ಪದವಿ ಶಿಕ್ಷಣ ಭವಿಷ್ಯದ ಅಡಿಗಲ್ಲು

Contributed bydevarajuvksira@gmail.com|Vijaya Karnataka
karnataka pedagogy cornerstone of future
ವಿಕ ಸುದ್ದಿಲೋಕ ಶಿರಾ

ಪದವಿ ಶಿಕ್ಷಣ ಭವಿಷ್ಯದ ಅಡಿಗಲ್ಲು . ಈ ಸಂದರ್ಭದಲ್ಲಿವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಅಧ್ಯಯನದಲ್ಲಿತೊಡಗಿದರೆ ಭವಿಷ್ಯದ ನಿರ್ದಿಷ್ಟ ಗುರಿಗಳನ್ನು ತಲುಪಲು ಸಾಧ್ಯ ಎಂದು ಬುಕ್ಕಾಪಟ್ಟಣ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಧರಣೇಂದ್ರ ಕುಮಾರಿ ಹೇಳಿದರು.
ಅವರು ಶಿರಾ ತಾಲೂಕು ಬುಕ್ಕಾಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಆಯೋಜಿಸಿದ್ದ ‘ಸ್ಪಂದನ 2026’ ಹಾಗೂ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ, ಹೊಸ ದಿಗಂತ ಕಾರ್ಯಕ್ರಮ ಉದ್ಘಾಟನೆ ಹಾಗೂ ಕಾಲೇಜಿನ ಕ್ರೀಡೆ, ಕಲೆ ಮತ್ತು ಸಾಂಸ್ಕೃತಿಕ ವಿವಿಧ ಸಮಿತಿಗಳ ಉದ್ಘಾಟನಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಮೂರು ವರ್ಷಗಳ ಕಾಲೇಜು ಪದವಿ ಶಿಕ್ಷಣವು ವಿದ್ಯಾರ್ಥಿಗಳ ಭವಿಷ್ಯದ ಜೀವನಕ್ಕೆ ಭದ್ರವಾದ ಅಡಿಗಲ್ಲುಆಗುತ್ತದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಾಗಾರ, ಸ್ಪೋಕನ್ ಇಂಗ್ಲಿಷ್ ತರಬೇತಿ ಹಾಗೂ ಕಂಪ್ಯೂಟರ್ ಶಿಕ್ಷಣವನ್ನು ನಿರಂತರವಾಗಿ ನಡೆಸಲಾಗುವುದು. ವಿದ್ಯಾರ್ಥಿಗಳು ಇವುಗಳ ಸದುಪಯೋಗ ಪಡೆದುಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.

ಪದವಿ ಶಿಕ್ಷಣ ಎಂಬುದು ಎಲ್ಲಾಹಂತದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒಂದು ಅಡಿಗಲ್ಲುಆಗಿರುತ್ತದೆ. ಈ ಸಂದರ್ಭದಲ್ಲಿವಿದ್ಯಾರ್ಥಿಗಳು ಹೆಚ್ಚಿನ ಶ್ರಮವಹಿಸಿ ಅಧ್ಯಯನದ ಕಡೆ ಗಮನವಿರಿಸಿ, ಗುರಿ ಉದ್ದೇಶಗಳ ಸಾಧನೆಗೆ ಮುಂದಾಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ಉನ್ನತ ಮಟ್ಟದ ಸಾಧನೆಯ ಬಗ್ಗೆ ಕನಸು ಕಾಣಬೇಕು ಹಾಗೂ ಆ ಕನಸು ನನಸು ಮಾಡಿಕೊಳ್ಳುವ ಧಾವಂತದಲ್ಲಿಕಠಿಣ ಪರಿಶ್ರಮ ಪಡಬೇಕು. ಕಲಾ ವಿಭಾಗ ಹಾಗೂ ವಾಣಿಜ್ಯ ವಿಭಾಗಗಳಲ್ಲಿಪದವಿ ಪಡೆದ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಮತ್ತು ರಾಜ್ಯಮಟ್ಟದ ಉನ್ನತ ಪರೀಕ್ಷೆಗಳಲ್ಲಿತೇರ್ಗಡೆಯಾಗಿ ದೇಶಕ್ಕೆ ಹಾಗೂ ನಾಡಿಗೆ ಸೇವೆ ಸಲ್ಲಿಸುವ ಅವಕಾಶ ಹೆಚ್ಚಿನದಾಗಿ ಇರುತ್ತದೆ. ಅಂತಹ ಸಾಧಕರ ಸಾಲಿಗೆ ನಿಮ್ಮಂತಹ ಗ್ರಾಮೀಣ ಪ್ರತಿಭೆಗಳು ಸೇರಬೇಕು. ಹಾಗಾಗಿ ಪ್ರತಿಯೊಬ್ಬರೂ ಕಠಿಣ ಪರಿಶ್ರಮವಹಿಸಿ ಅಧ್ಯಯನದ ಕಡೆ ಮುಂದಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಹಿರಿಯ ಪ್ರಾಧ್ಯಾಪಕ ಡಾ. ಹನುಮಂತರಾಯ ಎಸ್ .ಆರ್ . ಮಾತನಾಡಿ, ಕಾಲೇಜಿನ ಶೈಕ್ಷಣಿಕ ವಾತಾವರಣ ಮತ್ತು ಲಭ್ಯವಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಜತೆಗೆ, ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ‘ಹೊಸ ದಿಗಂತ’ ಎಂಬ ವಿನೂತನ ಕಾರ್ಯಕ್ರಮವು ಮುಂದಿನ ಆರು ದಿನಗಳ ಕಾಲ ನಿರಂತರವಾಗಿ ಜರುಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲ ಮಂಜುನಾಥ್ ಭಾಗವಹಿಸಿದ್ದರು. ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಪ್ರಥಮ ವರ್ಷದ ನೂತನ ವಿದ್ಯಾರ್ಥಿಗಳಿಗೆ ಕಿರುಕಾಣಿಕೆ ನೀಡಿ ಕಾಲೇಜಿಗೆ ಬರಮಾಡಿಕೊಂಡರು. ಸಹಾಯಕ ಪ್ರಾಧ್ಯಾಪಕರಾದ ಸತೀಶ್ ಎ.ಎಂ., ವಿಜಯ್ ಎನ್ ., ಮಹೇಶ್ ಎನ್ ., ಲೋಕೇಶ್ ಎನ್ ., ಶಾರ್ವರಿ, ಅಮೃತ, ಖಲೀದಾ ಖಾನಂ, ಡಾ. ಮಂಜುನಾಥ್ , ಅಧೀಕ್ಷಕ ಪುಟ್ಟಲಿಂಗಪ್ಪ ಹಾಗೂ ಉಪನ್ಯಾಸಕರಾದ ನಾಗರಾಜು, ಹರೀಶ್ , ಅನ್ನಪೂರ್ಣ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

21ಶಿರಾ2: ಬುಕ್ಕಾಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಆಯೋಜಿಸಿದ್ದ ‘ಸ್ಪಂದನ 2026’ ಹಾಗೂ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ, ಹೊಸ ದಿಗಂತ ಕಾರ್ಯಕ್ರಮದ ಉದ್ಘಾಟನೆ ಮತ್ತು ಕಾಲೇಜಿನ ಕ್ರೀಡೆ, ಕಲೆ ಹಾಗೂ ಸಾಂಸ್ಕೃತಿಕ ವಿವಿಧ ಸಮಿತಿಗಳ ಉದ್ಘಾಟನಾ ಕಾರ್ಯಕ್ರಮ ಜರುಗಿತು.