ಕಾರವಾರ ಡಿಸಿ ಸಭೆ

Contributed bypramod.harikant@timesofindia.com|Vijaya Karnataka
district commissioner meeting held in karwar on 22 09 2023 discussion on road safety
ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿರಸ್ತೆ ಸುರಕ್ಷತಾ ಸಮಿತಿ ಸಭೆ

ಸುರಕ್ಷಿತ ಸಂಚಾರಕ್ಕೆ ಸೌಲಭ್ಯ ಒದಗಿಸಿ
ಕ್ವೋಟ್

ಕುಮಟಾದಲ್ಲಿಅಗತ್ಯವಿರುವ ಕಡೆಗಳಲ್ಲಿಡಿವೈಡರ್ ಮತ್ತು ಬೀದಿ ದೀಪಗಳನ್ನು ಅಳವಡಿಸಬೇಕು. ನಗರದಲ್ಲಿಭಾರಿ ವಾಹನಗಳು ಮತ್ತು ಇತರ ವಾಹನಗಳ ಓವರ್ ಟೇಕ್ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ಶಿರಸಿ-ಕುಮಟಾ ರಸ್ತೆ ಕಾಮಗಾರಿಯನ್ನು ಶೀಘ್ರದಲ್ಲಿಮುಕ್ತಾಯಗೊಳಿಸಬೇಕು.

-ಕೆ.ಲಕ್ಷಿತ್ರ್ಮೕಪ್ರಿಯಾ, ಜಿಲ್ಲಾಧಿಕಾರಿ

ವಿಕ ಸುದ್ದಿಲೋಕ ಕಾರವಾರ

ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿಸಾರ್ವಜನಿಕರು ಮತ್ತು ವಾಹನಗಳ ಅಪಘಾತ ರಹಿತ ಸುರಕ್ಷಿತ ಸಂಚಾರಕ್ಕೆ ಅಗತ್ಯವಿರುವ ಹಾಗೂ ಪೊಲೀಸ್ ಇಲಾಖೆಯಿಂದ ಸೂಚಿಸುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಲಕ್ಷಿತ್ರ್ಮೕಪ್ರಿಯಾ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಗುರುವಾರ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘‘ ಕಾಳಿ ಸೇತುವೆ ಮೇಲೆ ದ್ವಿಚಕ್ರ ವಾಹನಗಳು ಸಂಚರಿಸುವಾಗ ಬಲವಾದ ಗಾಳಿಯಿಂದ ವಾಹನ ಚಾಲನೆಗೆ ಅಡಚಣೆಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಈ ಬಗ್ಗೆ ಅಗತ್ಯವಿರುವ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ಮೇಲ್ಸೇತುವೆ ಕೆಳಗೆ ಅನಧಿಕೃತ ವಾಹನ ಪಾರ್ಕಿಂಗ್ , ಅಂಗಡಿಗಳು ಮತ್ತು ಜನವಸತಿ ಕಂಡುಬರುತ್ತಿವೆ. ಇದನ್ನು ತಪ್ಪಿಸಲು ಫೆನ್ಸಿಂಗ್ , ಗಾರ್ಡನಿಂಗ್ , ಸಾರ್ವಜನಿಕರಿಗೆ ವಾಕಿಂಗ್ ಪಾಥ್ ವ್ಯವಸ್ಥೆ ಕಲ್ಪಿಸಬೇಕು’’ ಎಂದು ತಿಳಿಸಿದರು.

‘‘ರಾಷ್ಟ್ರೀಯ ಹೆದ್ದಾರಿಯಲ್ಲಿಟ್ರಕ್ ಟರ್ಮಿನಲ್ ಮಾದರಿಯಲ್ಲಿವಾಹನಗಳ ನಿಲುಗಡೆಗೆ ಅನುಕೂಲವಾಗುವಂತೆ ಮುರುಡೇಶ್ವರ ಮತ್ತು ಅಂಕೋಲಾದಲ್ಲಿಜಾಗ ಗುರುತಿಸಿ ಈಗಾಗಲೇ ಹಸ್ತಾಂತರ ಮಾಡಲಾಗಿದೆ. ಈ ಪ್ರದೇಶದಲ್ಲಿವಾಹನ ಚಾಲಕರ ವಿಶ್ರಾಂತಿಗೆ ಮತ್ತು ವಾಹನ ನಿಲುಗಡೆಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು’’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ತಿಳಿಸಿದರು.

ಅಂಕೋಲಾ- ಯಲ್ಲಾಪುರ ರಸ್ತೆಯಲ್ಲಿಹೆಚ್ಚಿನ ಸಂಖ್ಯೆಯಲ್ಲಿಸೂಚನಾ ಫಲಕಗಳು, ಕ್ಯಾಟ್ ಐ ಗಳು, ಬ್ಲಿಂಕಿಂಗ್ ಲೈಟ್ ಗಳು, ವೇಗಮಿತಿ ಸೂಚನಾ ಫಲಕ, ಕ್ಯಾನ್ ವಾಕ್ಸ್ ಮಿರರ್ ಗಳನ್ನು ಅಳವಡಿಸಬೇಕು. ರಸ್ತೆಗೆ ಅಡ್ಡಲಾಗಿರುವ ಮರದ ಕೊಂಬೆಗಳನ್ನು ಅರಣ್ಯ ಮತು ಪೊಲೀಸ್ ಇಲಾಖೆ ಸಹಕಾರದೊಂದಿಗೆ ತೆರವುಗೊಳಿಸಬೇಕು. ಅರೆಬೈಲ್ ಘಾಟ್ ನಲ್ಲಿಅಳವಡಿಸಿರುವ ಅಪಘಾತ ತಡೆ ರಕ್ಷಣಾ ಕಂಬಗಳು ರಾತ್ರಿ ವೇಳೆ ಸ್ಪಷ್ಟವಾಗಿ ಗೋಚರವಾಗುವಂತೆ ಅವುಗಳಿಗೆ ರೇಡಿಯಂ ಅಳಡಿಸುವಂತೆ ತಿಳಿಸಿದರು.

ಪೊಲೀಸ್ ಇಲಾಖೆಯ ಸೂಚನೆಯಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿಅಗತ್ಯವಿರುವೆಡೆಗಳಲ್ಲಿಎ.ಎನ್ .ಪಿ.ಆರ್ ಕ್ಯಾಮರಾಗಳನ್ನು ಅಳವಡಿಸಬೇಕು. ಬ್ಲಾಕ್ ಸ್ಪಾಟ್ ಪ್ರದೇಶಗಳಲ್ಲಿಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ವೇಗಮಿತಿ ಸೂಚನಾ ಫಲಕಗಳು ಮತ್ತು ಬ್ಲಿಂಕರ್ಸ್ ಗಳನ್ನು ಅಳವಡಿಸಬೇಕು. ಹೆದ್ದಾರಿಗಳಲ್ಲಿಕಂಡುಬರುವ ಬೀಡಾಡಿ ದನಗಳ ಕುರಿತಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ . ಸೂಚಿಸಿದರು.

ಹೆಚ್ಚುವರಿ ಎಸ್ ಪಿ ಕೃಷ್ಣಮೂರ್ತಿ, ಜಿಲ್ಲಾಪಂಚಾಯಿತಿ ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ, ಜಿಲ್ಲೆಯ ಎಲ್ಲಾಉಪ ವಿಭಾಗಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಇದ್ದರು.

ಫೋಟೊ

21ಪ್ರಮೋದ1

ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿರಸ್ತೆ ಸುರಕ್ಷತಾ ಸಮಿತಿ ಸಭೆ ನಡೆಯಿತು.