ವಿಕ ಸುದ್ದಿಲೋಕ ಕುಮಟಾನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಹಸಿರು ಕಂಗೊಳಿಸಲು ಪ್ರತಿಯೊಬ್ಬರೂ ಗಿಡ ನೆಟ್ಟು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅಮಿತ ಎ. ಶಾನಭಾಗ ಕರೆ ನೀಡಿದರು.
ಪಟ್ಟಣದ ಹೆರವಟ್ಟಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಅರಣ್ಯ ಇಲಾಖೆ ಸಹಯೋಗದಲ್ಲಿವಿದ್ಯಾರ್ಥಿಗಳಿಗೆ ಹಣ್ಣಿನ ಸಸಿಗಳನ್ನು ವಿತರಿಸಿ ಅವರು ಮಾತನಾಡಿದರು.
‘‘ಪ್ರತಿಯೊಬ್ಬರೂ ತಮ್ಮ ಪರಿಸರದಲ್ಲಿವರ್ಷಕ್ಕೆ 4-5 ಗಿಡಗಳನ್ನು ನೆಟ್ಟು ಪೋಷಿಸುವ ಜವಾಬ್ದಾರಿಯನ್ನು ನಿಭಾಯಿಸಿದರೆ ಪರಿಸರ ಸಂರಕ್ಷಣೆ ಸುಲಭ ಸಾಧ್ಯ. ಭವಿಷ್ಯಕ್ಕಾಗಿ ಒಂದಿಷ್ಟು ಹಣ ಕೂಡಿಡುವಂತೆ ಹಸಿರು ಸಹ ಸಂರಕ್ಷಿಸಿಟ್ಟು ಮುಂದಿನ ಪೀಳಿಗೆಗೆ ಸ್ವಸ್ಥ, ಸುಂದರ ಪರಿಸರವನ್ನು ಉಡುಗೊರೆಯಾಗಿ ನೀಡಬೇಕು’’ ಎಂದರು.
ಸಾಮಾಜಿಕ ಕಾರ್ಯಕರ್ತ ರಾಮಚಂದ್ರ ಜಿ.ಭಟ್ಟ ಮಾತನಾಡಿ, ‘‘ಪರಿಸರ ಮಾಲಿನ್ಯದಿಂದ ಭೂಮಿಯ ಮೇಲೆ ಜೀವ ಸಂಕುಲಗಳ ಬದುಕು ಅಪಾಯಕ್ಕೆ ಸಿಲುಕಿದೆ. ವಾತಾವರಣದಲ್ಲಿಇಂಗಾಲ ಹೆಚ್ಚಾಗಿ ಭೂಮಿಯ ಸುರಕ್ಷಾ ಕವಚ ಓಝೋನ್ ಪದರ ಛಿದ್ರವಾಗುತ್ತಿದೆ. ವಿದ್ಯಾರ್ಥಿ ದಿಸೆಯಲ್ಲೇ ಮಕ್ಕಳು ಪರಿಸರ ಸಂರಕ್ಷಣೆ ಕಾಳಜಿ ಬೆಳೆಸಿಕೊಂಡು ಸಾಮಾಜಿಕ ಹೊಣೆಗಾರಿಕೆ ನಿಭಾಯಿಸಬೇಕು’’ ಎಂದರು.
ಶಾಲೆಯ ಮುಖ್ಯ ಶಿಕ್ಷಕ ಎಲ್ .ಜಿ ಬಾಡ್ಕರ್ ಅಧ್ಯಕ್ಷತೆ ವಹಿಸಿದ್ದರು. ಎಸ್ ಡಿಎಮ್ ಸಿ ಅಧ್ಯಕ್ಷೆ ಪ್ರೀತಿ ಬೋರ್ ಗಾಂವ್ಕರ್ ಮತ್ತು ಶಿಕ್ಷಕರು ಇದ್ದರು.
20 ಕೆಎಂಟಿ 2
ಹೆರವಟ್ಟಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಸಾಮಾಜಿಕ ಕಾರ್ಯಕರ್ತರು ವಿದ್ಯಾರ್ಥಿಗಳಿಗೆ ಹಣ್ಣಿನ ಸಸಿಗಳನ್ನು ವಿತರಿಸಿದರು.