪದವಿದರರು ಸೌಲಭ್ಯ ಪಡೆಯತ್ತಿದ್ದಾರೆ. ಗೃಹಲಕ್ಷಿತ್ರ್ಮೕ ಯೋಜನೆಯಲ್ಲಿ794856 ಫಲಾನುಭವಿಗಳು ಸೌಲಭ್ಯ ಪಡೆಯುತ್ತಿದ್ದಾರೆ. ಗೃಹ ಜ್ಯೋತಿ ಯೋಜನೆಯಲ್ಲಿ27 ಕೋಟಿ ರೂ. ಗೂ ಹೆಚ್ಚು ಪ್ರಯೋಜನ ಪಡೆದಿದ್ದಾರೆ. ಅನ್ನಭಾಗ್ಯ ಯೋಜನೆಯಲ್ಲಿ31862 ಫಲಾನುಭವಿಗಳು ಪ್ರಯೋಜ ಪಡೆಯುತ್ತಿದ್ದಾರೆ ಎಂದರು. ತುಮ್ಮಿನಕಟ್ಟಿ, ರಟ್ಟೀಹಳ್ಳಿ, ಶಿರಗಂಬಿ-ರಟ್ಟೀಹಳ್ಳಿ, ಹೊನ್ನಾಳಿ, ಹಳ್ಳೂರು, ಚಿಕ್ಕಕಬ್ಬಾರ, ಮೂಲಕ ರಟ್ಟೀಹಳ್ಳಿಗೆ ಬಸ್ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟರು. ಅಲ್ಲದೇ ಮಾವಿನತೋಪ ಗ್ರಾಮಕ್ಕೆ ರಾಣೇಬೆನ್ನೂರು ಡಿಪೋದಿಂದ ಬರುವ ಬಸ್ ಸರಿಯಾಗಿ ಬರುವಂತೆ ನೋಡಿಕೊಳ್ಳಿ ಎಂದು ಎಚ್ಚರಿಸಿದರು.

ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಾರಾಯಣಪ್ಪ ಗೌರಕ್ಕನವರ, ಇಓ ಎನ್ .ರವಿ., ಡೀಪೊ ವ್ಯವಸ್ಥಾಪಕ ಮಂಜುನಾಥ ಹಡಪದ, ಸಿಡಿಪಿಓ ಗೀತಾ ಬಾಳಿಕಾಯಿ, ಆಹಾರ ಇಲಾಖೆಯ ಚಂದ್ರಶೇಖರ ಹೆದ್ದಳ್ಳಿ, ಪ್ರದೀಪ ಗಣೇಶ್ಕರ್ , ದಿನೇಶ ಟಿ.ಎಚ್ ., ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ರಾಮಣ್ಣ ಗೌರಕ್ಕನವರ, ಪ್ರಭುದೇವ ನಾಡಗೇರ, ಮಂಜಪ್ಪ ಅಸ್ವಾಲಿ, ನಿಜಲಿಂಗಪ್ಪ ಮರಿಬಸಪ್ಪನವರ, ರೇವಣಪ್ಪ ದಿಬ್ಬದಹಳ್ಳಿ, ಮಹದೇವಪ್ಪ ಅಡ್ಮನಿ, ಕಾವ್ಯ ಹಿತ್ತಲಮನಿ, ಮಂಜುಳಾ ದಿವೀಗಿಹಳ್ಳಿ, ಗ್ಯಾರಂಟಿ ಅನುಷ್ಠಾನ ಸಮಿತಿ ಸರ್ವ ಸದಸ್ಯರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಫೋಟೊ : 27 ರಟ್ಟೀಹಳ್ಳಿ 1

ರಟ್ಟೀಹಳ್ಳಿ ಪಟ್ಟಣದಲ್ಲಿನಡೆದ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿಶಾಸಕ ಯು.ಬಿ.ಬಣಕಾರ ಮಾತನಾಡಿದರು.