‘ ಭಾವದೀಪ ಶಿಕ್ಷಣ ಸಂಸ್ಥೆ ’ಯ ವಿದ್ಯಾರ್ಥಿಗಳ ಸಾಧನೆ
ವಿಕ ಸುದ್ದಿಲೋಕ ಹುಬ್ಬಳ್ಳಿ
ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಂತ್ರಾಲಯಂನ ಭವಾನಿನಗರದ ‘ಭಾವದೀಪ ಶಿಕ್ಷಣ ಸಂಸ್ಥೆ’ಯ ಶ್ರೀಮತಿ ವಿಮಲಾ ಕುಲಕರ್ಣಿ ಮೆಮೋರಿಲ್ ಶಾಲೆಯ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ (ಸಿಬಿಎಸ್ ಇ) ಪರೀಕ್ಷೆಯಲ್ಲಿಉತ್ತಮ ಸಾಧನೆ ಮಾಡಿದ್ದಾರೆ.
ಒಟ್ಟು 46 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ23 ಡಿಸ್ಟಿಂಕ್ಷನ್ , 20 ಪ್ರಥಮ ದರ್ಜೆಯಲ್ಲಿಮತ್ತು 3 ದ್ವಿತೀಯ ದರ್ಜೆಯಲ್ಲಿಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿ ಸುಮೇದ್ ಶಿರಿಗೇರಿ (ಶೇ.94.5) ಶಾಲೆಗೆ ಪ್ರಥಮ, ಅನನ್ಯ ಕಬಾಡಿ(ಶೇ.93) ದ್ವಿತೀಯ, ಜೋಷ್ವಾ ಮಾಲಿನ್ (ಶೇ.92.83) ತೃತೀಯ ಸ್ಥಾನ ಪಡೆದಿದ್ದಾರೆ. ಉಳಿದಂತೆ ಮಯೂರ್ ಕಾಮತ್ (ಶೇ.92.33), ನಿಧಿ ಶೆಟ್ಟಿ(ಶೇ.91.5), ಅದಿತಿ ಗಾಯಕವಾಡ(ಶೇ.90.67), ಶಿಕ್ಷಣದೇವ ಚೌಗಲೆ(ಶೇ.89.17), ಶ್ರಾವಣಿ ಕುಲಕರ್ಣಿ(ಶೇ.88.33), ಸೋಹನ ಗೋಜನೂರ(ಶೇ.87.17), ಶರಣಕಟ್ಟಿ(ಶೇ.86.33), ಆರುಶ್ ಪವಾರ(ಶೇ.85.83), ಗ್ಯಾನ್ ಸಣಕಲ್ (ಶೇ.85.5), ಸಿಂಚನಾ ದೇಸಾಯಿ(ಶೇ.85.33), ರೀತು ಹೆಗಡೆ (ಶೇ.85),ಚಾರ್ವಿ ಶ್ರೀನಿವಾಸ (ಶೇ.84.33), ನಿಶಾಂತ್ ಹಿರೇಮಠ (ಶೇ.82.33), ಅಥರ್ವ ಕನಕೂರ (ಶೇ.80.83) ಅಂಕ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿಯ ಅಧ್ಯಕ್ಷರು,ಸರ್ವ ಸದಸ್ಯರು, ಪ್ರಾಚಾರ್ಯರು, ಮುಖ್ಯೋಪಾಧ್ಯಾಯರು, ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಫೋಟೊ: ವಿಮಲಾ ಕುಲಕರ್ಣಿ 1ರಿಂದ 8 ಡೇಟ್ ನಲ್ಲಿವೆ.

