ಬೈಕ್ ಗೆ ಗೂಡ್ಸ್ ವಾಧಿಹನ ಡಿಧಿಕ್ಕಿ: ಯುವಕ ಸಾವು
ವಿಕ ಸುದ್ದಿಲೋಕ ಗುಂಡ್ಲುಪೇಟೆ
ತಾಲೂಕಿನ ತೆರಕಣಾಂಬಿ ಗ್ರಾಮದ ಮೂಲಕ ಹಾದು ಹೋಗಿರುವ ರಾಜ್ಯ ಹೆದ್ದಾರಿ 81ರಲ್ಲಿಗೂಡ್ಸ್ ವಾಹನ ಹಾಗೂ ಬೈಕ್ ನಡುವೆ ಮಂಗಳವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿತೀವ್ರ ಗಾಯಗೊಂಡಿದ್ದ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಧಿರು.
ತಾಲೂಕಿನ ಬಲಚವಾಡಿ ಗ್ರಾಮದ ಗುರುಪ್ರಸಾದ್ (30) ಮೃತರು. ಮಂಗಳವಾರ ರಾತ್ರಿ ಗುಂಡ್ಲುಪೇಟೆ ಕಡೆಯಿಂದ ತೆರಕಣಾಂಬಿ ಮೂಲಕ ಸ್ವಗ್ರಾಮ ಬಲಚವಾಡಿಗೆ ತೆರಳುತ್ತಿದ್ದಾಗ ಚಾಮರಾಜನಗರ ಕಡೆಯಿಂದ ಬಂದ ಕೇರಳ ಮೂಲದ ಗೂಡ್ಸ್ ವಾಹನ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದರು.
ಗಾಯಾಳುವನ್ನು ಸಾರ್ವಜನಿಕರ ಸಹಕಾರದಲ್ಲಿಗುಂಡ್ಲುಪೇಟೆ ಆಸ್ಪತ್ರೆಗೆ ಕರೆದೋಯ್ದು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ.
ಎರಡು ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತೆರಕಣಾಂಬಿ ಠಾಣೆ ಪೊಲೀಸರು ತಿಳಿಸಿದ್ದಾರೆ.
---
ಸಿಎಚ್ ಎನ್ 29 ಗುರುಪ್ರಸಾದ್ ಜಿಪಿಟಿ4

