ಜನಗಣತಿ, ಪಿಯು ಪರೀಕ್ಷೆ-2 ಹೊರೆ | ಅಡಕತ್ತರಿಯಲ್ಲಿಉಪನ್ಯಾಸಕರು, ಪ್ರಾಂಶುಪಾಲರು

Contributed bydjtrupti@gmail.com|Vijaya Karnataka

ರಾಜ್ಯದ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಮತ್ತು ಪ್ರಾಂಶುಪಾಲರು ಜನಗಣತಿ, ದ್ವಿತೀಯ ಪಿಯುಸಿ ಪರೀಕ್ಷೆ-2 ಕರ್ತವ್ಯ, ದಾಖಲಾತಿ ಆಂದೋಲನ ಒತ್ತಡದಲ್ಲಿದ್ದಾರೆ. 2026-27ನೇ ಸಾಲಿನಲ್ಲಿ ಪ್ರಥಮ ಪಿಯುಸಿ ದಾಖಲಾತಿ ಶೇ.40-60 ಹೆಚ್ಚಳ ಗುರಿ ಇದೆ. ಜನಗಣತಿ ಕಾರ್ಯಕ್ಕೆ ನಿಯೋಜನೆಗೊಂಡಿರುವುದರಿಂದ ದಾಖಲಾತಿ ಪ್ರಕ್ರಿಯೆಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಕಾಯಂ ಪ್ರಾಂಶುಪಾಲರ ಕೊರತೆಯೂ ಕಾಡುತ್ತಿದೆ.

students lecturers and principals in turmoil duties for the 2026 27 academic year

ಶಾಂತಮೂರ್ತಿ ಬೆಂಗಳೂರು sha್ಞಠಿha.aಃಠಿಜಿಞಛಿsಟ್ಛಜ್ಞಿdಜಿa.್ಚಟಞ ಪ್ರಧಿಸಕ್ತ 2026-27ನೇ ಸಾಧಿಲಿನಲ್ಲಿರಾಜ್ಯದ ಸರಕಾರಿ, ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿಪ್ರಥಮ ಪಿಯುಸಿ ದಾಖಲಾತಿಗೆ ಹಿನ್ನಡೆಯಾಗುವ ಸ್ಥಿತಿ ನಿರ್ಮಾಣವಾಗಿದೆ. ಒಂದೆಡೆ ದಾಖಲಾತಿ ಆಂದೋಲನದ ಜವಾಬ್ದಾರಿ, ಮತ್ತೊಂದೆಡೆ ಜನಗಣತಿ ಹೊರೆ, ಇದೆಲ್ಲದರ ಮಧ್ಯೆ ದ್ವಿತೀಯ ಪಿಯುಸಿ ಪರೀಕ್ಷೆ-2ರ ಕರ್ತವ್ಯ. ಹೀಗೆ ಸಾಲು ಸಾಲು ಒತ್ತಡದ ನಡುವೆ ಪದವಿಪೂರ್ವ ಕಾಲೇಜುಗಳ ಉಪನ್ಯಾಸ ಕರು ದಾರಿ ಕಾಣದೇ ಕಂಗಾಲಾಗಿದ್ದಾರೆ. ಎಸ್ಸೆಸ್ಸೆಲ್ಸಿ ಫಲಿತಾಂಶ ಈಗಾಗಲೇ ಹೊರಬಿದ್ದಿದ್ದು, ಖಾಸಗಿ ಕಾಲೇಜುಗಳಲ್ಲಿಪ್ರಥಮ ಪಿಯುಸಿ ದಾಖಲಾತಿ ಪ್ರಕ್ರಿಯೆ ಶುರುವಾಗಿದೆ. ಆದರೆ, ಬೆಂಗಳೂರು ಸೇರಿದಂತೆ ಎಲ್ಲೆಡೆ 2027ರ ಜನಗಣತಿ ಕಾರ್ಯ ನಡೆಯುತ್ತಿದ್ದು, ಇಧಿದಕ್ಕೆ

ಸರಕಾರಿ, ಅನುದಾನಿತ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು , ಪ್ರಾಂಶು ಪಾಲರು, ಪ್ರಭಾರ ಪ್ರಾಂಶುಪಾಲರನ್ನು ನಿಯೋಜನೆ ಮಾಡಿದ್ದರಿಂದ ಪ್ರಥಮ ಪಿಯುಸಿ ದಾಖಲಾತಿ ಪ್ರಕ್ರಿಯೆಗೆ ಹಿನ್ನೆಡೆಯಾಗುವ ಸಾಧ್ಯತೆ ಹೆಚ್ಚಾಗಿದೆ. 2026-27ನೇ ಸಾಲಿನಲ್ಲಿಶೇ.40ರಿಂದ 60ರಷ್ಟು ದಾಖಲಾತಿ ಹೆಚ್ಚಳ ಮಾಡುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ. ಇದಕ್ಕಾಗಿ ದಾಖಲಾತಿ ಆಂದೋಲನ ನಡೆಸಲು ಕೂಡ ನಿರ್ದೇಶನವಿದೆ. ಇದರ ಮಧ್ಯೆ ಗಣತಿ ಕಾರ್ಯಕ್ಕೆ ಗೈರಾದರೆ ಕ್ರಮ ಕೈಗೊಳ್ಳುವುಧಿದಾಗಿ ಜಿಬಿಎ ಅಧಿಕಾರಿಗಳು ಎಚ್ಚರಿಕೆ ನೀಡಿರುವುದರಿಂದ ಪದವಿಪೂರ್ವ ಕಾಲೇಜು ಗಳ ಉಪನ್ಯಾಸಕರು, ಪ್ರಾಂಶು ಪಾಲರು ಅಡಕತ್ತರಿಯಲ್ಲಿಸಿಕ್ಕಂತಾಗಿದೆ. ‘‘ಕಾಲೇಜುಗಳಲ್ಲಿದಾಖಲಾತಿ ಕಾರ್ಯ ನಡೆಸುವ ಹೊಣೆ ಇರುವುದರಿಂದ ಪ್ರಾಂಶು ಪಾಲರು, ಪ್ರಭಾರ ಪ್ರಾಂಶುಪಾಲರಿಗೆ ಜನಗಣತಿ ಕಾರ್ಯದಿಂದ ವಿನಾಯಿತಿ ನೀಡಬೇಕು,’’ ಎಂದು ಕರ್ನಾಟಕ

ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಜಿಬಿಎ ಮುಖ್ಯ ಆಯುಕ್ತರಿಗೆ ಮನವಿ ಸಲ್ಲಿಸಿತ್ತು. ಜತೆಗೆ, ಆರೋಗ್ಯ ಸಮಸ್ಯೆಗಳಿಂದ ಬಳಲುವವರು, ವಿಶೇಷಚೇತನರಿಗೆ ಗಣತಿಯಿಂದ ವಿನಾಯಿತಿ ಕೋರಲಾಗಿತ್ತು. ಆದರೆ, ಯಾವುದೇ ವಿನಾಯಿತಿ ನೀಡದಿರುವುದು ಮತ್ತಷ್ಟು ಸಂಕಷ್ಟ ತಂದಿಟ್ಟಿದೆ. ದಾಖಲಾತಿಗೆ ಹೊಡೆತ ಕಳೆದ ಶೈಕ್ಷಣಿಕ ವರ್ಷದಲ್ಲಿಒಟ್ಟಾರೆ 2,31,000 ವಿದ್ಯಾರ್ಥಿಗಳು ಪ್ರಥಮ ಪಿಯುಸಿಗೆ ಪ್ರವೇಶ ಪಡೆದಿದ್ದರು. ಈ ಪೈಕಿ ಸರಕಾರಿ ಹಾಗೂ ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿಕೇವಲ 1,15,000 ವಿದ್ಯಾರ್ಥಿಗಳು ದಾಖಲಾಗಿದ್ದರು. ಶೇ.20 ರಷ್ಟಿದ್ದ ದಾಖಲಾತಿಯನ್ನು ಈ ಬಾರಿ ಶೇ.40 ರಿಂದ 60ರಷ್ಟು ಹೆಚ್ಚಿಸಲು ಶಿಕ್ಷಣ ಇಲಾಖೆ ಸೂಚಿಸಿತ್ತು. ಆದರೆ, ಜನಗಣತಿ ಕಾರ್ಯದಿಂದ ದಾಖಲಾತಿ ಆಂದೋಲನ ಮಂದಗತಿಯಲ್ಲಿಸಾಗುವ ನಿರೀಕ್ಷೆಯಿದೆ. ಗಣತಿ ಕಾರ್ಯ ಮುಗಿಸಿ ಪ್ರಾಂಶುಪಾಲರು, ಪ್ರಭಾರ ಪ್ರಾಂಶುಪಾಲರು ಕಾಲೇಜುಗಳಲ್ಲಿದಾಖಲಾತಿ ಆರಂಭಿಸುವುದರೊಳಗೆ ಖಾಸಗಿ ಕಾಲೇಜುಗಳಿಗೆ ವಿದ್ಯಾರ್ಥಿಗಳು ಪ್ರಧಿವೇಶ ಪಧಿಡೆಧಿಯುವ ಸಾಧ್ಯತೆಯಿದೆ. ಈ ಮಧ್ಯೆ ಕಾಯಂ ಪ್ರಾಂಶುಪಾಲರ ಕೊರತೆ ಕೂಡ ಕಾಧಿಡುಧಿತ್ತಿದೆ. ರಾಜ್ಯದಲ್ಲಿಒಟ್ಟು 1,319 ಸರಕಾರಿ ಪದವಿಪೂರ್ವ ಕಾಲೇಜುಗಳಿವೆ. ಈ ಪೈಕಿ

555 ಕಾಲೇಜುಗಳಲ್ಲಿಕಾಯಂ ಪ್ರಾಂಶುಪಾಲರನ್ನೇ ನೇಮಕ ಮಾಡಿಲ್ಲ. ಇರುವ ಪ್ರಾಂಶುಪಾಲರನ್ನೂ ಜನಗಣತಿ ಕಾರ್ಯಕ್ಕೆ ಬಳಸಿಕೊಳ್ಳಧಿಲಾಧಿಗುಧಿತ್ತಿದೆ.