ಹೊನ್ನಾವರ ಇಂದೇ

Contributed bykrishnamoortibhat@gmail.com|Vijaya Karnataka

ಹೊನ್ನಾವರದಲ್ಲಿ ಶ್ರೀ ರಾಮಚಂದ್ರಾಪುರ ಮಠ ಮತ್ತು ಹಿಂದೂಪರ ಸಂಘಟನೆಗಳು ಗೋಮಾತಾ ಸಮ್ಮಾನ್‌ ಅಭಿಯಾನಕ್ಕೆ ಬೆಂಬಲ ಕೋರಿವೆ. ಮುಖ್ಯಮಂತ್ರಿ, ಪ್ರಧಾನಮಂತ್ರಿ, ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗಿದೆ. ಗೋವಿಗೆ ರಾಷ್ಟ್ರೀಯ ಸ್ಥಾನಮಾನ, ಕೇಂದ್ರ ಗೋಸೇವಾ ಸಚಿವಾಲಯ ಸ್ಥಾಪನೆ, ಸಮಗ್ರ ಕಾನೂನು ರಚನೆ ಸೇರಿದಂತೆ 11 ಅಂಶಗಳ ಬೇಡಿಕೆಗಳನ್ನು ಮುಂದಿಡಲಾಗಿದೆ. ಈ ಸೇವಾಕಾರ್ಯಗಳಿಗೆ ಸಹಕಾರ ನೀಡುವಂತೆ ಆಗ್ರಹಿಸಲಾಗಿದೆ.

go mata sanman movement application a plea presented to the chief minister in honnavar

‘ಗೋಮಾತಾ ಸಮ್ಮಾನ್ ’ ಸೇವಾಕಾರ್ಯಗಳಿಗೆ ಸಹಕಾರ ನೀಡಿ

ವಿಕ ಸುದ್ದಿಲೋಕ ಹೊನ್ನಾವರ

ಗೋಮಾತಾ ಸಮ್ಮಾನ್ ಅಭಿಯಾನದ ಸೇವಾಕಾರ್ಯಗಳಿಗೆ ಸಹಕಾರ ನೀಡುವಂತೆ ಆಗ್ರಹಿಸಿ ಸೋಮವಾರ ಶ್ರೀ ರಾಮಚಂದ್ರಾಪುರ ಮಠ ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿಸೋಮವಾರ ಮುಖ್ಯಮಂತ್ರಿ, ಪ್ರಧಾನಮಂತ್ರಿ, ರಾಜ್ಯಪಾಲರು, ರಾಷ್ಟ್ರಪತಿಯವರಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.

ಗೋಮಾತೆಗೆ ರಾಷ್ಟ್ರೀಯ ಸ್ಥಾನಮಾನ, ಕೇಂದ್ರ ಗೋಸೇವಾ ಸಚಿವಾಲಯ ಸ್ಥಾಪನೆ, ಸಮಗ್ರ ಕಾನೂನು ರಚನೆ ಸೇರಿದಂತೆ 11ಪುಟಗಳ ಆಗ್ರಹಗಳ ಮನವಿ ಸಲ್ಲಿಸಲಾಯಿತು.

ಶ್ರೀಮಠದ ಹೊನ್ನಾವರ ಮಂಡಲಾಧ್ಯಕ್ಷ ಪಿ.ಎನ್ .ಭಟ್ ಕಡ್ಲೆ, ಸಹಾಯ ಪ್ರಧಾನ ಶ್ರೀಧರ ಹೆಗಡೆ, ಗುರಿಕಾರರಾದ ಶ್ರೀಧರ ಹೆಗಡೆ ಹೊನ್ನಾವರ, ಅಜಿತ ಗುಡ್ಗೆ , ಮುಖಂಡರಾದ ಎಚ್ .ಆರ್ ಗಣೇಶ, ನಾಗರಾಜ ಭಟ್ , ಹಿಂದೂಪರ ಸಂಘಟನೆಗಳ ಪ್ರಮುಖರಾದ ಸಂಜಯ ಶೇಟ್ , ಯೋಗೇಶ ಮೇಸ್ತ, ವಿಜಯ ಕಾಮತ, ಅರುಣ ಹಬ್ಬು ಮತ್ತಿತರರು ಇದ್ದರು. ಶ್ರೀಮಠದ ಹೊನ್ನಾವರ ಮಂಡಲ ಗುರುಕುಲಪ್ರಕಲ್ಪ ಪ್ರಧಾನ ಕೃಷ್ಣ ಜೋಶಿ ಸಂಕೊಳ್ಳಿ ಮನವಿ ಪತ್ರ ಓದಿದರು.

28 ಹೆಚ್ .ಎನ್ .ಆರ್ .2:

ಹೊನ್ನಾವರದಲ್ಲಿ ಶ್ರೀ ರಾಮಚಂದ್ರಾಪುರ ಮಠ ಹಾಗೂ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.