ಎಸ್ಸೆಸ್ಸೆಲ್ಸಿ

Contributed bysubedarcb@gmail.com|Vijaya Karnataka

ನರಗುಂದದ ರೋಟರಾರ‍ಯಕ್ಟ್ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಸ್ಪಂದನಾ ಮಾಲಿನಮನಿ ಶೇ.97.12 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಯಲ್ಲಮ್ಮ ಜಾಧವ ಮತ್ತು ಪ್ರಜ್ವಲ್ ಕುಲ್ಮಿ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿದ್ದಾರೆ. ಒಟ್ಟಾರೆ ಶಾಲೆಯ ಫಲಿತಾಂಶ ಶೇ.98.33 ರಷ್ಟಿದೆ. ಸಂಸ್ಥೆಯ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

quality achievement of kannada medium school ssc result 9833

28 ಎನ್ ಆರ್ ಡಿ-2

ರೋಟರಾರ ಯಕ್ಟ್ ಪ್ರೌಢ ಶಾಲೆ ಸಾಧನೆ

ನರಗುಂದ: ಪಟ್ಟಣದ ಬಾಬಾಸಾಹೇಬ ಶಿಕ್ಷಣ ಸಮಿತಿಯ ರೋಟರಾರ ಯಕ್ಟ್ ಕನ್ನಡ ಮಾಧ್ಯಮ ಪ್ರೌಢ ಶಾಲೆ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿಹೆಚ್ಚು ಅಂಕ ಪಡೆಯುವ ಮೂಲಕ ಉನ್ನತ ಸಾಧನೆಗೈದಿದ್ದಾರೆ.

ಸ್ಪಂದನಾ ಮಾಲಿನಮನಿ ಶೇ.97.12 ಅಂಕ ಪಡೆದು ಶಾಲೆಗೆ (ಪ್ರಥಮ), ಯಲ್ಲಮ್ಮ ಜಾಧವ ಶೇ.96.16 (ದ್ವಿತೀಯ) ಪ್ರಜ್ವಲ್ ಕುಲ್ಮಿ ಶೇ.93.76 (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ. ಆಕಾಶ ಗೋಜನೂರ ಶೇ. 92.80, ಭಾಗ್ಯಶ್ರೀ ಕಾರಡ್ಡಿ ಶೇ.88.48, ಚೇತನಾ ಕುಲಕರ್ಣಿ ಶೇ.88, ರಾಜೇಶ್ವರಿ ಪರ್ಸಪ್ಪನವರ ಶೇ.87.2, ನಾಗರಾಜ ಕಳಸದ ಶೇ.85.44, ಕವಿತಾ ಬದ್ನೂರ ಶೇ.84.64, ವರ್ಷಿಣಿ ಬಡಿಗೇರ ಶೇ. 83.68 ಅಂಕ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಶಾಲೆ ಒಟ್ಟು ಫಲಿತಾಂಶ ಶೇ.98.33 ರಷ್ಟು ಆಗಿದೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಅಧ್ಯಕ್ಷ ಸುರೇಶ ಬೋನಗೇರಿ, ಕಾರ್ಯದರ್ಶಿ ರಾಜು ಕಲಾಲ, ಖಜಾಂಚಿ ಪ್ರವೀಣ ಆನೆಗುಂದಿ, ಆಡಳಿತ ಮಂಡಳಿ ಸರ್ವ ಸದಸ್ಯರು, ಮುಖ್ಯೋಪಾಧ್ಯಾಯರು ಅಭಿನಂದನೆ ಸಲ್ಲಿಸಿದ್ದಾರೆ.

ನರಗುಂದ: ಫೋಟೋ ಶಿರ್ಷಿಕೆ) 28 ಎನ್ ಆರ್ ಡಿ-2 : ಸ್ಪಂಧನಾ ಮಾಲಿನಮನಿ.

ನರಗುಂದ: ಫೋಟೋ ಶಿರ್ಷಿಕೆ) 28 ಎನ್ ಆರ್ ಡಿ-2 ಎ : ಯಲ್ಲಮ್ಮ ಜಾಧವ.