ಬೆಂಗಳೂರು: ರೈಲ್ವೆ ಪ್ರಯಾಣಿಕರಿಗೆ ಸುರಕ್ಷಿತ, ಉತ್ತಮ ಗುಣಮಟ್ಟದ ಅಡುಗೆ ಸೇವೆಗಳನ್ನು ಒದಗಿಸಲು ರೈಲ್ವೆ ಮಂಡಳಿಯ ನಿರ್ದೇಶನಗಳಿಗೆ ಅನುಗುಣವಾಗಿ ಎಲ್ಲಾವಿಭಾಗಗಳಲ್ಲೂ14 ದಿನಗಳ ಆಹಾರ ಸುರಕ್ಷತಾ ಅಭಿಯಾನ ಕೈಗೊಂಡಿರುವುದಾಗಿ ನೈಋುತ್ಯ ರೈಲ್ವೆ ತಿಳಿಸಿದೆ.
ಆಹಾರ ಸುರಕ್ಷತಾ ಇಲಾಖೆಯಿಂದ ರೈಲು ನಿಲ್ದಾಣಗಳಲ್ಲಿನಡೆದಿರುವ ದಾಳಿ ಸಂಬಂಧ ಪ್ರತಿಕ್ರಿಯೆ ನೀಡಿರುವ ನೈಋುತ್ಯ ರೈಲ್ವೆ ವಲಯ, ‘‘ಕಠಿಣ ಮೇಲ್ವಿಚಾರಣಾ ಕಾರ್ಯಾಚರಣೆ ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ ವಿಭಾಗಗಳಾದ್ಯಂತ 428 ಅಡುಗೆ ಸಂಸ್ಥೆಗಳಲ್ಲಿನಡೆಯಲಿದೆ. ಇಲ್ಲಿರುವ ಪ್ರಮುಖ 34 ಅಡುಗೆ ಘಟಕಗಳು, 272 ಸಣ್ಣ ಘಟಕ, 122 ಐಆರ್ ಸಿಟಿಸಿ ಘಟಕಗಳು, 38 ಪ್ಯಾಂಟ್ರಿ ಕಾರುಗಳು ಮತ್ತು ಪ್ರಮುಖ ಅಡುಗೆ ಮನೆಗಳನ್ನು ಒಳಗೊಂಡಿರಲಿದೆ,’’ ಎಂದು ಮಾಹಿತಿ ನೀಡಿದೆ.‘‘ಕಳೆದ ಹಣಕಾಸು ವರ್ಷ (2025-26)ದಲ್ಲಿರೈಲ್ವೆ ಆಹಾರ ಸುರಕ್ಷತೆ ಅಧಿಕಾರಿಗಳು 1,243 ತಪಾಸಣೆ ನಡೆಸಿದ್ದು, 129 ಸುಧಾರಣಾ ಸೂಚನೆಗಳನ್ನು ನೀಡಿದ್ದರು. 528 ಆಹಾರ ಮಾದರಿ ವಿಶ್ಲೇಷಿಸಲಾಗಿದ್ದು ಅವುಗಳಲ್ಲಿ512 ಅನರ್ಹ ಪ್ರಕರಣಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಅದೇ ರೀತಿ ಪ್ರಸಕ್ತ ಸಾಲಿನ ಜುಲೈವರೆಗೆ ನಿರಂತರ ಜಾಗೃತಿ ವಹಿಸಲಾಗಿದ್ದು, ರೈಲ್ವೆ ಆಹಾರ ಸುರಕ್ಷತೆ ಅಧಿಕಾರಿಗಳು ಈಗಾಗಲೇ 271 ತಪಾಸಣೆ ಕಾರ್ಯಾಚರಣೆ ನಡೆಸಿ, 29 ಸುಧಾರಣಾ ಸೂಚನೆ ನೀಡಿದ್ದೇವೆ. 170 ಆಹಾರ ಮಾದರಿ ಸಂಗ್ರಹಿಸಿ, ಅವುಗಳಲ್ಲಿ3 ಮಾದರಿ ಅನರ್ಹವೆಂದು ಕಂಡು ಬಂದಿತ್ತು. ಈ ವರ್ಷದ ಜುಲೈ ಅಂತ್ಯದ ವೇಳೆಗೆ ಹೆಚ್ಚುವರಿ 1,377 ತಪಾಸಣೆ ನಡೆಸಿ 64 ಸಾವಿರ ರೂ. ದಂಡ ವಿಧಿಸಲಾಗಿದೆ,’’ ಎಂದು ತಿಳಿಸಿದೆ.
ಇದಲ್ಲದೆ, ‘‘ಕಳೆದ ವರ್ಷ 4,373 ಅನಿರೀಕ್ಷಿತ ತಪಾಸಣೆ ನಡೆಸಿ 5.22 ಲಕ್ಷ ರೂ. ದಂಡ ವಿಧಿಸಲಾಗಿದೆ. ನೈಋುತ್ಯ ರೈಲ್ವೆಯು ಆಹಾರ ಸುರಕ್ಷತೆ ಮತ್ತು ನೈರ್ಮಲ್ಯದ ಅತ್ಯುನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಬದ್ಧವಾಗಿದೆ. ತನ್ನ ದೈನಂದಿನ ಕಾರ್ಯಾಚರಣೆಯ ಆದೇಶಗಳ ಭಾಗವಾಗಿ ನಿಗದಿತ ಮಾನದಂಡಗಳನ್ನು ಪೂರೈಸಲು ವಿಫಲವಾದ ಯಾವುದೇ ಮಾರಾಟಗಾರರ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳಲಿದ್ದೇವೆ,’’ ಎಂದು ನೈಋುತ್ಯ ರೈಲ್ವೆ ತಿಳಿಸಿದೆ.