ಜಯಲಕ್ಷ್ಮಿ ವಿಲಾಸ ಅರಮನೆ ಒಧಿಡಂಬಧಿಡಿಧಿಕೆ ಸಿಂಡಿಕೇಟ್ ಸದಸ್ಯರ ಆರೋಪ ನಿಧಿರಾಧಿಧಾಧಿರ

Contributed bynagaraj.navimane@timesgroup.com|Vijaya Karnataka

ಮೈಸೂರು ವಿವಿ ಜಯಲಕ್ಷ್ಮಿ ವಿಲಾಸ ಅರಮನೆ ಒಡಂಬಡಿಕೆ ಕುರಿತು ಸಿಂಡಿಕೇಟ್ ಸದಸ್ಯರು ಸ್ಪಷ್ಟನೆ ನೀಡಿದ್ದಾರೆ. ಮಾ. 13 ಮತ್ತು 27ರ ಸಭೆಗಳಲ್ಲಿ ಈ ವಿಚಾರ ಚರ್ಚೆಯಾಗಿದ್ದು, ಕರಡು ಪ್ರತಿ ಸಿದ್ಧವಾಗುತ್ತಿದೆ ಎಂದು ತಿಳಿಸಿದರು. ಸಭೆಯಲ್ಲಿ ಹಾಜರಿಲ್ಲದ ಸದಸ್ಯರೊಬ್ಬರು ಸುಳ್ಳು ಆರೋಪ ಮಾಡಿರುವುದು ಖಂಡನೀಯ ಎಂದು ಏಳು ಮಂದಿ ಸದಸ್ಯರು ತಿಳಿಸಿದ್ದಾರೆ. ವಿವಿಯ ಆಸ್ತಿ ರಕ್ಷಣೆ ಮುಖ್ಯ ಎಂದು ಅವರು ಹೇಳಿದ್ದಾರೆ.

accusations of syndicate members on jayalakshmi vilas palace

ಜಯಲಕ್ಷ್ಮಿ ವಿಲಾಸ ಅರಮನೆ ಒಧಿಡಂಬಧಿಡಿಧಿಕೆ

ಸಿಂಡಿಕೇಟ್ ಸದಸ್ಯರ ಆರೋಪ ನಿಧಿರಾಧಿಧಾಧಿರ

- ಮೈವಿವಿ ಏಳು ಸಿಂಡಿಕೇಟ್ ಸದಸ್ಯರಿಂದ ಪತ್ರಿಕಾ ಹೇಳಿಕೆ ಬಿಡುಗಡೆ

ವಿಕ ಸುದ್ದಿಲೋಕ ಮೈಸೂರು

ಮೈಸೂರಿನ ಜಯಲಕ್ಷ್ಮಿ ವಿಲಾಸ ಅರಮನೆ ಬಗ್ಗೆ ಚರ್ಚೆಯಾಗುತ್ತಿದ್ದ ಸಮಯದಲ್ಲಿಸಭೆಯಲ್ಲಿಹಾಜರಿಲ್ಲದ ಸಿಂಡಿಕೇಟ್ ಸದಸ್ಯರೊಬ್ಬರು ಸಲ್ಲದ ಆರೋಪ ಮಾಡಿ ಸಮಾಜವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿರುವುದು ಖಂಡನೀಯ ಎಂದು ಮೈಸೂರು ವಿಶ್ವವಿದ್ಯಾಲಯದ ಏಳು ಸಿಂಡಿಕೇಟ್ ಸದಸ್ಯರು ದೂರಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸದಸ್ಯರು, ‘‘ಜಯಲಕ್ಷ್ಮಿ ವಿಲಾಸ ಅರಮನೆಯ ಬಗ್ಗೆ ಮಾ. 13ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿಯಾವ ವಿಚಾರವೂ ಮಂಡನೆಗೆ ಬಂದಿಲ್ಲ. ಅನೌಪಚಾರಿಕವಾಗಿ ಮಾತನಾಡುವಾಗ ಕುಲಪತಿಗಳು ಜಯಲಕ್ಷ್ಮಿ ವಿಲಾಸ ಅರಮನೆಯನ್ನು ಒಂದು ಖಾಸಗಿ ಸಂಸ್ಥೆಯವರು ಅದರ ನಿರ್ವಹಣೆಗೆ ಸಂಬಂಧಿಸಿದಂತೆ ಒಡಂಬಡಿಕೆ ಮಾಡಿಕೊಳ್ಳಲು ನನ್ನನ್ನು ಸಂಪರ್ಕಿಸಿದ್ದಾರೆ. ಕಾನೂನು ಸಲಹೆ ಹಾಗೂ ಇತರೆ ವಿಚಾರಗಳನ್ನು ಚರ್ಚಿಸಿ ಮುಂದೆ ವಿಷಯ ಮಂಡಿಸುವೆ ಎಂದಿದ್ದರು. ಸದಸ್ಯರಾದ ನಾವೆಲ್ಲರೂ ಒಕ್ಕೊರಲಿಂದ ಮೈಸೂರು ವಿವಿಯ ಆಸ್ತಿ ರಕ್ಷಣೆ ಹಾಗೂ ಸಂರಕ್ಷಣೆಯ ಹಿತಾಸಕ್ತಿ ಇದ್ದರೆ ಮಾತ್ರ ಒಡಂಬಡಿಕೆ ಬಗ್ಗೆ ಚರ್ಚಿಸೋಣ ಹಾಗೂ ಒಡಂಬಡಿಕೆ ಮಾಡಿಕೊಳ್ಳುವ ಬಗ್ಗೆ ಮುಂದುವರಿಯೋಣ ಎಂದಿದ್ದೆವು. ಆ ಬಳಿಕ ಸಭೆ ಮುಕ್ತಾಯವಾಯಿತು,’’ ಎಂದು ತಿಳಿಸಿದ್ದಾರೆ.

‘‘ಮಾ. 27ರಂದು ನಡೆದ ಸಿಂಡಿಕೇಟ್ ಸಭೆಯ ಕೊನೆಯಲ್ಲಿಅನೌಪಚಾರಿಕವಾಗಿ ಮಾತನಾಡುವಾಗ ಸಿಂಡಿಕೇಟ್ ಸದಸ್ಯರಾದ ನಾವೆಲ್ಲರೂ ಜಯಲಕ್ಷ್ಮಿ ವಿಲಾಸ ಅರಮನೆಯ ಒಡಂಬಡಿಕೆ ವಿಚಾರ ಯಾವ ಹಂತದಲ್ಲಿದೆ ಎಂದು ಕುಲಪತಿಗಳನ್ನು ಕೇಳಿದೆವು. ಒಡಂಬಡಿಕೆ ಕರಡು ಪ್ರತಿ ಸಿದ್ಧವಾಗುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿಕುಲಸಚಿವರು ಮಾತನಾಡಿ, ಧಿ‘ಧಿ‘ಯಾವುದೇ ಒಡಂಬಡಿಕೆಯನ್ನು ಮಾಡಿಕೊಳ್ಳುವ ಸಂದರ್ಭದಲ್ಲಿವಿವಿಯ ಕಾಯಿದೆ ಹಾಗೂ ಸರಕಾರದ ನಿಯಮಾವಳಿಗಳನ್ನು ಗಮನದಲ್ಲಿರಿಸಿಕೊಂಡು ಒಪ್ಪಂದ ಮಾಡಿಕೊಳ್ಳುವುದು ಸೂಕ್ತ’ಧಿ’ ಎಂದು ತಿಳಿಸಿದರು. ಈ ವಿಚಾರಕ್ಕೆ ಸಭೆಯಲ್ಲಿದ್ದ 7 ಸಿಂಡಿಕೇಟ್ ಸದಸ್ಯರು ಸಹಮತ ವ್ಯಕ್ತಪಡಿಸಿದೆವು. ಕುಲಪತಿಗಳು ಒಡಂಬಡಿಕೆಯ ಬಗ್ಗೆ ಮುಂದಿನ ಸಿಂಡಿಕೇಟ್ ಸಭೆಯಲ್ಲಿಚರ್ಚಿಸೋಣ ಎಂದು ವಿಷಯವನ್ನು ಮುಕ್ತಾಯಗೊಳಿಸಿದರು,’’ ಎಂದು ಹೇಳಿದ್ದಾರೆ.

‘‘ಆದರೆ, ಈ ವಿಚಾರವಾಗಿ ಮಾಧ್ಯಮದಲ್ಲಿಸತ್ಯವಲ್ಲದ ವಿಚಾರಗಳನ್ನು ನೋಡಿದಾಗ ನಮಗೆ ಆಶ್ಚರ್ಯ ಉಂಟಾಯಿತು. ಈ ಪ್ರಮುಖವಾದ ವಿಷಯವು ಸಭೆಯಲ್ಲಿಚರ್ಚೆಯಾಗುತ್ತಿದ್ದ ಸಮಯದಲ್ಲಿಸಭೆಯಲ್ಲಿಹಾಜರಿಲ್ಲದ ಸಿಂಡಿಕೇಟ್ ಸದಸ್ಯರೊಬ್ಬರು ಮಾಧ್ಯಮಗಳಲ್ಲಿಸಲ್ಲದ ಆರೋಪ ಮಾಡಿ ಸಮಾಜವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿರುವುದು ಖಂಡನೀಯ,’’ ಎಂದಿದ್ದಾರೆ.

(ಫೋಟೋ ಇಲ್ಲ)