ವಿಜಯಪುರ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಅವರು ಆ.15ರಂದು ಜಿಲ್ಲೆಯಲ್ಲಿಪ್ರವಾಸ ಕೈಗೊಳ್ಳಲಿದ್ದಾರೆ.ಅಂದು ಬೆಳಗ್ಗೆ 9ಕ್ಕೆ ನಗರದ ಡಾ.ಬಿ.ಆರ್ .ಅಂಬೇಡ್ಕರ್ ಕ್ರೀಡಾಂಗಣದಲ್ಲಿಜಿಲ್ಲಾಡಳಿತ ಆಯೋಜಿಸಿರುವ 80ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿಭಾಗವಹಿಸುವರು.
11ಕ್ಕೆ ಮಹಾನಗರ ಪಾಲಿಕೆ ವ್ಯಾಪ್ತಿಯ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ-2ರಡಿ ಅರ್ಕಾಟ್ ದರ್ಗಾ, ಖಾದಿ ಗ್ರಾಮೊದ್ಯೋಗ ವೃತ್ತ ಹಾಗೂ ತಾಜೋದ್ದೀನ್ ಹೋಟೆಲ್ , ಬಸ್ ನಿಲ್ದಾಣದ ಬಳಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವರು.
ಮಧ್ಯಾಹ್ನ 1ಕ್ಕೆ ಯತ್ನಾಳದಲ್ಲಿಯತ್ನಾಳ-ಜಾಲಗೇರಿ ರಸ್ತೆ ಸುಧಾರಣೆ ಕಾಮಗಾರಿ, 1.30ಕ್ಕೆ ಡೋಕಳೇವಾಡಿಯಲ್ಲಿಸೇತುವೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವರು. ಸಂಜೆ 4ಕ್ಕೆ ಕಾತ್ರಾಳದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಸ್ಥೆಯನ್ನು ಉದ್ಘಾಟಿಸುವರು. 6ಕ್ಕೆ ಶಿರಬೂರ ಗ್ರಾಮದಲ್ಲಿವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಸ್ಥೆ ಉದ್ಘಾಟಿಸಿ, ರಾತ್ರಿ ವಿಜಯಪುರದಲ್ಲಿವಾಸ್ತವ್ಯ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.