ಹವಾಮಾನ ಬದಲು ಪರಿಣಾಮ ತಗ್ಗಿಸಲು ಕ್ರಿಯಾ ಯೋಜನೆ

Contributed byPunith AR|Vijaya Karnataka

ಹವಾಮಾನ ಬದಲಾವಣೆಯ ಪರಿಣಾಮ ತಗ್ಗಿಸಲು ಕರ್ನಾಟಕ ರಾಜ್ಯ ಕ್ರಿಯಾ ಯೋಜನೆ ರೂಪಿಸಲಾಗಿದೆ. ಪರಿಸರ ಇಲಾಖೆ, ಜಿ.ಪಂ. ಸಹಯೋಗದಲ್ಲಿ ಅನುಷ್ಠಾನಕ್ಕೆ ಕ್ರಮ ವಹಿಸಲಾಗಿದೆ. ಬೆಂಗಳೂರಿನಲ್ಲಿ ಶ್ವಾಸತಾಣಗಳ ರಕ್ಷಣೆಗೆ ಒತ್ತು ನೀಡಲಾಗಿದೆ. 11 ಕೋಟಿ ಸಸಿ ನೆಡಲಾಗಿದೆ. ವಿಶ್ವಗುರು ಬಸವಣ್ಣ ಜೈವಿಕ ಉದ್ಯಾನ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆಯಲಿದೆ. ಹವಾಮಾನ ಮಿತ್ರ ರೇಡಿಯೋ ಕಾರ್ಯಕ್ರಮ ಜನಜಾಗೃತಿ ಮೂಡಿಸುತ್ತಿದೆ.

action plan to mitigate climate change effects in karnataka

ವಿಕ ಸುದ್ದಿಲೋಕ ಬೆಂಗಳೂರು

ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮ ತಗ್ಗಿಸಲು ಕರ್ನಾಟಕ ರಾಜ್ಯ ಕ್ರಿಯಾ ಯೋಜನೆ (ಕೆಎಸ್ ಎಪಿಸಿಸಿ) ರೂಪಿಸಲಾಗಿದ್ದು, ಇದರ ಸಮರ್ಪಕ ಅನುಷ್ಠಾನಕ್ಕೆ ಕ್ರಮ ವಹಿಸಲು ಸೂಚಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಮಂಗಳವಾರ ಆಯೋಜಿಸಿದ್ದ ‘ಬೆಂಗಳೂರಿನಲ್ಲಿತಾಪಮಾನ ವೈಪರೀತ್ಯ ಹಾಗೂ ಅದರ ಪರಿಣಾಮಗಳು’ ಕುರಿತ ವಿಚಾರ ಸಂಕಿರಣದಲ್ಲಿಅವರು ಮಾತನಾಡಿದರು.

‘‘ಕ್ರಿಯಾ ಯೋಜನೆಯನ್ನು ರಾಜ್ಯ ಸರಕಾರದ ನಾನಾ ಇಲಾಖೆಗಳ ಸಹಯೋಗದೊಂದಿಗೆ ಜಾರಿಗೆ ತರಲು ಪರಿಸರ ಇಲಾಖೆ ವ್ಯಾಪ್ತಿಗೆ ಒಳಪಡುವ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ-ಎಂಪ್ರಿ ಕ್ರಮ ಕೈಗೊಂಡಿದೆ. ಜತೆಗೆ, ಜಿ.ಪಂ. ಕಚೇರಿಗಳ ಸಹಯೋಗದೊಂದಿಗೆ ಕೆಎಸ್ ಎಪಿಸಿಸಿ ಅನುಷ್ಠಾನ ಮತ್ತು ಅದರ ಪ್ರಗತಿಯ ಕುರಿತು ಜಿಲ್ಲಾಅಧಿಕಾರಿಗಳು ಮತ್ತು ಇತರ ಸಂಬಂಧಿತ ಸಂಸ್ಥೆಗಳಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ರಾಜ್ಯದ 31 ಜಿಲ್ಲೆಗಳಲ್ಲೂಕಾರ್ಯಕ್ರಮ ರೂಪಿಸಲಾಗುವುದು,’’ ಎಂದು ತಿಳಿಸಿದರು.

‘‘ಹವಾಮಾನ-ಚೇತರಿಕೆ ಕುರಿತು ಸಲಹೆ ನೀಡಲು 2025ರ ಏಪ್ರಿಲ್ ನಲ್ಲಿಸಮರ್ಪಿತ ರೇಡಿಯೊ ಕಾರ್ಯಕ್ರಮ ‘ಹವಾಮಾನ ಮಿತ್ರ’ ಪ್ರಾರಂಭಿಸಲಾಗಿದ್ದು, ಈವರೆಗೆ 24 ಕಾರ್ಯಕ್ರಮಗಳನ್ನು ಆಕಾಶವಾಣಿಯಲ್ಲಿಪ್ರಸಾರ ಮಾಡಲಾಗಿದೆ. ಈ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ,’’ ಎಂದು ತಿಳಿಸಿದರು.

ಬೆಂಗಳೂರಿನ ಶ್ವಾಸತಾಣಗಳ ರಕ್ಷಣೆಗೆ ಕ್ರಮ:

‘ಧಿ‘ಕಳೆದ 3 ವರ್ಷಗಧಿಳ ಅವಧಿಯಲ್ಲಿರಾಜ್ಯದಲ್ಲಿಸುಮಾರು 11 ಕೋಟಿ ಸಸಿಗಳನ್ನು ನೆಡಲಾಗಿದೆ. ಈ ಸಸಿಗಳ ಪೈಕಿ ಎಷ್ಟು ಬದುಕುಳಿದಿವೆ ಎಂಬ ಮಾಹಿತಿಯನ್ನು ಅರಣ್ಯ ಇಲಾಖೆಯ ವೆಬ್ ಸೈಟ್ ನಲ್ಲಿಪ್ರಧಿಕಧಿಟಿಧಿಸುವ ಮೂಲಕ ಸಾಧಿರ್ವಧಿಜಧಿನಿಧಿಕಧಿರಿಗೆ ಮಾಹಿತಿ ಒದಗಿಸಲಾಗಿದೆ. ಬೆಂಗಳೂರು ನಗರದ ಕೊತ್ತನೂರು, ಕಾಡುಗೋಡಿ, ಬಿ.ಎಂ.ಕಾವಲ್ , ತುರಹಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿನ ಸುಮಾರು 10 ಸಾವಿರ ಕೋಟಿ ರೂ. ಬೆಲೆ ಬಾಳುವ 250 ಎಕರೆ ಅರಣ್ಯ ಭೂಮಿಯ ಒತ್ತುವರಿ ತೆರವುಗೊಳಿಸಲಾಗಿದೆ. ಆ ಜಾಗದಲ್ಲಿಕಾಂಪೌಂಡ್ ನಿರ್ಮಿಸಿ ಸಾವಿರಾರು ಗಿಡಗಳನ್ನು ನೆಟ್ಟು ನೆಡುತೋಪು ನಿರ್ಮಿಸಲಾಗಿದೆ. ಈ ಮೂಲಕ ನಗರಕ್ಕೆ ಅಗತ್ಯವಾದ ಶ್ವಾಸತಾಣ ಉಳಿಸಲಾಗಿದೆ,’ಧಿ’ ಎಂದರು.

‘ಧಿ‘ಈ ಹಿಂದೆ ಕೈಗಾರಿಕೆ ಉದ್ದೇಶಕ್ಕಾಗಿ ಕೇಂದ್ರ ಸರಕಾರಿ ಸ್ವಾಮ್ಯದ ಎಚ್ ಎಂಟಿಗೆ ಪೀಣ್ಯ ಪ್ಲಾಂಟೇಷನ್ ನಲ್ಲಿಸುಮಾರು 400 ಎಕರೆಗೂ ಹೆಚ್ಚು ಅರಣ್ಯ ಭೂಮಿ ನೀಡಲಾಗಿತ್ತು. ಎಚ್ ಎಂಟಿ ಇಲ್ಲಿ160 ಎಕರೆ ಅರಣ್ಯ ಭೂಮಿಯನ್ನು ಮಾರಾಟ ಮಾಡಿದೆ. ಇನ್ನೂ ಅಲ್ಲಿ280 ಎಕರೆ ಅರಣ್ಯ ಉಳಿದಿದ್ದು, ಇದನ್ನು ಮರಳಿ ಇಲಾಖೆಗೆ ಪಡೆದು ಬೆಂಗಳೂರು ನಗರಕ್ಕೆ ಅತ್ಯಗತ್ಯವಾದ ಶ್ವಾಸತಾಣವನ್ನು ಉಳಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ, ಕಾನೂನು ಹೋರಾಟ ನಡೆಯುತ್ತಿದೆ. ಪ್ರಸ್ತುತ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದೆ,’ಧಿ’ ಎಂದು ಮಾಹಿತಿ ನೀಡಿದರು.

ಏರ್ ಶೋ ನಡೆಯುವ ಭೂಮಿಯೂ ಅರಣ್ಯ:

‘ಧಿ‘ಬೆಂಗಳೂರಿನಲ್ಲಿಪ್ರತಿ 2 ವರ್ಷಗಳಿಗೊಮ್ಮೆ ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನ ಏರ್ ಶೋ ನಡೆಯುವ ಗಂಟಿಗಾನಹಳ್ಳಿಯಲ್ಲಿರುವ ಯಲಹಂಕ ವಾಯುನೆಲೆ ಕೂಡ ಅರಣ್ಯ ಭೂಮಿಯಾಗಿದೆ. ಗಂಟಿಗಾನಹಳ್ಳಿ ಗ್ರಾಮದ 159 ಎಕರೆ ಪ್ರದೇಶ ಸರಕಾರಿ ಕಾಯ್ದಿಟ್ಟ ಅರಣ್ಯ ಪ್ರದೇಶವಾಗಿದ್ದು, ವಾಯುಪಡೆ ಪರ್ಯಾಯ ಭೂಮಿ ನೀಡದಿದ್ದರೆ, ಅದನ್ನು ಅರಣ್ಯ ಇಲಾಖೆಗೆ ಹಿಂಪಡೆಯಲು ಕ್ರಮ ವಹಿಸಲಾಗುವುದು,’ಧಿ’ ಎಂದರು.

ಮೇ ನಲ್ಲಿವಿಶ್ವಗುರು ಬಸವಣ್ಣ ಜೈವಿಕ ಉದ್ಯಾನಕ್ಕೆ ಶಂಕುಸ್ಥಾಪನೆ:

‘ಧಿ‘ಬೆಂಗಳೂರು ಉತ್ತರ ತಾಲೂಕಿನ ಮಾದಪ್ಪನಹಳ್ಳಿಯಲ್ಲಿ153 ಎಕರೆ ಪ್ರದೇಶದಲ್ಲಿವಿಶ್ವಗುರು ಬೃಹತ್ ಜೈವಿಕ ಉದ್ಯಾನ ನಿರ್ಮಾಣ ಮಾಡಲು ಸರಕಾರ ಸಂಕಲ್ಪ ಮಾಡಿದ್ದು, ಸಚಿವ ಸಂಪುಟದ ಅನುಮೋದನೆಯೂ ದೊರೆತಿದೆ. ಮುಂದಿನ ತಿಂಗಳು ಮುಖ್ಯಮಂತ್ರಿಗಳಿಂದ ಇದಕ್ಕೆ ಶಂಕುಸ್ಥಾಪನೆ ಮಾಡಿಸಲಾಗುವುದು,’’ ಎಂದಧಿರು.

ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕ ಎಂ.ಎಸ್ .ದಿವಾಕರ್ ಮಾತನಾಡಿ, ‘‘ ರಾಜ್ಯದಲ್ಲಿಗ್ರಾಮ ಪಂಚಾಯಿತಿವಾರು ಮಳೆ ಮಾಪನ ಇದ್ದು, ಸದ್ಯದಲ್ಲೇ ಹೋಬಳಿ ಮಟ್ಟದಲ್ಲಿವೆದರ್ ಸ್ಟೇಷನ್ (ಹವಾಮಾನ ಕೇಂದ್ರ) ಸ್ಥಾಪಿಸಲಾಗುತ್ತದೆ. ಇದರಿಂದ ಪತ್ರಿ 20 ನಿಮಿಷಕ್ಕೊಮ್ಮೆ ಕನಿಷ್ಠ ಮತ್ತು ಗರಿಷ್ಠ ತಾಪಮಾನ ಮಾಹಿತಿ ಪಡೆಯಬಹುದಾಗಿದೆ,’’ ಎಂದು ಮಾಹಿತಿ ನೀಡಿದರು.

ಈ ವೇಳೆ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ, ಅಸರ್ ಸೋಷಿಯಲ್ ಇಂಪ್ಯಾಕ್ಟ್ ಅಡ್ವೈಸರ್ಸ್ ಸಂವಹನ ಮುಖ್ಯಸ್ಥ ಬ್ರಿಕೇಶ್ ಸಿಂಗ್ ಉಪಸ್ಥಿತರಿದ್ದರು.