ಬೆಂಗಳೂರು: ಬಿಜೆಪಿ ಮುಖಂಡ ಯೋಗೀಶ್ ಗೌಡ ಗೌಡರ್ ಕೊಲೆ ಪ್ರಕರಣದಲ್ಲಿಜನಪ್ರತಿನಿಧಿ ನ್ಯಾಯಾಲಯದಲ್ಲಿಶಿಕ್ಷೆಗೆ ಗುರಿಯಾಗಿರುವ ವಿನಯ್ ಕುಲಕರ್ಣಿ ಶಾಸಕತ್ವ ಈಗಾಗಲೇ ರದ್ದಾಗಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಸ್ಪಷ್ಟ ಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ಯಾರಾದರೂ ಶಾಸಕರು ಶಿಕ್ಷೆಗೆ ಒಳಪಟ್ಟರೆ ನಿಯಮಾವಳಿಯಂತೆ ಅವರ ಶಾಸಕ ಸ್ಥಾನ ತನ್ನಿಂತಾನೆ ರದ್ದಾಗುತ್ತದೆ. ಕೋರ್ಟ್ ನಲ್ಲಿತಡೆಯಾಜ್ಞೆ ದೊರೆತರೆ ಶಾಸಕತ್ವ ಮರುಸ್ಥಾಪನೆ ಆಗುತ್ತದೆ. ಈ ವಿಚಾರದಲ್ಲಿಸದನಕ್ಕೆ ಮಾಹಿತಿ ನೀಡುವುದರ ಹೊರತಾಗಿ ಸಭಾಧ್ಯಕ್ಷರಿಗೆ ಬೇರಾವುದೇ ಅಧಿಕಾರ ಇಲ್ಲ,’’ ಎಂದು ಹೇಳಿದರು. ವಿನಯ್ ಕುಲಕರ್ಣಿ ವಿಚಾರದಲ್ಲಿಕ್ರಮ ತೆಗೆದುಕೊಳ್ಳುವಲ್ಲಿವಿಳಂಬಧಿವಾಗುತ್ತಿದೆ ಎಂಬ ಆರೋಪವನ್ನು ಅವರು ಸ್ಪಷ್ಟವಾಗಿ ತಳ್ಳಿಹಾಕಿದರು. ‘‘ಈ ವಿಚಾರದಲ್ಲಿತಾರತಮ್ಯದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಯಾವುದೇ ಸದಸ್ಯರ ಸದಸ್ಯತ್ವ ರದ್ದು ಮಾಡುವ ಅಧಿಕಾರ ಸಭಾಧ್ಯಕ್ಷರಿಗೆ ಇರುವುದಿಲ್ಲ,’’ ಎಂದು ಸಮಜಾಯಿಷಿ ನೀಡಿದರು.

