ವಿದ್ಯಾಲಯದ ಸಾಧನೆ ನಾಡಿನ ಹೆಮ್ಮೆ: ಶಾಸಕ ಕೊಡ್ಗಿ
ವಿಕ ಸುದ್ದಿಲೋಕ ಕುಂದಾಪುರ
ಶಂಕರನಾರಾಯಣದಂತಹ ಗ್ರಾಮೀಣ ಭಾಗದಲ್ಲಿಕಳೆದ 30 ವರ್ಷಗಳಿಂದ ಶಿಕ್ಷಣ ನೀಡುತ್ತಾ ಬರುತ್ತಿರುವ ಮದರ್ ತೆರೆಸಾ ವಿದ್ಯಾಲಯ ನಾಡಿನ ಹೆಮ್ಮೆ. ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿಮೊದಲ ಸ್ಥಾನ ಗಳಿಸಿದೆ. ಪ್ರಥಮ ಸ್ಥಾನಿಯಾಗಿರುವ ಶಾಲೆಯ ವಿದ್ಯಾರ್ಥಿ ಪ್ರೀತಮ್ ನನ್ನೂರಿನ ಹುಡುಗ ಎಂಬ ಹೆಮ್ಮೆ ನನಗಿದೆ ಎಂದು ಶಾಸಕ ಕಿರಣ್ ಕುಮಾರ ಕೊಡ್ಗಿ ಹೇಳಿದರು.
ಬುಧವಾರ ಶಂಕರನಾರಾಯಣ ಮದರ್ ತೆರೆಸಾ ಆಂಗ್ಲವಿದ್ಯಾಲಯದಲ್ಲಿಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಸಾಧಕ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಖಾಸಗಿ ವಿದ್ಯಾಲಯಗಳಲ್ಲಿಇಂದು ಭಾರಿ ಪೈಪೋಟಿಯಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸರ್ವ ರೀತಿಯ ಪ್ರಯತ್ನ ನಡೆಸುತ್ತಿದ್ದಾರೆ. ಇಂತಹ ಪ್ರಯತ್ನ ಸರಕಾರಿ ಶಾಲೆಗಳಲ್ಲೂಮೂಡಿಬರಬೇಕು ಎಂದರು.
ಉಡುಪಿ ಡಯಟ್ ಪ್ರಿನ್ಸಿಪಾಲ್ ಡಾ.ಅಶೋಕ ಕಾಮತ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಫಲಿತಾಂಶದಲ್ಲಿಪರ್ಪಕ್ಷನ್ ಬಯಸುತ್ತಾರೆ. ಬಡತನದಲ್ಲಿಯೂ ಇಲ್ಲಿನ ಮಕ್ಕಳು ಪೋಷಕರ ತುಂಬು ಪ್ರೋತ್ಸಾಹದಿಂದ ನಾಡು ಮೆಚ್ಚುವಂತಹ ಸಾಧನೆ ಮಾಡಿದ್ದಾರೆ. ಜಿಲ್ಲೆಗೆ 625ಕ್ಕೆ 625 ಅಂಕ ಪಡೆಯುವ ಮಕ್ಕಳ ಸಂಖ್ಯೆ ಹೆಚ್ಚಲಿ ಎಂದರು.
ಅಭಿನಂದನೆ ಸ್ವೀಕರಿಸಿದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಪ್ರೀತಮ್ ಪೂಜಾರಿ ಮಾತನಾಡಿ, ಎಐ ಯುಗದಲ್ಲಿರುವ ನಾವು ಸಾಧನೆಗಾಗಿ ಮೊಬೈಲ್ ಇನ್ನಿತರ ತಂತ್ರಜ್ಞಾನಗಳ ಸದ್ವಿನಿಯೋಗಪಡೆಯಬೇಕು. ಮನೋರಂಜನೆಗಾಗಿ ಮೊಬೈಲ್ ನೋಡುವುದನ್ನು ಬಿಟ್ಟು ಬಿಡಬೇಕು. ನನ್ನೀ ಸಾಧನೆಗೆ ವಿದ್ಯಾಲಯದ ತುಂಬು ಪ್ರೋತ್ಸಾಹ ಕಾರಣ ಎಂದರು.
ಈ ಸಂದರ್ಭ ಎಸ್ ಎಸ್ ಎಲ್ ಸಿಯಲ್ಲಿರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಪ್ರೀತಮ್ ಪೂಜಾರಿ, ಟಾಪ್ 10ರಲ್ಲಿಸ್ಥಾನ ಪಡೆದಿರುವ ಗ್ರೀಷ್ಮಾ, ಮಂಜುಶ್ರೀ, ಪಿಯುಸಿಯಲ್ಲಿರಾರ ಯಂಕ್ ವಿಜೇತ ವಿದ್ಯಾರ್ಥಿಗಳಾದ ಅಮೂಲ್ಯ, ಸಂಚಯ, ಪ್ರಗತಿ ಮತ್ತು ರಿಶಿತಾ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಸಾಧನೆಗೆ ಅವಿರತ ಶ್ರಮಿಸಿದ ಶಿಕ್ಷಕವೃಂದವನ್ನು ಗೌರವಿಸಲಾಯಿತು. ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಗಳಾದ ಶಮಿತಾರಾವ್ ಮತ್ತು ರೆನಿಟಾ ಲೋಬೊ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಡಿಡಿಪಿಐ ಲೋಕೇಶ್ , ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಮದರ್ ತೆರೆಸಾ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಜೈಸನ್ ಲೂವಿಸ್ ಉಪಸ್ಥಿತರಿದ್ದರು. ಮಂಜುನಾಥ ಬಾಯರಿ ಸ್ವಾಗತಿಸಿದರು. ಅಲಿಡಾ ಡೇಸಾ ಸನ್ಮಾನಿತರ ವಿವರ ನೀಡಿದರು. ವೈಶಾಲಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸಂತೋಷ್ ಕುಮಾರ ಶೆಟ್ಟಿ ವಂದಿಸಿದರು.
ಪೋಟೊ//29ಕೆ-ಎಸ್ ಎನ್ ಕೆ//. ಶಂಕರನಾರಾಯಣ ಮದರ್ ತೆರೆಸಾ ವಿದ್ಯಾಲಯದಲ್ಲಿಎಸ್ ಎಸ್ ಎಲ್ ಸಿ, ಪಿಯುಸಿ ಸಾಧಕರನ್ನು ಸನ್ಮಾನಿಸಲಾಯಿತು.
(ಜಾಹೀರಾತು ನೀಡಿದ್ದಾರೆ).

