ವಿಕ ಸುದ್ದಿಲೋಕ ಹನುಮಸಾಗರ‘‘ಸಾಧನೆಗೆ ಬಡತನ ಅಡ್ಡಿಯಲ್ಲಎನ್ನುವದನ್ನು ವಿದ್ಯಾರ್ಥಿನಿ ತೋರಿಸಿಕೊಟ್ಟಿದ್ದಾಳೆ,’’ ಎಂದು ಮುಖ್ಯಶಿಕ್ಷಕಿ ಭಾರತಿ ದೇಸಾಯಿ ಹೇಳಿದರು.
ಎಂಬಿಬಿಎಸ್ ಗೆ ಆಯ್ಕೆಯಾದ ಕಸ್ತೂರಬಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿನಿ ಸುಮಿತ್ರಾ ಜಾಲಿ ಅವರನ್ನು ಸನ್ಮಾನಿಸಿ ಮಾತನಾಡಿದರು. ಶಾಲೆಯಲ್ಲಿಅನಾಥರು, ಶಾಲೆ ಬಿಟ್ಟ ಮಕ್ಕಳು, ಒಂಟಿ ಪಾಲಕರು, ಕಡು ಬಡತನ ಹಾಗೂ ಆರ್ಥಿಕ ಪರಿಸ್ಥಿತಿಯಿಂದ ಹಿಂದುಳಿದ ಬಾಲಕಿಯರು ವ್ಯಾಸಂಗ ಮಾಡುತ್ತಾರೆ. ವಿದ್ಯಾರ್ಥಿನಿ ಸಾಧನೆಯಿಂದ ಶಾಲೆಗೆ ಕೀರ್ತಿ ಬಂದಿದೆ ಎಂದರು.