ದೇವರ ಮೂರ್ತಿ ಮೇಲಿದ್ದ ಬೆಳ್ಳಿ ಆಭರಣ ಕಳ್ಳತನ

Contributed byRamesha.Hulakoppa@timesgroup.com|Vijaya Karnataka

ಧಾರವಾಡ ತಾಲೂಕಿನ ಲಕಮಾಪುರ ಗ್ರಾಮದಲ್ಲಿ ದೇವಸ್ಥಾನದ ಕೀಲಿ ಮುರಿದು ಕಳ್ಳರು ದೇವರ ಮೂರ್ತಿ ಮೇಲಿದ್ದ ಬೆಳ್ಳಿ ಆಭರಣಗಳನ್ನು ಕಳವುಗೈದಿದ್ದಾರೆ. ಸುಮಾರು 1 ಕೆಜಿಗೂ ಅಧಿಕ ತೂಕದ ಬೆಳ್ಳಿ ಆಭರಣಗಳು ಕಳ್ಳತನವಾಗಿವೆ. ಅರ್ಚಕರು ದೇವಸ್ಥಾನಕ್ಕೆ ಬಂದಾಗ ಕಳ್ಳತನ ಬೆಳಕಿಗೆ ಬಂದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

theft of silver ornaments from god idol in lakmapur village

ದೇವರ ಮೂರ್ತಿ ಮೇಲಿದ್ದ ಬೆಳ್ಳಿ ಆಭರಣ ಕಳ್ಳತನ

ಧಾರವಾಡ: ತಾಲೂಕಿನ ಲಕಮಾಪುರ ಗ್ರಾಮದಲ್ಲಿದೇವಸ್ಥಾನದ ಕೀಲಿ ಮುರಿದ ಕಳ್ಳರು ದೇವರ ಮೂರ್ತಿ ಮೇಲಿದ್ದ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿದ ಘಟನೆ ಸೋಮವಾರ ತಡರಾತ್ರಿ ನಡೆದಿದೆ.

ಗ್ರಾಮದ ಬಸವಣ್ಣ ದೇವರ ಮೂರ್ತಿ ಮೇಲಿದ್ದ 1 ಕೆಜಿಗೂ ಅಧಿಧಿಕ ತೂಕದ ಬೆಳ್ಳಿ ಆಭರಣಗಳು ಕಳ್ಳತನವಾಗಿವೆ. ಮಂಗಳವಾರ ಬೆಳಗ್ಗೆ ಅರ್ಚಕರು ದೇವಸ್ಥಾನಕ್ಕೆ ಹೋಗಿ ನೋಡಿದಾಗ ಕಳ್ಳತನ ಗೊತ್ತಾಗಿದೆ.

ಗ್ರಾಮದ ಹಿರಿಯರು ಗರಗ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗರಗ ವೃತ್ತ ಸಿಪಿಐ ಶಿವಯೋಗಿ ಲೋಹಾರ್ , ಪಿಎಸ್ ಐ ಸಿದ್ರಾಮಪ್ಪ, ಶ್ವಾನದಳ ಹಾಗೂ ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.