ವರ್ಷದೊಳಗೆ ನೆಲಮಂಗಲಕ್ಕೆ ‘ಕಾವೇರಿ’

Contributed byvijaykumarhs9740@gmail.com|Vijaya Karnataka
kaveri water will be available to nelamangala in a year mla n srinivasas message
ವರ್ಷದೊಳಗೆ ನೆಲಮಂಗಲಕ್ಕೆ ‘ಕಾವೇರಿ’

ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿ ಚಾಲನೆ | ಶಾಸಕ ಎನ್ .ಶ್ರೀನಿವಾಸ್ ಹೇಳಿಕೆ
ವಿಕ ಸುದ್ದಿಲೋಕ ನೆಲಮಂಗಲ

ನಗರದ ಕುಡಿಯುವ ನೀರಿನ ಸಮಸ್ಯೆಗೆ ಕಾವೇರಿ ನೀರು ಪ್ರಮುಖ ಶಾಶ್ವತ ಪರಿಹಾರವಾಗಿದೆ. ಒಂದು ವರ್ಷದಲ್ಲಿಕಾವೇರಿ ನೀರು ತರುವ ಕೆಲಸ ಮಾಡಲಿದ್ದೇನೆ ಎಂದು ಶಾಸಕ ಎನ್ .ಶ್ರೀನಿವಾಸ್ ತಿಳಿಸಿದರು.

ನಗರ ಸಭೆ ವ್ಯಾಪ್ತಿಯ ಇಂದಿರಾನಗರದ ರಸ್ತೆ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ನಗರದಲ್ಲಿ ಕೊಳವೆ ಬಾವಿಯನ್ನು ಕೊರೆಸಿದರೂ ನೀರು ಸಿಗುತ್ತಿಲ್ಲ, ಈಗಗಾಲೇ 70ಕೊಳವೆ ಬಾವಿಯಲ್ಲಿನೀರಿಲ್ಲಎಂದು ತಿಳಿದುಬಂದಿದೆ. ತಾತ್ಕಾಲಿಕವಾಗಿ ಟ್ಯಾಂಕರ್ ಗಳಲ್ಲಿನೀರು ಕಳುಹಿಸುವ ಕೆಲಸ ಮಾಡಲು ತಿಳಿಸಲಾಗಿದ್ದು, ನೀರು ಸಿಗುವ ಬಡಾವಣೆಗಳಲ್ಲಿಕೊಳವೆ ಬಾವಿ ಕೊರೆಸಿ, ಆ ಭಾಗದಿಂದ ಪಕ್ಕದ ಬಡಾವಣೆಗಳಿಗೆ ತರುವ ಪ್ರಯತ್ನ ಮಾಡಲಾಗುತ್ತದೆ. ಮುಂದಿನ ಅವಧಿಯಲ್ಲಿಕಾವೇರಿ ನೀರು ಒದಗಿಸಲಾಗುತ್ತದೆ ಎಂದರು.

ಸಹಕರಿಸಿ:

ನಗರದಲ್ಲಿ ಒಳಚರಂಡಿ ಕಾಮಗಾರಿ ಶೀಘ್ರ್ರದಲ್ಲಿ ಆರಂಭವಾದರೆ, ರಸ್ತೆಗಳನ್ನು ಮತ್ತೆ ಕಿತ್ತು ಹಾಕಬೇಕು. ಆದ್ದರಿಂದ ತುಂಬ ಸಮಸ್ಯೆಯಾಗಿರುವ ರಸ್ತೆಗಳ ಅಭಿವೃದ್ಧಿ ಮಾಡಲಾಗುತ್ತದೆ. ಮೊದಲ ಆದ್ಯತೆ ಚರಂಡಿ ಅಭಿವೃದ್ಧಿಗೆ ನಗರಸಭೆಗೆ ಸೂಚಿಸಿದ್ದು, ಹಂತಹಂತವಾಗಿ ಎಲ್ಲಾಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.

ಇಂದಿರಾನಗರದ ಹಿರಿಯ ಮುಖಂಡ ಎನ್ .ಎಚ್ . ಜಯದೇವಯ್ಯ ಅವರ ಮನೆಗೆ ಭೇಟಿ ನೀಡಿ ನಗರದ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ ಮಾಡಿದರು.

ನಗರಸಭೆ ಅಧ್ಯಕ್ಷ ಎನ್ .ಗಣೇಶ್ , ಎನ್ ಪಿಎ ಅಧ್ಯಕ್ಷ ಎಂ.ಕೆ.ನಾಗರಾಜು, ಮಾಜಿ ಅಧ್ಯಕ್ಷ ನಾರಾಯಣಗೌಡ, ನಗರಸಭೆ ಪೌರಾಯುಕ್ತ ಗಂಗಾಧರ್ , ಸದಸ್ಯರಾದ ಸಿ.ಪ್ರದೀಪ್ , ಲೋಕಾಕ್ಷಿ, ಪೂರ್ಣಿಮಾ, ಆನಂದ್ , ಟಿಎಪಿಸಿಎಂಎಸ್ ಅಧ್ಯಕ್ಷ ಹನುಮಂತರಾಜು, ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಮುಖಂಡರಾದ ಕೆ.ಕೃಷ್ಣಪ್ಪ, ಗಂಗಾಧರ್ , ಮುನಿಯಪ್ಪ, ಅರ್ಜುನ್ , ರವಿಕುಮಾರ್ , ಸೋಮಶೇಖರ್ , ಮನು, ರಮೇಶ್ , ಮತ್ತಿತರರು ಉಪಸ್ಥಿತರಿದ್ದರು.

21ನೆಲಪಿಹೆಚ್ 3: ನೆಲಮಂಗಲ ನಗರದ ಇಂದಿರಾ ನಗರದಲ್ಲಿರಸ್ತೆ, ಚರಂಡಿ ಅಭಿವರದ್ಧಿ ಕಾಮಗಾರಿಗೆ ಶಾಸಕ ಎನ್ .ಶ್ರೀನಿವಾಸ್ ಚಾಲನೆ ನೀಡಿದರು.