ಪುತ್ತೂರಿನಲ್ಲಿಪಶು ವೈದ್ಯಕೀಯ ಪಾಲಿ ಕ್ಲಿನಿಕ್ ಕಟ್ಟಡಕ್ಕೆ ಶಿಲಾನ್ಯಾಸ

Contributed bysudhakara.kannadamoole@timesofindia.com|Vijaya Karnataka

ಪುತ್ತೂರಿನಲ್ಲಿ ನೂತನ ಪಶು ವೈದ್ಯಕೀಯ ಪಾಲಿ ಕ್ಲಿನಿಕ್‌ ಕಟ್ಟಡಕ್ಕೆ ಶಾಸಕ ಅಶೋಕ್‌ ರೈ ಶಿಲಾನ್ಯಾಸ ನೆರವೇರಿಸಿದರು. ತಾಲೂಕು ಮಟ್ಟದಲ್ಲಿ ಪಶು ವೈದ್ಯಕೀಯ ಸೇವೆಗಳನ್ನು ಬಲಪಡಿಸುವ ಉದ್ದೇಶದಿಂದ ಈ ಪಾಲಿ ಕ್ಲಿನಿಕ್‌ ನಿರ್ಮಾಣವಾಗಲಿದೆ. ಮುಖ್ಯಮಂತ್ರಿಗಳ ಘೋಷಣೆಯಂತೆ 40 ಲಕ್ಷ ಅನುದಾನ ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.

puttur new veterinary poly clinic launched for multi purpose animal hospital

ವಿಕ ಸುದ್ದಿಲೋಕ ಪುತ್ತೂರು

ಪುತ್ತೂರಿನಲ್ಲಿನೂತನವಾಗಿ ನಿರ್ಮಾಣವಾಗಲಿರುವ ವಿವಿಧೋದ್ದೇಶ ಪಶು ಆಸ್ಪತ್ರೆ ( ಪಾಲಿ ಕ್ಲಿನಿಕ್ ) ಕಟ್ಟಡಕ್ಕೆ ಸೋಮವಾರ ಶಾಸಕ ಅಶೋಕ್ ರೈ ಶಿಲಾನ್ಯಾಸ ಮಾಡಿದರು.

ತಾಲೂಕು ಮಟ್ಟದಲ್ಲಿಪಶು ವೈದ್ಯಕೀಯ ಸೇವೆಗಳನ್ನು ಬಲಪಡಿಸಲು ಮತ್ತು ಜಾನುವಾರು, ಸಾಕು ಪ್ರಾಣಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ಉದ್ದೇಶದಿಂದ ತಾಲೂಕು ಮಟ್ಟದ ಪ್ರಥಮ ಪಾಲಿ ಕ್ಲಿನಿಕ್ ನಿರ್ಮಾಣವಾಗಲಿದೆ.

ಶಿಲಾನ್ಯಾಸ ನೆರವೇರಿಸಿ ಫಲಾನುಭವಿಗಳಿಗೆ ನಾನಾ ಸವಲತ್ತುಗಳನ್ನು ವಿತರಿಸಿ ಮಾತನಾಡಿದ ಶಾಸಕರು, ಇಲಾಖೆಯ ಯೋಜನೆಗಳನ್ನು ಮನೆ ಮನೆಗೆ ಮುಟ್ಟಿಸಲು ಪಶು ಸಖಿಯರನ್ನು ಸರಕಾರ ನೇಮಕ ಮಾಡಿದೆ. ಈ ಮೂಲಕ ತಳಮಟ್ಟದಲ್ಲಿಜಾನುವಾರಗಳ ಕಾಳಜಿ ವಹಿಸುವ ಕೆಲಸವಾಗುತ್ತಿದೆ ಎಂದರು.

ಪಶುವೈದ್ಯಕೀಯ ಸೇವಾ ಇಲಾಖೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಧರ್ಮಪಾಲ ಕೆ. ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ20 ತಾಲೂಕುಗಳಿಗೆ ಪಾಲಿ ಕ್ಲಿನಿಕ್ ನ ಘೋಷÜಣೆ ಮಾಡಿದ್ದರು. ಇದರ ಭಾಗವಾಗಿ ಪುತ್ತೂರು ಶಾಸಕರ ಶಿಫಾರಸ್ಸಿನಂತೆ ದ.ಕ. ಜಿಲ್ಲೆಯಲ್ಲಿ ಪುತ್ತೂರು ತಾಲೂಕಿಗೆ ಪ್ರಥಮವಾಗಿ ಪಾಲಿಕ್ಲಿನಿಕ್ ಮಂಜೂರಾಗಿದೆ. ಸರಕಾರದಿಂದ 40 ಲಕ್ಷ ಅನುದಾನ ಬಿಡುಗೆಗೊಂಡಿದೆ. ಈಗಿರುವ ಪಶುವೈದ್ಯಕೀಯ ಆಸ್ಪತ್ರೆಯ ಸಮೀಪವೇ ಪಾಲಿಕ್ಲಿನಿಕ್ ನಿರ್ಮಾಣವಾಗಲಿದೆ ಎಂದರು.

ಸವಲತ್ತು ವಿತರಣೆ: 9ನೇ ಸುತ್ತಿನ ಕಾಲುಬಾಯಿ ಲಸಿಕಾ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಶೇ.50ರ ಸಹಾಯಧನದಲ್ಲಿ18 ಫಲಾನುಭವಿಗಳಿಗೆ ತಲಾ 2 ರಬ್ಬರ್ ನೆಲಹಾಸು, 6 ಫಲಾನುಭವಿಗಳಿಗೆ 2 ಎಚ್ ಪಿ ಸಾಮರ್ಥ್ಯದ ಮೇವು ಕತ್ತರಿಸುವ ಯಂತ್ರ ಹಾಗೂ 3 ಫಲಾನುಭವಿಗಳಿಗೆ ಮಲೆನಾಡು ಗಿಡ್ಡ ತಳಿಯ ಹೆಣ್ಣುಕರುಗಳನ್ನು ವಿತರಿಸಲಾಯಿತು.

ಉಪ್ಪಿನಂಗಡಿ ಪಶುವೈದ್ಯಾಧಿಕಾರಿ ಡಾ.ಉಷಾ, ಪಾಣಾಜೆ ಮುಖ್ಯ ಪಶುವೈದ್ಯಾಧಿಕಾರಿ ಡಾ.ಎಂ.ಪಿ.ಪ್ರಕಾಶ್ , ಗುತ್ತಿಗೆದಾರ ರಾಧಾಕೃಷ್ಣ, ಜಾನುವಾರು ಅಭಿವೃದ್ಧಿ ಅಧಿಕಾರಿ ಪುಷ್ಪರಾಜ ಶೆಟ್ಟಿ, ಹಿರಿಯ ಪಶುವೈದ್ಯಕೀಯ ಪರೀಕ್ಷಕ ವೀರಪ್ಪ, ಈಶ್ವರಮಂಗಲದ ಹಿರಿಯ ಪಶುವೈದ್ಯ ಪರೀಕ್ಷಕ ಬಸವರಾಜ್ ಉಪಸ್ಥಿತರಿದ್ದರು.

ಫೋಟೋ: 27ಪಿ-ಪಶು

ಪುತ್ತೂರಿನಲ್ಲಿನಿರ್ಮಾಣವಾಗಲಿರುವ ನೂತನ ಪಶು ವೈದ್ಯಕೀಯ ಪಾಲಿ ಕ್ಲಿನಿಕ್ ಕಟ್ಟಡದ ಶಿಲಾನ್ಯಾಸ ಸಮಾರಂಭದಲ್ಲಿಶಾಸಕರು ದೀಪ ಪ್ರಜ್ವಲಿಸಿದರು.