ಲೈಂಗಿಕ ಸಾಮರ್ಥ್ಯ ಹೆಚ್ಚಿಸುವ ಮಾತ್ರೆಯ ಅಪಾಯ
ಡಾ.ಲಕ್ಷ್ಮಣ ವಿ ಎ
ಇಂಟ್ರೊ: ನಿಮಿರು ದೌರ್ಬಲ್ಯ ಒಂದು ಸ್ವತಂತ್ರ ರೋಗವಲ್ಲ; ಅದು ಹಲವಾರು ಆರೋಗ್ಯ ಸಮಸ್ಯೆಗಳ ಲಕ್ಷಣವೂ ಇರಬಹುದು.
ಆತ ನನಗೆ ಪವರ್ ’ ಮಾತ್ರೆ ಬೇಕೆಂದ. ಚಿಗುರು ಮೀಸೆಯ ಹುಡುಗನಲ್ಲಿಹಾಗೆ ಕೇಳುವಲ್ಲಿಸಂಕೋಚ ಇರಲಿಲ್ಲ. ಇಪ್ಪತ್ತರ ಆಸುಪಾಸು ಅವನ ವಯಸ್ಸು. ಇದನ್ನು ಹಲವರು ನೀಲಿ ಮಾತ್ರೆ, ವಯಾಗ್ರ ಮಾತ್ರೆ ಅಂತಲೂ ಕರೆಯುತ್ತಾರೆ. ಕೆಲವರು ಏನೊಂದೂ ಬಾಯಿ ಬಿಡದೆ ಗೂಗಲಿನಲ್ಲಿರುವ ಚಿತ್ರ ತೋರಿಸಿ ಈ ಕಾಮೋತ್ತೇಜಕ ಮಾತ್ರೆ ಕೇಳುತ್ತಾರೆ. ಹೀಗೆ ಕೇಳುವವರಲ್ಲಿಬಹುತೇಕರು ಹದಿಹರೆಯದ ಯುವಕರು.
ವಯಾಗ್ರ ಮಾತ್ರೆ ಎಂಬ ಸಂಜೀವಿನಿ ಹೀಗೆ ಮಾರುಕಟ್ಟೆಯಲ್ಲಿಯದ್ವಾ ತದ್ವಾ ಬಿಕರಿಯಾಗಿ ಬಳಸಬಾರದ ವಯಸಿನಲ್ಲಿಬಳಸಲೇಬಾರದ ಸಂದರ್ಭದಲ್ಲಿಉಪಯೋಗಿಸುವ ದುರ್ಬಳಕೆಯಾಗುತ್ತಿರುವ ಮಾತ್ರೆ.
ತೀರ ಇತ್ತೀಚಿಗೆ ದಿಲ್ಲಿಯ ಗುರುಗ್ರಾಮದಲ್ಲಿಹದಿಹರೆಯದ ಯುವಕನೊಬ್ಬ ಈ ಮಾತ್ರೆಯನ್ನು ಅತಿಯಾಗಿ ಸೇವಿಸಿ ಅವನ ಪ್ರೇಯಸಿ ಬರುವ ಮುಂಚೆಯೇ ವಸತಿಗೃಹವೊಂದರಲ್ಲಿಶವವಾಗಿ ಮಲಗಿದ್ದ. ಇನ್ನೇನು ತಾನು ಮದುವೆಯಾಗಲಿರುವ ಹುಡುಗಿಗೆ ತನ್ನ ಶಕ್ತಿ ಪ್ರದರ್ಶಿಸುವ ಹಠಕ್ಕೆ ಯಾಕೆ ಬಿದ್ದಿದ್ದನೋ? ಆತನ ಮೃತ ದೇಹದ ಸುತ್ತ ಈ ನೀಲಿ ಮಾತ್ರೆಗಳ ಕವರುಗಳು ಹರಿದು ಬಿದ್ದಿದ್ದವು.
ಇಂದಿನ ಸಮಾಜದಲ್ಲಿ‘ಶಕ್ತಿ’ ಎಂಬ ಪದದ ಅರ್ಥವೇ ಬದಲಾಗುತ್ತಿರುವಂತೆ ಕಾಣುತ್ತಿದೆ. ದೈಹಿಕ ಸಾಮರ್ಥ್ಯ, ದಾಂಪತ್ಯ ಸಾಮರ್ಥ್ಯ ಮತ್ತು ವ್ಯಕ್ತಿತ್ವದ ಅಳೆಯುವಿಕೆಯನ್ನು ಒಂದೇ ಗಾತ್ರದಲ್ಲಿಅಳೆಯುವ ಪ್ರವೃತ್ತಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲೇ ಉ್ಟಛ್ಚಿಠಿಜ್ಝಿಛಿ ಈys್ಛ್ಠ್ಞ್ಚಠಿಜಿಟ್ಞ (ಉಈ) ಚಿಕಿತ್ಸೆಗೆ ಬಳಸುವ ಶಕ್ತಿವರ್ಧಕ ಮಾತ್ರೆಗಳು ವಿಶೇಷವಾಗಿ ಸಿಲ್ಡೆನಾಫಿಲ್ ವೈದ್ಯಕೀಯ ಸಾಧನವಾಗಿರಬೇಕಾದದ್ದು, ನಿಧಾನವಾಗಿ ಮನೋವೈಜ್ಞಾನಿಕ ಅವಲಂಬನೆಯ ಸಾಧನವಾಗುತ್ತಿದೆ.
ವೈದ್ಯಕೀಯವಾಗಿ ನೋಡಿದರೆ ಈ ಔಷಧ ವಿಜ್ಞಾನದ ಮಹಾನ್ ಆವಿಷ್ಕಾರ. ಅನೇಕ ಪುರುಷರಿಗೆ ದಾಂಪತ್ಯ ಜೀವನದಲ್ಲಿನಂಬಿಕೆ ಮತ್ತು ಸ್ಥಿರತೆ ನೀಡಿವೆ. ಆದರೆ, ಯಾವುದೇ ಔಷಧದಂತೆ, ಅದರ ಮೌಲ್ಯವರ್ಧನವಾಗುವುದು ಅದರ ಸರಿಯಾದ ಬಳಕೆಯಲ್ಲಿಮಾತ್ರ ಇದೆ. ವೈದ್ಯರ ಸಲಹೆ ಇಲ್ಲದೆ ಅಥವಾ ಕುತೂಹಲಕ್ಕಾಗಿ ಬಳಸುವ ಪ್ರಕ್ರಿಯೆ ಇದು ಚಿಕಿತ್ಸೆಯಿಂದ ಚಾಳಿಗೆ ಜಾರುವ ಅಪಾಯವಿದೆ.
ಇಂದಿನ ಯುವಕರಲ್ಲಿಕಾಣುತ್ತಿರುವ ಪ್ರಮುಖ ಬದಲಾವಣೆ ಏನೆಂದರೆ ದೈಹಿಕ ಸಮಸ್ಯೆ ಇಲ್ಲದಿದ್ದರೂ ಮಾತ್ರೆಗಳ ಮೇಲೆ ಅವಲಂಬನೆ. ‘ಮಾತ್ರೆ ಇಲ್ಲದೆ ಸಾಧ್ಯವಿಲ್ಲ’ ಎಂಬ ಭಾವನೆ. ಇದು ನಿಜಕ್ಕೂ ದೇಹದ ಸಮಸ್ಯೆಯಲ್ಲ; ಅದು ತನ್ನ ಮನಸ್ಸಿನ ಮೇಲಿನ ಅಪನಂಬಿಕೆಯ ಫಲ. ಈ ಮನೋವೈಜ್ಞಾನಿಕ ಅವಲಂಬನೆ, ದೀರ್ಘಾವಧಿಯಲ್ಲಿಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ.
ಅಪಾಯದ ಸಾಧ್ಯತೆ
ಹೃದಯ ರೋಗಿಗಳು, ಮಧುಮೇಹಿಗಳು ಅಥವಾ ಇತರ ಔಷಧಗಳನ್ನು ತೆಗೆದುಕೊಳ್ಳುವವರು ವೈದ್ಯರ ಸಲಹೆ ಇಲ್ಲದೆ ಈ ಮಾತ್ರೆಗಳನ್ನು ಬಳಸುವುದು ಅಪಾಯಕರ. ವಿಶೇಷವಾಗಿ ್ಞಜಿಠ್ಟಿaಠಿಛಿ ಔಷಧಿಗಳ ಜೊತೆ ಬಳಕೆ, ಜೀವಕ್ಕೆ ಬೆದರಿಕೆ ತರುವ ಮಟ್ಟಿಗೆ ರಕ್ತದ ಒತ್ತಡವನ್ನು ಕುಸಿತಗೊಳಿಸಬಹುದು.
ಇದಕ್ಕಿಂತಲೂ ಹೆಚ್ಚು ಚಿಂತಾಜನಕವಾದುದು ಹರ್ಬಲ್ ಅಥವಾ ನ್ಯಾಚುರಲ್ ಎಂಬ ಹೆಸರಿನಲ್ಲಿಮಾರಾಟವಾಗುವ ನಕಲಿ ಉತ್ಪನ್ನಗಳು, ನಿಯಂತ್ರಣವಿಲ್ಲದ ಪ್ರಮಾಣದಲ್ಲಿಕೆಲವೊಮ್ಮೆ ಇಂತಹದ್ದೆ ಔಷಧದಲ್ಲಿ್ಲ ಒಳಗೊಂಡಿರಬಹುದು. ಅಂದಹಾಗೆ ನಿಮಿರು ದೌರ್ಬಲ್ಯ ಒಂದು ಸ್ವತಂತ್ರ ರೋಗವಲ್ಲ; ಅದು ಹಲವಾರು ಆರೋಗ್ಯ ಸಮಸ್ಯೆಗಳ ಲಕ್ಷಣ. ಮಧುಮೇಹ, ರಕ್ತದೊತ್ತಡ, ಹಾರ್ಮೋನಲ್ ಅಸಮತೋಲನ, ಅಥವಾ ಮಾನಸಿಕ ಒತ್ತಡ ಇವುಗಳ ಪ್ರತಿಫಲನ. ಆದರೆ ಕ್ಷಣಿಕ ಪರಿಹಾರಕ್ಕಾಗಿ ಮಾತ್ರೆಗಳ ಮೇಲೆ ಅವಲಂಬಿಸುವುದು, ಈ ಮೂಲ ಕಾರಣಗಳನ್ನು ಗಮನಿಸದಂತೆ ಮಾಡುತ್ತದೆ. ಇದು ವೈದ್ಯಕೀಯ ದೃಷ್ಟಿಯಿಂದ ಅಪಾಯಕಾರಿ.
ಬಾಕ್ಸ್
ತಿಳಿದಿರಲಿ
ಶಕ್ತಿವರ್ಧಕ ಮಾತ್ರೆಗಳು ಕೇವಲ ಶಕ್ತಿ ನೀಡುತ್ತವೆ. ಆದರೆ ಅವು ನಂಬಿಕೆಯನ್ನು ಬಲಪಡಿಸಲಾರವು. ಆ ನಂಬಿಕೆ ಬರಬೇಕೆಂದರೆ ಆರೋಗ್ಯಕರ ಜೀವನಶೈಲಿ, ಮನಸ್ಸಿನ ಸಮತೋಲನ, ಮತ್ತು ವೈಜ್ಞಾನಿಕ ಮಾರ್ಗದರ್ಶನದಿಂದ ಮಾತ್ರ.ಕ್ಷಣಿಕ ಪರಿಹಾರಗಳ ಕಾಲದಲ್ಲಿ, ಶಾಶ್ವತ ಆರೋಗ್ಯದ ಬಗ್ಗೆ ಚಿಂತಿಸುವುದು ನಮ್ಮ ಸಮೂಹದ ಜವಾಬ್ದಾರಿ. ಮಾತ್ರೆಗಳಿಂದ ಶಕ್ತಿ ಪಡೆಯಬಹುದು; ಆದರೆ ಆತ್ಮವಿಶ್ವಾಸವನ್ನು ಕಟ್ಟಿಕೊಳ್ಳುವುದು ಜೀವನಶೈಲಿಯಿಂದಲೇ ಮಾತ್ರ ಸಾಧ್ಯ.

