ಸಣ್ಣಪುಟ್ಟ ಸುದ್ದಿಗಳು

Contributed bylakshmikanthakumar.boraiah@timesgroup.com|Vijaya Karnataka

ಶಿವಮೊಗ್ಗದಲ್ಲಿ ಏ.30ರಂದು ವಿದ್ಯುತ್ ವ್ಯತ್ಯಯವಾಗಲಿದೆ. ಮೇ 1ರಂದು ಭಗವಾನ್ ಬುದ್ಧ ಜಯಂತಿ ಆಚರಣೆ ನಡೆಯಲಿದೆ. ಸರಕಾರಿ ಬಾಲಿಕಾ ಪಿಯು ಕಾಲೇಜು ಉತ್ತಮ ಫಲಿತಾಂಶ ಪಡೆದಿದೆ. ಮೇ 2ರಂದು 'ರತ್ನಪಕ್ಷಿ' ನಾಟಕ ಪ್ರದರ್ಶನಗೊಳ್ಳಲಿದೆ. ಈ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು.

power outage in shivamogga bhagwan buddha jayanti and their achievements in grading

ಇಂದು ವಿದ್ಯುತ್ ವ್ಯತ್ಯಯ

ಶಿವಮೊಗ್ಗ: ಮಾಚೇನಹಳ್ಳಿ ವಿದ್ಯುತ್ ವಿತರಣಾ ಕೇಂದ್ರ ಮಾರ್ಗದಲ್ಲಿರಸ್ತೆ ವಿಸ್ತರಣೆ ಕಾಮಗಾರಿ ಹಿನ್ನೆಲೆಯಲ್ಲಿಏ.30ರಂದು ಬೆಳಗ್ಗೆ 10ರಿಂದ ಸಂಜೆ 5ಗಂಟೆ ವರೆಗೆ ಜಯಂತಿ ಗ್ರಾಮ, ಕೆಎಸ್ ಆರ್ ಪಿ ಕಾಲೊನಿ, ಮಾಚೇನಹಳ್ಳಿ, ಬಿದರೆ ಗೇಟ್ , ಬಿದರೆ, ಮಲ್ನಾಡ್ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿವಿದ್ಯುತ್ ವ್ಯತ್ಯಯವಾಗಲಿದೆ.

ಭಗವಾನ್ ಬುದ್ಧ ಜಯಂತಿ

ಶಿವಮೊಗ್ಗ: ಜಿಲ್ಲಾಡಳಿತವು ಕನ್ನಡ ಮತ್ತು ಸಂಸ್ಕತ್ರೃತಿ ಇಲಾಖೆ ಸಹಯೋಗದಲ್ಲಿಮೇ 1ರಂದು ಬೆಳಗ್ಗೆ 11ಗಂಟೆಗೆ ಕುವೆಂಪು ರಂಗಮಂದಿರದಲ್ಲಿಭಗವಾನ್ ಶ್ರೀ ಬುದ್ಧ ಜಯಂತಿ ಹಮ್ಮಿಕೊಂಡಿದೆ. ಶಾಸಕ ಎಸ್ .ಎನ್ .ಚನ್ನಬಸಪ್ಪ ಅಧ್ಯಕ್ಷತೆ ವಹಿಸುವರು. ಸಾಗರದ ಸಿರಿವಂತೆ ‘ಚಿತ್ರಸಿರಿ’, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್ .ಚಂದ್ರಶೇಖರ್ ಅವರಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ.

ಸರಕಾರಿ ಬಾಲಿಕಾ ಪಿಯು ಕಾಲೇಜಿಗೆ ಉತ್ತಮ ಫಲಿತಾಂಶ

ಶಿವಮೊಗ್ಗ: ನಗರದ ಬಿ.ಎಚ್ .ರಸ್ತೆ ಸರಕಾರಿ ಬಾಲಿಕಾ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿಉತ್ತಮ ಫಲಿತಾಂಶ ಪಡೆದುಕೊಂಡಿದೆ. ವಿಜ್ಞಾನ ವಿಭಾಗದಲ್ಲಿಶೇ.91, ವಾಣಿಜ್ಯ ವಿಭಾಗದಲ್ಲಿಶೇ.85 ಮತ್ತು ಕಲಾ ವಿಭಾಗದಲ್ಲಿಶೇ.76 ಫಲಿತಾಂಶ ಪಡೆದುಕೊಂಡಿದೆ. 227 ವಿದ್ಯಾರ್ಥಿನಿಯರಲ್ಲಿ18 ವಿದ್ಯಾರ್ಥಿನಿಯರು ಅತ್ಯುನ್ನತ ಶ್ರೇಣಿ, 142 ವಿದ್ಯಾರ್ಥಿನಿಯರು ಪ್ರಥಮ ದರ್ಜೆ, 50 ವಿದ್ಯಾರ್ಥಿನಿಯರು ದ್ವಿತೀಯ ದರ್ಜೆಯಲ್ಲಿಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿಎಂ.ಎನ್ .ಸಿಂಚನಾ(590), ವಾಣಿಜ್ಯ ವಿಭಾಗದಲ್ಲಿಸಿ.ಗಜಶ್ರೀ(573) ಮತ್ತು ಕಲಾ ವಿಭಾಗದಲ್ಲಿಆರ್ .ಯಶಸ್ವಿನಿ(527) ಅತಿಹೆಚ್ಚು ಅಂಕ ಗಳಿಸಿದ್ದಾರೆ.

ಮೇ 2ರಂದು ರತ್ನ ಪಕ್ಷಿ ನಾಟಕ

ಶಿವಮೊಗ್ಗ: ಸಹ್ಯಾದ್ರಿ ಕಲಾ ತಂಡ, ಕಡೆಕೊಪ್ಪಲ ಪ್ರತಿಷ್ಠಾನದ ಸಹಯೋಗದಲ್ಲಿಆಯೋಜಿಸಿದ್ದ 13ನೇ ವರ್ಷದ ‘ಅಜ್ಜಿಯ ಅಂಗಳ ಅಜ್ಜನ ಜಗಲಿ’ ಮಕ್ಕಳ ಬೇಸಿಗೆ ರಂಗ ಶಿಬಿರವು ಮೇ 2ರಂದು ಕುವೆಂಪು ರಂಗಮಂದಿರದಲ್ಲಿನಾಟಕಕಾರ ಕೋಟಗನಹಳ್ಳಿ ರಾಮಯ್ಯ ರಚನೆಯ ‘ರತ್ನಪಕ್ಷಿ’ ನಾಟಕ ಪ್ರದರ್ಶನದೊಂದಿಗೆ ಕೊನೆಗೊಳ್ಳಲಿದೆ. ಡಾ. ಜಿ.ಆರ್ .ಲವ ನಿರ್ದೇಶನದಲ್ಲಿಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಹೊಸ ವಿದ್ಯಾರ್ಥಿ ನಿಲಯದಲ್ಲಿಶಿಬಿರ ನಡೆಯುತ್ತಿದೆ. ರತ್ನ ಪಕ್ಷಿ ನಾಟಕವು ಆಧುನಿಕ ಕಾಲದ ಹೊಸ ರೂಢಿಗಳಿಗೆ ದುಡಿಮೆಯನ್ನು ಮುಖಾಮುಖಿಯಾಗಿಸಿ ಚಿಂತನೆಗೆ ಹಚ್ಚುತ್ತದೆ. ನಾಟಕವನ್ನು ಕುಣಿಗಲ್ ರಂಗ ಮತ್ತು ನೀನಾಸಂ ಪದವೀಧರರು ನಿರ್ದೇಶಿಸಿದ್ದಾರೆ. ವೆಂಕಟೇಶ್ ರೆಡ್ಡಿ ಸಂಗೀತ, ಕೃಷ್ಣ ಬಡಿಗೇರ ವಾದ್ಯ ಮತ್ತು ಹಾಡುಗಾರಿಕೆ, ಹರಿಗೆ ಗೋಪಾಲಸ್ವಾಮಿ ಬೆಳಕು ಇದೆ. ಟಿಕೆಟ್ ದರ 50 ರೂ.ಗಳಾಗಿದ್ದು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸಬೇಕೆಂದು ಶಿಬಿರದ ನಿರ್ದೇಶಕ ಡಾ. ಜಿ.ಆರ್ .ಲವ ಕೋರಿದ್ದಾರೆ.