24ನೇ ವರ್ಷದ ಗಂಗ ಶಿರಸ್ಸು ಜಾತ್ರೆ

Contributed byprk.k73@gmail.com|Vijaya Karnataka

ಮುಳಬಾಗಲು ನಗರದ ಮುತ್ಯಾಲಪೇಟೆಯಲ್ಲಿ ಶ್ರೀ ಗಂಗಮಾಂಬ ಮಾತೆಯ 24ನೇ ವರ್ಷದ ಜಾತ್ರೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು. ಸುಮಂಗಳಿಯರು ತಂಬಿಟ್ಟು ದೀಪ ಬೆಳಗಿಸಿ ವಿಶೇಷ ಪೂಜೆ ಸಲ್ಲಿಸಿದರು. ಚಿನ್ನದ ಆಭರಣಗಳಿಂದ ದೇವರನ್ನು ಅಲಂಕರಿಸಲಾಗಿತ್ತು. ಬೆಂಗಳೂರು, ಆಂಧ್ರಪ್ರದೇಶ ಹಾಗೂ ಕೋಲಾರ ಜಿಲ್ಲೆಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಯುವಕರ ಸಂಘದಿಂದ ಪ್ರಸಾದ ವಿತರಣೆ ನಡೆಯಿತು. 25 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

24th annual ganga shirasu festival a grand gathering of devotees

ಮುಳಬಾಗಲು: ನಗರದ ಮುತ್ಯಾಲಪೇಟೆಯಲ್ಲಿರುವ ಗ್ರಾಮ ದೇವತೆ ಶ್ರೀ ಗಂಗಮಾಂಬ ಮಾತೆಯ 24ನೇ ವರ್ಷದ ಶ್ರೀ ಗಂಗ ಶಿರಸ್ಸು ಜಾತ್ರೆ ಸಾವಿರಾರು ಭಕ್ತರ ಸಮಕ್ಷಮದಲ್ಲಿವೈಭವದಿಂದ ನೆರವೇರಿತು. ದೇವಾಲಯದ ಸಭಾಂಗಣದಲ್ಲಿಪ್ರತಿಷ್ಠಾಪನೆ ಮಾಡಿದ್ದ ಗಂಗಶಿರಸ್ಸು ದೇವರಿಗೆ ಸುಮಂಗಳಿಯರು ತಂಬಿಟ್ಟು ದೀಪಗಳನ್ನು ಬೆಳಗಿಸಿ ತದನಂತರ ಮೂಲ ಗಂಗಮ್ಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಚಿನ್ನದ ಆಭರಣಗಳಿಂದ ದೇವರನ್ನು ಅಲಂಕರಿಸಲಾಗಿತ್ತು. ಬೆಂಗಳೂರು, ಆಂಧ್ರಪ್ರದೇಶದ ಕೆಲ ಗ್ರಾಮಗಳಿಂದ ಹಾಗೂ ಕೋಲಾರ ಜಿಲ್ಲೆಯ ಕಡೆಗಳಿಂದ ಬಂದಿದ್ದ ಭಕ್ತರು ದೇವರ ದರ್ಶನ ಪಡೆದರು. ಗಂಗಮಾಂಬ ಯುವಕರ ಸಂಘದ ವತಿಯಿಂದ ಪ್ರಸಾದ ವಿತರಣೆ ನಡೆಯಿತು. ಬಿಸಿಲನ್ನೂ ಲೆಕ್ಕಿಸದೇ ಭಕ್ತರು ಸರತಿಯಲ್ಲಿಹೋಗಿ ದೇವರ ದರ್ಶನ ಮಾಡಿದರು. ಮುಂಜಾಗ್ರತಾ ಕ್ರಮವಾಗಿ ಸಿಪಿಐ ಅಣ್ಣಯ್ಯ ನೇತೃತ್ವದಲ್ಲಿವಿಶೇಷ ಪೊಲೀಸ್ ಬಂದೋಬಸ್ ್ತ ಮಾಡಲಾಗಿತ್ತು. ಒಟ್ಟಾರೆ 25 ಸಾವಿರಕ್ಕೂ ಹೆಚ್ಚು ಮಂದಿ ಪೂಜಾ ಕಾರ್ಯಕ್ರಮಗಳಲ್ಲಿಭಾಗವಹಿಸಿದ್ದರು.

28 ಎಂ.ಬಿ.ಎಲ್ ಪೊಟೋ 1 ಮುಳಬಾಗಲು ನಗರದ ಮುತ್ಯಾಲಪೇಟೆಯಲ್ಲಿಶ್ರೀ ಗಂಗಮಾಂಬ ಮೂಲ ದೇವರಿಗೆ ಚಿನ್ನದ ಆಭರಣಗಳಿಂದ ಅಲಂಕರಿಸಲಾಗಿತ್ತು.

28 ಎಂ.ಬಿ.ಎಲ್ ಪೊಟೋ 2 ಶ್ರೀ ಗಂಗಶಿರಸ್ಸಿಗೆ ಸುಮಂಗಳಿಯರು ತಂಬಿಟ್ಟು ದೀಪಗಳನ್ನು ಬೆಳಗಿಸಿ ವಿಶೇಷ ಪೂಜೆ ಸಲ್ಲಿಸಿದರು.