- ರಾಜ್ಯ ವಿರೋಧಿ ಠರಾವು ತಡೆಯುವಲ್ಲಿಪ್ರಮುಖ ಪಾತ್ರ‘ಗುಪ್ತ’ ಮಾಹಿತಿಗಳ ಚತುರ ರಾಜೇಂದ್ರ
ರವಿಭಾರತಿ ಗೋಸಾವಿ, ಬೆಳಗಾವಿ
್ಟavಜಿ.ಜಟsavಜಿಃಠಿಜಿಞಛಿsಟ್ಛಜ್ಞಿdಜಿa.್ಚಟಞ
ಪ್ರಮುಖ ಕಾರ ್ಯಕ್ರಮಗಳು ಸರಾಗವಾಗಿ ನಡೆಯುವಂತೆ ನೋಡಿಕೊಳ್ಳುವುದಷ್ಟೇ ಅಲ್ಲ; ಇಂಥ ಸಮಯದಲ್ಲಿನಡೆಯಬಾರದ ಕೃತ್ಯಗಳನ್ನು ತಡೆಯುವುದೂ ಪೊಲೀಸರ ಕರ್ತವ್ಯ. ಘಟನೆಗೂ ಮುನ್ನ ಅಪಾಯದ ಸುಳಿವು ಪತ್ತೆಹಚ್ಚಿ, ಮಾಹಿತಿ ಸತ್ಯಾಸತ್ಯತೆ ಖಚಿತಪಡಿಸಿಕೊಳ್ಳುವುದು ಕೂಡ ಮುಖ್ಯ. ಈ ಕರ್ತವ್ಯದಲ್ಲಿಪೊಲೀಸ್ ಗುಪ್ತಚರರ ಪಾತ್ರ ಹಿರಿದು.
ಬೆಳಗಾವಿಯಲ್ಲಿಎರಡು ದಶಕಗಳಿಗೂ ಹೆಚ್ಚು ಅವಧಿಯಿಂದ ನಿಖರವಾಗಿ ಗುಪ್ತಚರ ಕಾರ ್ಯ ನಿರ್ವಹಿಸುತ್ತಿರುವವರು ಹವಾಲ್ದಾರ್ ರಾಜೇಂದ್ರ ಉದಯ ಬಡೇಸಗೋಳ. ಸಮಾಜದಲ್ಲಿಖಾಕಿ ಸಮವಸ್ತ್ರದಲ್ಲಿಕಾಣದೇ, ಗುಪ್ತವಾಗಿ ತಮ್ಮ ಕೆಲಸದ ಫಲಿತಾಂಶ ತೋರಿಸುತ್ತ ಬಂದಿರುವ ರಾಜೇಂದ್ರ ಬಡೇಸಗೋಳ ಈ ಮೂಲಕ ತಮ್ಮ ಕಾರ್ಯಕ್ಷಮತೆ ಪ್ರದರ್ಶಿಸಿದ್ದಾರೆ.
ರಾಜ್ಯ ವಿರೋಧಿ ಠರಾವಿಗೆ ತಡೆ:
ಸೂಕ್ಷ್ಮ ರಾಜಕೀಯ ಬೆಳವಣಿಗೆಗಳ ಮೇಲೆ ಗುಪ್ತಚರ ವಿಭಾಗ ಹೇಗೆ ಕಣ್ಣಿಟ್ಟಿರುತ್ತದೆ ಎಂಬುದಕ್ಕೆ ಯಳ್ಳೂರು ಗ್ರಾಮ ಪಂಚಾಯಿತಿ ಪ್ರಕರಣ ಒಂದು ಉದಾಹರಣೆ. ರಾಜ್ಯ ವಿರೋಧಿ ಠರಾವು ಅಂಗೀಕರಿಸುವ ಸಿದ್ಧತೆ ನಡೆಯುತ್ತಿರುವ ಕುರಿತು ಮುಂಚಿತವಾಗಿ ಮಾಹಿತಿ ಸಂಗ್ರಹಿಸಿ ಮೇಲಧಿಕಾರಿಗಳಿಗೆ ತಲುಪಿಸುವಲ್ಲಿಬಡೇಸಗೋಳ ಅವರ ಪಾತ್ರವಿತ್ತು. ಈ ಮಾಹಿತಿ ಜಿಲ್ಲಾಡಳಿತದ ಗಮನಕ್ಕೆ ಬಂದ ಬಳಿಕ ಅಗತ್ಯ ಕ್ರಮ ಕೈಗೊಳ್ಳಲಾಯಿತು. ಪರಿಣಾಮ ಪ್ರಸ್ತಾವಿತ ಠರಾವು ತಡೆಯಲು ಸಾಧ್ಯವಾಯಿತು.
ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು, ‘‘ಕರ್ನಾಟಕ- ಮಹಾರಾಷ್ಟ್ರ ಗಡಿ ಸೂಕ್ಷ್ಮ ಬೆಳವಣಿಗೆಗಳು ನಡೆಯುತ್ತಿರುತ್ತವೆ. ಎಂಇಎಸ್ , ಶಿವಸೇನಾ ಚಟುವಟಿಕೆಗಳು, ಅಧಿವೇಶನ ಹಾಗೂ ಚುನಾವಣೆ ಸಂದರ್ಭದಲ್ಲಿನಿರಂತರ ನಿಗಾ ವಹಿಸಿಸಬೇಕು. ಸಭೆ, ಪ್ರತಿಭಟನೆ, ಸೂಕ್ಷ್ಮ ಪ್ರದೇಶಗಳ ಪರಿಸ್ಥಿತಿ ಹಾಗೂ ಕಾನೂನು ಸುವ್ಯವಸ್ಥೆಗೆ ಎದುರಾಗಬಹುದಾದ ಸವಾಲುಗಳ ಕುರಿತು ಮಾಹಿತಿ ಸಂಗ್ರಹಿಸಿ, ಮುಂದಿನ ಬೆಳವಣಿಗೆಗಳ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡುವ ಕೆಲಸ ಮಾಡಬೇಕು. ಈ ಮೂಲಕ ಸಮಾಜಘಾತುಕ ಶಕ್ತಿಗಳಿಗೆ ಕಡಿವಾಣ ಹಾಕುವಲ್ಲಿಬಡೇಸಗೋಳ ಸೇವೆ ಗಮನಾರ್ಹ. ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿಅಗ್ನಿವೀರ ಯೋಜನೆಗೆ ಸಂಬಂಧಿಸಿದ ಪ್ರತಿಭಟನೆ ನಡೆಯುವ ಸಾಧ್ಯತೆಯ ಕುರಿತು ಬೆಳಗಾವಿ ಗುಪ್ತಚರ ವಿಭಾಗದಿಂದ ಮುನ್ನೆಚ್ಚರಿಕೆ ನೀಡಲಾಗಿತ್ತು. ಈ ಮಾಹಿತಿ ಭದ್ರತಾ ವ್ಯವಸ್ಥೆಗೆ ನೆರವಾಯಿತು,’’ ಎಂದರು.
ಎಡವಿದ್ದೇ ಇಲ್ಲ:
ಕರ್ನಾಟಕ ವಿಶ್ವವಿದ್ಯಾಲಯದಿಂದ ಕ್ರಿಮಿನಾಲಜಿ ಪದವಿ ಪಡೆದಿರುವ ರಾಜೇಂದ್ರ ಬಡೇಸಗೋಳ, ಪೊಲೀಸ್ ತರಬೇತಿ ಅವಧಿಯಲ್ಲಿಯೇ ಟಾಪ್ 10 ಸಿಬ್ಬಂದಿಯಲ್ಲಿಒಬ್ಬರಾಗಿ ಗುರುತಿಸಿಕೊಂಡಿದ್ದರು. ಚುನಾವಣೆ ಸಂದರ್ಭದಲ್ಲಿರಾಜಕೀಯ ಪಕ್ಷಗಳ ಚಟುವಟಿಕೆ ಹಾಗೂ ಫಲಿತಾಂಶದ ನಿರೀಕ್ಷೆ ಮತ್ತು ತೆರೆಮರೆಯಲ್ಲಿನ ಕಸರತ್ತುಗಳ ಲೆಕ್ಕಾಚಾರದ ಮೇಲೆ ನಿಗಾ ಇಡಲಾಗುತ್ತದೆ. ಇಂಥ ಸಂದರ್ಭದಲ್ಲಿಗುಪ್ತಚರ ವಿಭಾಗದ ಜವಾಬ್ದಾರಿ ಹೆಚ್ಚಿರುತ್ತದೆ. ಈ ಕೆಲಸಗಳಲ್ಲಿಬಡೇಸಗೋಳ ಎಡವಿದ್ದೇ ಇಲ್ಲಎನ್ನುತ್ತಾರೆ ಹಿರಿಯ ಅಧಿಕಾರಿಗಳು.
* ಬಾಕ್ಸ್
ಮಾಹಿತಿ ಸಂಗ್ರಹದಲ್ಲಿನಿಪುಣ
2002ರಲ್ಲಿಬೆಳಗಾವಿ ಜಿಲ್ಲೆಯಲ್ಲಿಸಿವಿಲ್ ಪೊಲೀಸ್ ಕಾನ್ ಸ್ಟೆಬಲ್ ಆಗಿ ಸೇವೆ ಆರಂಭಿಸಿದ ಬಡೇಸಗೋಳ ಅವರು, ಪೊಲೀಸ್ ಇಲಾಖೆಯ ನಾನಾ ಜವಾಬ್ದಾರಿಗಳನ್ನು ನಿರ್ವಹಿಸಿ ಇದೀಗ ಗುಪ್ತಚರ ವಿಭಾಗದಲ್ಲಿಹಿರಿಯ ಗುಪ್ತಚರ ಸಹಾಯಕರಾಗಿ, ಹವಾಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸೂಕ್ಷ್ಮ ಬೆಳವಣಿಗೆಗಳನ್ನು ಗಮನಿಸುವುದರಿಂದ ಹಿಡಿದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಷ್ಟ್ರೀಯ ನಾಯಕರ ಭದ್ರತಾ ತಂಡದ ಕೊಂಡಿಯಾಗಿದ್ದಾರೆ. ಅವರು ನೀಡಿದ ಮಾಹಿತಿಗಳು ಕಾನೂನು-ಸುವ್ಯವಸ್ಥೆ ಕಾಪಾಡಲು ಇಲಾಖೆಗೆ ನೆರವಾಗಿವೆ. ಕರ್ತವ್ಯ ದಕ್ಷತೆ ತೋರಿದ ಹಿನ್ನೆಲೆಯಲ್ಲಿ2021ರಲ್ಲಿಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. 2023ರ ವಿಧಾನಸಭೆ ಹಾಗೂ 2024ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿಗೋಕಾಕ ಘಟಕದಲ್ಲಿಕರ್ತವ್ಯ ನಿರ್ವಹಿಸಿದ ಬಡೇಸಗೋಳ ಅವರ ಕಾರ್ಯವನ್ನು ಹಿರಿಯ ಅಧಿಕಾರಿಗಳು ಗುರುತಿಸಿ, ಪ್ರಶಂಸಾ ಪತ್ರ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದ್ದಾರೆ.
*ಫೋಟೋ-20ರವಿಜಿ3
2022ರಲ್ಲಿಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜೇಂದ್ರ ಬಡೇಸಗೋಳ ಅವರಿಗೆ ಚಿನ್ನದ ಪದಕ ಪ್ರದಾನ ಮಾಡಿದ ಸಂದರ್ಭ.