ಕಾರ್ಕಳ ಮಾರ್ಕೆಟ್ ರಸ್ತೆ ಹೊಂಡಮಯ

Contributed byvkkarkala@gmail.com|Vijaya Karnataka
karkala market road potholes public outrage increasing
ವಿಕ ಸುದ್ದಿಲೋಕ ಕಾರ್ಕಳ

ಕಾರ್ಕಳ ಪುರಸಭೆಯ ವ್ಯಾಪ್ತಿಯ ಮಾರ್ಕೆಟ್ ರಸ್ತೆಯಲ್ಲಿಕಳಪೆ ಕಾಮಗಾರಿಯಿಂದ ರಸ್ತೆಯುದ್ದಕ್ಕೂ ಹೊಂಡಗಳು ನಿರ್ಮಾಣವಾಗಿದ್ದು, ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲಾ ಕಾಲೇಜು ವಿದ್ಯಾರ್ಥಿಗಳು ಕೂಡಾ ಅದೇ ಮಾರ್ಕೆಟ್ ರಸ್ತೆಯಲ್ಲಿನಡೆದುಕೊಂಡು ಹೋಗುತ್ತಾರೆ, ಜತೆಗೆ ವಾಹನ ಸವಾರರಿಗೆ ತುಂಬಾ ತೊಂದರೆಯಾಗಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳು ಎಚ್ಚೆತ್ತು ಕೂಡಲೇ ಗಮನ ಹರಿಸಬೇಕು ಎಂದು ಸ್ಥಳೀಯರಾದ ಗಣೇಶ್ ಕುಂದರ್ ಒತ್ತಾಯಿಸಿದ್ದಾರೆ.

ಮಾರುಕಟ್ಟೆ ಸ್ವಚ್ಚತೆ ಇಲ್ಲ...: ಮೀನು ಮಾರುಕಟ್ಟೆಯಲ್ಲಿವಾಹನ ಪಾಕಿಂರ್ ಗ್ ಸ್ಥಳ ಸ್ವಚ್ಛತೆ ಹಾಗೂ ನಿರ್ವಹಣೆಯಿಲ್ಲದೆ, ದುರ್ನಾತ ಬರುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತೆ ರಮಿತಾ ಸೂರ್ಯವಂಶಿ ತಿಳಿಸಿದ್ದಾರೆ. ಪುರಸಭೆ ಅಧಿಕಾರಿಗಳು ನಿದ್ರೆಯಿಂದ ಎಚ್ಚೆತ್ತುಕೊಂಡು ಮಾರುಕಟ್ಟೆಯಲ್ಲಿನಿರ್ಮಾಣಗೊಂಡ ಅವ್ಯವಸ್ಥೆಗಳನ್ನು ನೋಡಬೇಕಾಗಿದೆ. ಮಾರುಕಟ್ಟೆಯ ತ್ಯಾಜ್ಯ, ಕೊಳೆತ ಮೀನು, ಸರಿಯಾದ ಶೌಚಾಲಯ ವ್ಯವಸ್ಥೆಯಿಲ್ಲದೆ, ಅಲ್ಲೇ ಮೂತ್ರ ವಿಸರ್ಜನೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿಈ ಬಗ್ಗೆ ಗಮನ ಹರಿಸದಿದ್ದಲ್ಲಿಸಾರ್ವಜನಿಕರನ್ನು ಸೇರಿಸಿ ಪುರಸಭೆ ಮುತ್ತಿಗೆ ಹಾಕಬೇಕಾದಿತು ಎಂದು ಎಚ್ಚರಿಸಿದ್ದಾರೆ.

(ಫೊಟೋ:19ಕೆವಿ-ಆರ್ ಎಸ್ ಟಿ)